ETV Bharat / bharat

Swine Flu: ಕೋವಿಡ್​, ಡೆಂಘೀ ಜೊತೆಗೆ ತಮಿಳುನಾಡಿಗೆ ಹಂದಿ ಜ್ವರದ ಭೀತಿ: 2 ಕೇಸ್​ ಪತ್ತೆ

author img

By

Published : Nov 16, 2021, 2:17 PM IST

ತಮಿಳುನಾಡಿನ ಕೊಯಮತ್ತೂರಿನಲ್ಲಿ ಎರಡು ಹಂದಿ ಜ್ವರ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರನ್ನು ಪೀಲಮೇಡುವಿನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಂದಿ ಜ್ವರ
ಹಂದಿ ಜ್ವರ

ಕೊಯಮತ್ತೂರು (ತಮಿಳುನಾಡು): ಈಗಾಗಲೇ ಕೊರೊನಾ ಹಾಗೂ ಡೆಂಘೀ ವಿರುದ್ಧ ಹೋರಾಡುತ್ತಿರುವ ತಮಿಳುನಾಡಿಗೆ ಹಂದಿ ಜ್ವರದ ಭೀತಿ ಎದುರಾಗಿದೆ. ಕೊಯಿಮತ್ತೂರಿನಲ್ಲಿ ಎರಡು ಹಂದಿ ಜ್ವರ (Swine Flu cases in Coimbatore) ಅಥವಾ ಹೆಚ್​1ಎನ್​1 (H1N1) ಪ್ರಕರಣಗಳು ಪತ್ತೆಯಾಗಿದೆ.

ಭಾನುವಾರ ಪೀಲಮೇಡು ಮೂಲದ 68 ವರ್ಷದ ವೃದ್ಧೆ ಮತ್ತು ಆರ್‌ಎಸ್ ಪುರಂನ 63 ವರ್ಷದ ವೃದ್ಧೆಗೆ ಹೆಚ್​1ಎನ್​1 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇಬ್ಬರನ್ನೂ ಪೀಲಮೇಡುವಿನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಬ್ಬರೂ ನಗರದ ಬೇರೆ ಬೇರೆ ಭಾಗಗಳಿಂದ ಬಂದವರಾಗಿದ್ದರಿಂದ ಇವರಿಬ್ಬರ ನಡುವೆ ಯಾವುದೇ ಸಂಪರ್ಕವಿಲ್ಲ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇವರಿಬ್ಬರು ಕೋವಿಡ್​-19 ಲಕ್ಷಣಗಳನ್ನು ಹೊಂದಿದ್ದರಿಂದ ಮೊದಲು ಇವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಕೋವಿಡ್​ ವರದಿ ನೆಗೆಟಿವ್​ ಬಂದಿತ್ತು. ಬಳಿಕ ಹೆಚ್​1ಎನ್​1 ಪರೀಕ್ಷೆ ನಡೆಸಲಾಗಿದೆ. ಸೋಂಕಿತರ ಸಂಪರ್ಕಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಟ್ಯಾಮಿಫ್ಲೂ ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

64 ವೈದ್ಯಕೀಯ ಶಿಬಿರ ಸ್ಥಾಪನೆ

ಕೋವಿಡ್ -19, ಡೆಂಘೀ ಮತ್ತು ಹಂದಿ ಜ್ವರದ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು 64 ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಿವೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಜಿಲ್ಲಾಡಳಿತ ಸಾರ್ವಜನಿಕರಿಗೆ ಆದೇಶ ನೀಡಿದೆ. ಜ್ವರ, ತಲೆ- ನೋವು ಮತ್ತು ಕೆಮ್ಮು ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ಜನರು ವೈದ್ಯಕೀಯ ಶಿಬಿರಗಳನ್ನು ಅಥವಾ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಬೇಕು ಎಂದು ಸೂಚಿಸಲಾಗಿದೆ.

ಹಂದಿ ಜ್ವರದ ಲಕ್ಷಣಗಳು (symptoms of swine flu)

ಇತರ ಜ್ವರದಂತೆಯೇ ಜ್ವರ, ಶೀತ, ಕೆಮ್ಮು, ಗಂಟಲು ನೋವು, ಮೂಗು ಕಟ್ಟಿಕೊಳ್ಳುವುದು, ಮೈ- ಕೈ ನೋವು, ಕಣ್ಣು ಉರಿ, ತಲೆನೋವು , ಆಯಾಸ, ಅತಿಸಾರ, ವಾಕರಿಕೆ ಮತ್ತು ವಾಂತಿ ಹಂದಿ ಜ್ವರದ ಲಕ್ಷಣಗಳಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.