ETV Bharat / bharat

ಸಮುದ್ರದಲ್ಲಿ ಮುಳುಗಿದ್ದ ಬಾಲಕಿಯನ್ನು ರಕ್ಷಿಸಿದ ಲೈಫ್ ‌ಗಾರ್ಡ್

ಸೂರಜ್ ಗಿರಾಪ್ ಎಂಬ ಜೀವರಕ್ಷಕ ಗೋವಾದ ಕೋಲ್ವಾ ಬೀಚ್‌ನಲ್ಲಿ ಮುಳುಗುತ್ತಿದ್ದ 16 ವರ್ಷದ ಬಾಲಕಿಯನ್ನು ರಕ್ಷಿಸಿದ್ದಾರೆ.

author img

By

Published : Nov 29, 2020, 9:53 AM IST

Teenage girl from Margao rescued at Colva beach in Goa
ಗೋವಾದಲ್ಲಿ ನೀರಿನಲ್ಲಿ ಮುಳುಗಿದ್ದ ಬಾಲಕಿಯನ್ನು ರಕ್ಷಿಸಿದ ಲೈಫ್‌ಗಾರ್ಡ್

ಪಣಜಿ (ಗೋವಾ): ಕೋಲ್ವಾ ಬೀಚ್‌ನಲ್ಲಿ ನೀರಿಗೆ ಬಿದ್ದಿದ್ದ ಮಾರ್ಗಾವ್ ಮೂಲದ 16 ವರ್ಷದ ಬಾಲಕಿಯನ್ನು ಲೈಫ್​ ಗಾರ್ಡ್ ಸೂರಜ್ ಗಿರಾಪ್ ರಕ್ಷಿಸಿದ್ದಾರೆ.

ಸಮುದ್ರ ತಟಕ್ಕೆ ಬರುವ ಪ್ರವಾಸಿಗರ ಸುರಕ್ಷತೆಗಾಗಿ ಗೋವಾ ಸರ್ಕಾರದ ಪ್ರವಾಸೋದ್ಯಮ ಇಲಾಖೆ ನಿಯೋಜಿಸಿರುವ ಏಜೆನ್ಸಿ ದೃಷ್ಟಿ ಲೈಫ್ ಸೇವರ್ಸ್​ನಲ್ಲಿ ಗಿರಾಪ್ ಕಾರ್ಯನಿರ್ವಹಿಸುತ್ತಿದ್ದಾರೆ. ಶನಿವಾರ ಮಧ್ಯಾಹ್ನ 16 ವರ್ಷದ ಬಾಲಕಿ ಕೆಲವರೊಂದಿಗೆ ಸಮುದ್ರ ತಟಕ್ಕೆ ಬಂದು ನೀರಿಗಿಳಿದಿದ್ದಳು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ ಬಾಲಕಿ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಇದೇ ವೇಳೆ ಸ್ಥಳದಲ್ಲಿದ್ದ ಲೈಫ್ ಸೇವರ್ ಸೂರಜ್ ಗಿರಾಪ್ ಕಾರ್ಯಪ್ರವೃತ್ತರಾಗಿ ಬಾಲಕಿಯ ಪ್ರಾಣ ಉಳಿಸಿದ್ದಾರೆ.

ದೃಷ್ಟಿ ಏಜೆನ್ಸಿಯ ಪ್ರಕಾರ, ನೀರಿಗೆ ಬಿದ್ದವರನ್ನು ಉಳಿಸಲು ಸಾಕಷ್ಟು ತಯಾರಿ ಮಾಡಿಕೊಂಡಿರುವುದು ಅಗತ್ಯ. ನೀರಿಗೆ ಇಳಿಯುವ ಮುನ್ನ ಸಾಕಷ್ಟು ನೀರು ಸೇವಿಸಿರಬೇಕು. ವಿಶೇಷವಾಗಿ ಬಿಸಿ ನೀರು ಸೇವಿಸುವುದು ಉತ್ತಮ, ಸುದೀರ್ಘವಾಗಿ ಈಜಲು ಹೋಗುವ ಮುನ್ನ ಸ್ನಾಯುಗಳನ್ನು ಸಡಿಲಗೊಳಿಸಿಕೊಂಡಿದ್ದರೆ ಈಜಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.