ETV Bharat / bharat

ಗರಿಷ್ಠ ಮಟ್ಟ ತಲುಪಿ ದಾಖಲೆ ಬರೆದ TCS ಷೇರು ಬೆಲೆ: ಮಾರುಕಟ್ಟೆ ಬಂಡವಾಳ ಮೌಲ್ಯ 13 ಲಕ್ಷ ಕೋಟಿಗೆ ಏರಿಕೆ! - ಮಾರುಕಟ್ಟೆ ಬಂಡವಾಳ ಮೌಲ್ಯ

ಭಾರತದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮಾರುಕಟ್ಟೆ ಬಂಡವಾಳ ಮೌಲ್ಯ 13 ಲಕ್ಷ ಕೋಟಿ ರೂಗೆ ಏರಿಕೆ ಕಾಣುವ ಮೂಲಕ ಟಿಸಿಎಸ್ ಹೊಸ ದಾಖಲೆ ಸೃಷ್ಟಿಸಿದೆ. ರಿಲಯನ್ಸ್​​ ಇಂಡಸ್ಟ್ರೀಸ್​ ಬಳಿಕ 13 ಲಕ್ಷ ಕೋಟಿ ಬಂಡವಾಳ ಮೌಲ್ಯ ಹೊಂದಿದ 2ನೇ ಕಂಪನಿ ಎಂಬ ಹೆಗ್ಗಳಿಕೆ ಪಡೆದಿದೆ.

TCS
ಮಾರುಕಟ್ಟೆ ಬಂಡವಾಳ ಮೌಲ್ಯ 13 ಲಕ್ಷ ಕೋಟಿಗೆ ಏರಿಕೆ
author img

By

Published : Aug 17, 2021, 5:12 PM IST

ಮುಂಬೈ: ಭಾರತದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಷೇರು ಬೆಲೆ ಮಂಗಳವಾರ ಭಾರಿ ಏರಿಕೆ ಕಂಡಿದೆ. ಅಷ್ಟೇ ಅಲ್ಲ ಮಾರುಕಟ್ಟೆ ಬಂಡವಾಳ ಮೌಲ್ಯ 13 ಲಕ್ಷ ಕೋಟಿಗೆ ಏರಿಕೆ ಕಂಡು ದಾಖಲೆ ಬರೆದಿದೆ.

ಮಾರುಕಟ್ಟೆ ಬಂಡವಾಳದ ದೃಷ್ಟಿಯಿಂದ ಭಾರತದಲ್ಲಿನ ಎರಡನೇ ಅತಿ ದೊಡ್ಡ ಕಂಪನಿಯಾದ ಟಿಸಿಎಸ್​ ಷೇರು ಶೇ 1ಕ್ಕಿಂತ ಹೆಚ್ಚಿನ ವಹಿವಾಟು ನಡೆಸಿತು. ಮಂಗಳವಾರ ಆರಂಭದ ವಹಿವಾಟಿನಲ್ಲಿ ಬಿಎಸ್​ಇಯಲ್ಲಿ ಪ್ರತಿ ಷೇರಿಗೆ 3,518 ರೂಪಾಯಿಗೆ ಹೆಚ್ಚಿಸಿಕೊಂಡಿತು. ಆ ಮೂಲಕ ಟಿಸಿಎಸ್ ಮಾರುಕಟ್ಟೆ ಬಂಡವಾಳ ಮೌಲ್ಯ 13.71 ಲಕ್ಷ ಕೋಟಿ ದಾಟಿತು. ಈ ಮೂಲಕ ರಿಯಲಯ್ಸ್​​ ಇಂಡಸ್ಟ್ರೀ ಬಂಡವಾಳ ಮೌಲ್ಯವನ್ನ ಹಿಂದಿಕ್ಕಿ ಮುನ್ನುಗ್ಗಿತು. ಇಂದಿನ ವಹಿವಾಟಿನಲ್ಲಿ ನಿಫ್ಟಿ ಐ.ಟಿ. ಸೂಚ್ಯಂಕವು ಶೇ 1ಕ್ಕಿಂತ ಹೆಚ್ಚಿನ ಏರಿಕೆ ಕಂಡಿತು. ಟೆಕ್​ ಮಹೀಂದ್ರಾ, ಕೊಫೋರ್ಜ್, ಟಿಸಿಎಸ್​, ಮೈಂಡ್​ಟ್ರೀ, ಎಂಫಸಿಸ್ ಷೇರುಗಳ ಬೆಲೆಯಲ್ಲೂ ಏರಿಕೆ ಕಂಡುಬಂತು.

ಆದರೂ ಸಾಂಪ್ರದಾಯಿಕವಾಗಿ ಸಂಸ್ಥೆಗೆ ಅತ್ಯಲ್ಪ ಮಾರುಕಟ್ಟೆಯಾಗಿರುವ ಭಾರತದಲ್ಲಿಯೂ ಸಹ, ಚಟುವಟಿಕೆಯು ಕೆಲವು ಸುಧಾರಣೆಗಳ ಲಕ್ಷಣಗಳನ್ನು ತೋರಿಸುತ್ತಿದೆ ಮತ್ತು 2021-22ರ ಆರ್ಥಿಕ ವರ್ಷದ ಒಟ್ಟಾರೆ ಎರಡಂಕಿಯ ಆದಾಯ ಬೆಳವಣಿಗೆಯ ಅಂದಾಜನ್ನು ಪೂರೈಸುವ ವಿಶ್ವಾಸವನ್ನು ಹೊರಹಾಕಿತು.

ಸದ್ಯ ಐಟಿ ಪ್ರಮುಖ ಕಂಪನಿಗಳಾದ ಟಿಸಿಎಸ್ ಮತ್ತು ಇನ್ಫೋಸಿಸ್ ಮುಂಚೂಣಿಯಲ್ಲಿವೆ. 2021ರ ಜೂನ್ ಕೊನೆಗೆ ಟಿಸಿಎಸ್​ ವರದಿ ಮಾಡಿದಂತೆ, ನಿವ್ವಳ ಲಾಭ ಶೇ 28.5ರಷ್ಟು ಹೆಚ್ಚಳವಾಗಿ 9008 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 7008 ಕೋಟಿ ರೂಪಾಯಿ ಬಂದಿತ್ತು.

ಇನ್ನು ಕಾರ್ಯ ನಿರ್ವಹಣೆಯಿಂದ ಬಂದ ಆದಾಯ ಜೂನ್​ ತ್ರೈಮಾಸಿಕದಲ್ಲಿ ಶೇ 18.5ರಷ್ಟು ಏರಿಕೆ ಆಗಿ, ರೂ. 45,411 ಕೋಟಿಗೆ ಬೆಳವಣಿಗೆ ಕಂಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 38,322 ಕೋಟಿ ರೂ. ಆದಾಯ ಬಂದಿತ್ತು. ಡಾಲರ್ ಆದಾಯದಲ್ಲಿ ಕಳೆದ ವರ್ಷಕ್ಕಿಂತ ಶೇ 21.6ರಷ್ಟು ಹೆಚ್ಚಳವಾಗಿ, 6.15 ಬಿಲಿಯನ್ ಡಾಲರ್ ಮುಟ್ಟಿದೆ. ಅದಕ್ಕೆ ಪ್ರಮುಖವಾಗಿ ಸಹಾಯ ಮಾಡಿರುವುದು ಬ್ಯಾಂಕಿಂಗ್, ಫೈನಾನ್ಷಿಯಲ್ ಸೇವೆಗಳು ಮತ್ತು ಇನ್ಷೂರೆನ್ಸ್​ (BFSI) ಹಾಗೂ ರೀಟೇಲ್ ಗ್ರಾಹಕರು ನೀಡಿದ ಹೊಸ ಆರ್ಡರ್​ಗಳು.

ಸೆನ್ಸೆಕ್ಸ್ 210 ಅಂಕ ಜಿಗಿದು ಉತ್ತುಂಗಕ್ಕೇರಿದೆ:

ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 210 ಪಾಯಿಂಟ್‌ಗಳು ಅಥವಾ 0.38 ಶೇಕಡಾ ಏರಿಕೆಯಾಗಿ ಮಂಗಳವಾರ ಉತ್ತುಂಗಕ್ಕೇರಿ ಕೊನೆಗೊಂಡಿತು, ಸೂಚ್ಯಂಕ ಪ್ರಮುಖರಾದ ಇನ್ಫೋಸಿಸ್, ಟಿಸಿಎಸ್, ಎಚ್‌ಯುಎಲ್ ಮತ್ತು ಟೆಕ್ ಮಹೀಂದ್ರಾ ಷೇರುಗಳು ಲಾಭ ಮಾಡಿಕೊಂಡವು.

55,854.88 ಅಂಕಕ್ಕೆ ಏರುವ ಮೂಲಕ ಸೆನ್ಸೆಕ್ಸ್​​ ಜೀವಮಾನದ ಗರಿಷ್ಠ ಮಟ್ಟವನ್ನು ದಾಖಲಿಸಿತು. ನಂತರ, ಬಿಎಸ್​​​​ಸಿ ಟಾಪ್​ 30 ಷೇರುಗಳ ಸೂಚ್ಯಂಕ 55,792.27 ಕ್ಕೆ ಸ್ಥಿರವಾಯಿತು. NSE ನಿಫ್ಟಿ 51.55 ಪಾಯಿಂಟ್‌ಗಳು ಅಥವಾ 0.31 ಶೇಕಡಾದಷ್ಟು ಏರಿಕೆ ಕಾಣುವ ಮೂಲಕ 16,614.60 ಕ್ಕೆ ತಲುಪಿದೆ. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಟೆಕ್ ಮಹೀಂದ್ರಾ ಟಾಪ್ ಗೇನರ್ ಆಗಿದ್ದು, ಶೇಕಡಾ 3 ಕ್ಕಿಂತ ಹೆಚ್ಚಿನ ಲಾಭ ಮಾಡಿಕೊಂಡಿದೆ. ಟಿಸಿಎಸ್, ನೆಸ್ಲೆ ಇಂಡಿಯಾ, ಟೈಟಾನ್, ಇನ್ಫೋಸಿಸ್ ಮತ್ತು ಎಚ್‌ಯುಎಲ್ ನಂತರದ ಸ್ಥಾನದಲ್ಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.