ಗುರುದಾಸ್‌ಪುರ (ಪಂಜಾಬ್): ಪಂಜಾಬ್‌ನ ನಕಲಿ ಅಂಕಪಟ್ಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಮತ್ತು ಹೈಕೋರ್ಟ್ ಮುತುವರ್ಜಿ ವಹಿಸಿದ ಹಿನ್ನೆಲೆ, ವಿಜಿಲೆನ್ಸ್ ಬ್ಯೂರೋ ಸಕ್ರಿಯವಾಗಿದೆ. ಅಕ್ಟೋಬರ್ 11 ರಂದು ವಿಜಿಲೆನ್ಸ್ ಶಿಫಾರಸಿನ ಮೇರೆಗೆ ಮಲೇರ್‌ಕೋಟ್ಲಾ ಪೊಲೀಸರು ಹೊಸ ಪ್ರಕರಣ ದಾಖಲಿಸಿದ್ದಾರೆ. 7 ಬೋಧಕರ ಹೆಸರು ಪ್ರಕರಣದಲ್ಲಿ ಸೇರಿದೆ. ಇದರೊಂದಿಗೆ, ಪಂಜಾಬ್‌ನ 19 ಜಿಲ್ಲೆಗಳ ಉಳಿದ ಶಿಕ್ಷಕರ ವಿರುದ್ಧ ಆಯಾ ಜಿಲ್ಲೆಗಳಲ್ಲಿ ನಕಲಿ ಪ್ರಮಾಣಪತ್ರಗಳ ಆಧಾರದ ಮೇಲೆ ಉದ್ಯೋಗ ಪಡೆದಿರುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಪಂಜಾಬ್ ಶಿಕ್ಷಣ ಇಲಾಖೆ ಮತ್ತು ವಿವಿಧ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಶಿಫಾರಸು ಮಾಡಿದೆ.
ವಿಜಿಲೆನ್ಸ್ ತನಿಖೆಯಲ್ಲಿ ಏನಿದೆ?: ಇದುವರೆಗಿನ ವಿಜಿಲೆನ್ಸ್ ತನಿಖೆಯಲ್ಲಿ 2009ರ ಆಗಸ್ಟ್ 11ರಿಂದ 2009ರ ಆಗಸ್ಟ್ 13ರವರೆಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಒಟ್ಟು 9 ಸಾವಿರದ 998 ಬೋಧಕ ಸಿಬ್ಬಂದಿ ನೇಮಕವಾಗಿರುವುದು ಬೆಳಕಿಗೆ ಬಂದಿದೆ. ಒದಗಿಸಿದ ದಾಖಲೆಗಳನ್ನು ವಿವಿಧ ಜಿಲ್ಲಾ ಮಟ್ಟದ ಸಮಿತಿಗಳು ಪರಿಶೀಲಿಸಿದ್ದವು. ನಕಲಿ ಪ್ರಮಾಣಪತ್ರಗಳ ಆಧಾರದ ಮೇಲೆ ಉದ್ಯೋಗ ಪಡೆದ ಅಭ್ಯರ್ಥಿಗಳನ್ನು ತೆಗೆದುಹಾಕುವ ಆದೇಶವನ್ನು ಅಂದಿನ ಶಿಕ್ಷಣ ಇಲಾಖೆಯ ಪ್ರಾಥಮಿಕ ನಿರ್ದೇಶಕ ಸಾಧು ಸಿಂಗ್ ರಾಂಧವಾ ಅವರು 2009ರ ಅಕ್ಟೋಬರ್ 19 ರಂದು ಹೊರಡಿಸಿದ್ದರು. ನಂತರ, ಉದ್ಯೋಗ ಕಳೆದುಕೊಂಡ ಅಭ್ಯರ್ಥಿಗಳು, ಈ ಕುರಿತು ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿದ್ದರು. ಸರಕಾರ ಶಿಕ್ಷಣ ಇಲಾಖೆ ನಿರ್ದೇಶಕರ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಿ ಈ ಅಭ್ಯರ್ಥಿಗಳ ಪರವಾಗಿ ವಾದ ಮಂಡಿಸಲು ಅವಕಾಶ ಕಲ್ಪಿಸಿತ್ತು.
ನಂತರ ಸಮಿತಿಯ ವರದಿಯ ಪ್ರಕಾರ ತೆಗೆದು ಹಾಕಲಾದ 583 ಅಭ್ಯರ್ಥಿಗಳ ಪೈಕಿ 457 ಮಂದಿಯ ಪ್ರಮಾಣಪತ್ರಗಳು ನಕಲಿ ಎಂದು ಕಂಡು ಬಂದಿದೆ. ಹೀಗಾಗಿ ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಲು ಅಂದು ತೀರ್ಮಾನಿಸಲಾಗಿತ್ತು. ಇದರ ವಿರುದ್ಧ ಈ ಅಭ್ಯರ್ಥಿಗಳು ಮತ್ತೆ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿದ್ದರು. ನಂತರ, 11 ಆಗಸ್ಟ್ 2010 ರಂದು, ಹೈಕೋರ್ಟ್ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು. ಬಳಿಕ, ಶಿಕ್ಷಣ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲವು ಅಭ್ಯರ್ಥಿಗಳ ವಿರುದ್ಧ ಬಟಿಂಡಾದಿಂದ 5, ಫಿರೋಜ್‌ಪುರದಿಂದ 3, ಹೋಶಿಯಾರ್‌ಪುರದಿಂದ 8, ಕಪುರ್ತಲಾ 7, ಲುಧಿಯಾನದಿಂದ 7, ಮುಕ್ತಸರ್ ಸಾಹಿಬ್‌ನಿಂದ 4, ಪಟಿಯಾಲದಿಂದ 4 ಸೇರಿದಂತೆ ಇನ್ನೂ ಕೆಲವು ಅಭ್ಯರ್ಥಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿತ್ತು. ಈ ಪ್ರಕರಣಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ.
ಹಗರಣದಲ್ಲಿ ಗುರುದಾಸ್‌ಪುರದ ಹಲವು ಶಿಕ್ಷಕರ ಹೆಸರು: ಜಿಲ್ಲೆಯ ಗುರುದಾಸ್‌ಪುರದ ಈ ಪಟ್ಟಿಯಲ್ಲಿ ಗರಿಷ್ಠ 54 ಅಭ್ಯರ್ಥಿಗಳು ಸೇರಿದ್ದಾರೆ. ಈ ಪೈಕಿ 26 ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರು ಅನುಮತಿ ನ್ಯಾಯಾಲಯಕ್ಕೆ ಕೋರಿದ್ದಾರೆ. ಪಂಜಾಬ್‌ನ ಎಲ್ಲ ಜಿಲ್ಲೆಗಳಲ್ಲಿ ಉಳಿದ ಅಭ್ಯರ್ಥಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಬೇಕು ಎಂದು ವಿಜಿಲೆನ್ಸ್ ಶಿಫಾರಸು ಮಾಡಿದೆ. ಹಗರಣದಲ್ಲಿ ಭಾಗಿಯಾದವರ ವಿರುದ್ಧ ಅಮೃತಸರ ಜಿಲ್ಲೆ- 48, ಬರ್ನಾಲೆ- 11, ಬಟಿಂಡಾ- 9, ಫರೀದ್‌ಕೋಟ್- 3, ಫತೇಘರ್ ಸಾಹಿಬ್- 8, ಫಿರೋಜ್‌ಪುರ- 4, ಜಲಂಧರ್- 9, ಕಪುರ್ತಲಾ- 3, ಮೊಗಾ- 27, ಮುಕ್ತಸರ್ ಸಾಹಿಬ್- 6, ಪಟಿಯಾಲ- 3, ಸಂಗ್ರೂರ್- 3 ಹಾಗೂ ಮೊಹಾಲಿ- 7, ಶಹೀದ್ ಭಗತ್ ಸಿಂಗ್ ನಗರ- 5 ಮತ್ತು ತರ್ನ್ ತರಣ್ ಪ್ರದೇಶದಲ್ಲಿ 19 ಪ್ರಕರಣಗಳನ್ನು ದಾಖಲಿಸಲು ಶಿಫಾರಸು ಮಾಡಲಾಗಿದೆ.
ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲು ಶಿಫಾರಸು: ನಕಲಿ ಅಂಕ ಪಟ್ಟಿ ಹಗರಣದಲ್ಲಿ ಭಾಗಿಯಾದ ಜಿಲ್ಲೆಯ ಗುರುದಾಸ್‌ಪುರದ 128 ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲು ಮತ್ತೊಮ್ಮೆ ಶಿಫಾರಸು ಮಾಡಲಾಗಿದೆ. ಈ ಪೈಕಿ 111 ಅಭ್ಯರ್ಥಿಗಳು ನಕಲಿ ಪ್ರಮಾಣಪತ್ರ, ನಾಲ್ವರು ಅಭ್ಯರ್ಥಿಗಳು ನಕಲಿ ಗ್ರಾಮೀಣ ಪ್ರದೇಶದ ಪ್ರಮಾಣ ಪತ್ರ ಮತ್ತು 13 ಅಭ್ಯರ್ಥಿಗಳು ಮೆರಿಟ್ ಅನ್ನು ತಿದ್ದಿದ್ದಾರೆ. ವಿಜಿಲೆನ್ಸ್ ಇಲಾಖೆಯು ಎಫ್‌ಐಆರ್‌ನೊಂದಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಅಭ್ಯರ್ಥಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ವಿವಿಧ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ಶಿಫಾರಸು ಮಾಡಿದೆ. ಈ ಬಗ್ಗೆ ಮಲೇರಕೋಟ್ಲಾ ಪೊಲೀಸರು ಕ್ರಮ ಕೈಗೊಂಡು, 7 ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಬಿಹಾರ ಜಾತಿ ಗಣತಿ: ತೃತೀಯಲಿಂಗಿಗಳ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್