ETV Bharat / bharat

ಇನ್ನರ್ ರಿಂಗ್ ರೋಡ್​ ಪ್ರಕರಣ : ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್​ಗೆ ಸಿಐಡಿ ನೊಟೀಸ್​

ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್​ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೊಟೀಸ್ ಜಾರಿ ಮಾಡಿದೆ.​

author img

By ETV Bharat Karnataka Team

Published : Sep 30, 2023, 11:05 PM IST

Etv Bharat
Etv Bharat

ನವದೆಹಲಿ : ಇನ್ನರ್​ ರಿಂಗ್​ ರೋಡ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟಿಡಿಪಿ ಅಧ್ಯಕ್ಷ , ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್​​ ಅವರಿಗೆ ಸಿಐಡಿ ನೊಟೀಸ್​ ಜಾರಿ ಮಾಡಿದೆ. ಈ ಸಂಬಂಧ ಸಿಐಡಿ ಅಧಿಕಾರಿಗಳು ನಾರಾ ಲೋಕೇಶ್ ಅವರು ವಾಸಿಸುತ್ತಿದ್ದ ಟಿಡಿಪಿ ಸಂಸದ ಗಲ್ಲ ಜಯದೇವ್​ ಮನೆಗೆ ಆಗಮಿಸಿದ್ದರು.

ಸಿಐಡಿಯು ಇನ್ನರ್​ ರಿಂಗ್​ ರೋಡ್​ ಪ್ರಕರಣದಲ್ಲಿ ನಾರಾ ಲೋಕೇಶ್​ ಅವರನ್ನು ಆರೋಪಿ ಎಂದು ಉಲ್ಲೇಖಿಸಿದೆ. ಈ ಸಂಬಂಧ ಸಿಐಡಿ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್​ ಅವರಿಗೆ ನೋಟೀಸ್​ ನೀಡಿದೆ. ಹಾಗಾಗಿ ನವದೆಹಲಿಯ 50 ಅಶೋಕ ರೋಡ್​ನಲ್ಲಿರುವ ಸಂಸದ ಗಲ್ಲ ಜಯದೇವ್​ ಮನೆಗೆ ಅಧಿಕಾರಿಗಳು ಆಗಮಿಸಿದ್ದರು. ಈ ವೇಳೆ, ನಾರಾ ಲೋಕೇಶ್ ಮನೆಯಲ್ಲಿ ಇರಲಿಲ್ಲ. ಹೀಗಾಗಿ ನಾರಾ ಲೋಕೇಶ್​ ಅವರಿಗೆ ವಾಟ್ಸ್​ಆ್ಯಪ್​​ ಮೂಲಕ ಸಿಐಡಿ ಅಧಿಕಾರಿಗಳು ನೊಟೀಸ್​ ನೀಡಿದ್ದಾರೆ. ಇದಕ್ಕೆ ನಾರಾ ಲೋಕೇಶ್ ​ಅವರು ಪೂರಕವಾಗಿ ಪ್ರತಿಕ್ರಿಯಿಸಿದ್ದಾರೆ.

ನೊಟೀಸ್​ನಲ್ಲಿ ಸಿಐಡಿ ಅಧಿಕಾರಿಗಳು, ಇನ್ನರ್​ ರಿಂಗ್ ರೋಡ್​ ಪ್ರಕರಣ ಸಂಬಂಧ ನಾರಾ ಲೋಕೇಶ್ ಅವರಿಗೆ ಅಕ್ಟೋಬರ್​ 4ರಂದು 10 ಗಂಟೆಗೆ ಸಿಐಡಿ ಕಚೇರಿಯಲ್ಲಿ ಹಾಜರಿರುವಂತೆ ಸೂಚಿಸಿದ್ದಾರೆ. ಇನ್ನರ್​ ರಿಂಗ್ ರೋಡ್​ ಪ್ರಕರಣ ಸಂಬಂಧ ನಾರಾ ಲೋಕೇಶ್​ ಅಕ್ಟೋಬರ್​ 4ರಂದು ಸಿಐಡಿ ಮುಂದೆ ತನಿಖೆಗೆ ಹಾಜರಾಗಲಿದ್ದಾರೆ. ಜೊತೆಗೆ ಸಿಐಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ಇನ್ನರ್​ ರಿಂಗ್ ರೋಡ್​ನ ನಿರ್ಮಾಣದಲ್ಲಿ ವಿವಿಧ ಬದಲಾವಣೆ ಮಾಡಿರುವ ಆರೋಪದ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ಕೆಲವು ಕಡೆಗಳಲ್ಲಿ ಭೂಮಿಯ ಬೆಲೆಗಳನ್ನು ಹೆಚ್ಚಿಸಲು ಟಿಡಿಪಿ ಆಡಳಿತಾವಧಿಯಲ್ಲಿ ರಸ್ತೆಯ ವಿನ್ಯಾಸವನ್ನು ದುರ್ಬಳಕೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂದರ್ಭದಲ್ಲಿ ನಾರಾ ಲೋಕೇಶ್​ ಅವರು ಸಚಿವರಾಗಿದ್ದು. ಈ ಸಂಬಂಧ ಆರೋಪಿಯನ್ನಾಗಿ ಮಾಡಲಾಗಿದೆ. ಕಳೆದ ಎರಡು ವಾರಗಳಿಂದ ದೆಹಲಿಯಲ್ಲಿ ನೆಲೆಸಿರುವ ಲೋಕೇಶ್ ಅವರಿಗೆ ಸಿಐಡಿ ವಿಚಾರಣೆಗೆ ಹಾಜರಾಗುವಂತೆ ನೊಟೀಸ್​ ನೀಡಿದೆ.

ಇದನ್ನೂ ಓದಿ : ನಾಳೆ ಚಿತ್ತೂರಿನ ಕುಪ್ಪನಿಂದ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್​ರ ಪಾದಯಾತ್ರೆ ಪ್ರಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.