ETV Bharat / bharat

ತಮಿಳುನಾಡಿನಲ್ಲೂ ಒಮಿಕ್ರಾನ್​ ರೂಪಾಂತರಿಯ ಕಾಟ: ಒಬ್ಬರಲ್ಲಿ BA -4 ವೇರಿಯಂಟ್​​ ಪತ್ತೆ - ಮೇ 4 ರಂದು ತಾಯಿ ಮತ್ತು ಅವರ ಮಗಳು ಕೋವಿಡ್​ ಟೆಸ್ಟ್​

ಮೇ 4 ರಂದು ತಾಯಿ ಮತ್ತು ಅವರ ಮಗಳು ಕೋವಿಡ್​ ಟೆಸ್ಟ್​ ಮಾಡಿಸಿಕೊಂಡಿದ್ದರು. ಈ ವೇಳೆ ನಡೆಸಿದ ಪರೀಕ್ಷೆ ವೇಳೆ ಒಮಿಕ್ರಾನ್​ BA- 4 ರೂಪಾಂತರ ಸೋಂಕು ಇರುವುದು ದೃಢಪಟ್ಟಿದೆ. ಇಬ್ಬರಿಗೂ ಎರಡು ಡೋಸ್​ ಹಾಕಲಾಗಿದೆ. ಆದರೂ ಒಬ್ಬರಲ್ಲಿ ಒಮಿಕ್ರಾನ್​ನ ರೂಪಾಂತರಿ ವೈರಸ್ ಪತ್ತೆಯಾಗಿದೆ.

ತಮಿಳುನಾಡಿನಲ್ಲೂ ಒಮಿಕ್ರಾನ್​ ರೂಪಾಂತರಿಯ ಕಾಟ: ಒಬ್ಬರಲ್ಲಿ ಒಮಿಕ್ರಾನ್​ BA -4 ವೇರಿಯಂಟ್​​ ಪತ್ತೆ

author img

By

Published : May 21, 2022, 9:29 PM IST

ಚೆನ್ನೈ: ನಿನ್ನೆ ತೆಲಂಗಾಣದಲ್ಲಿ ಒಮಿಕ್ರಾನ್​ ಬಿಎ-4 ರೂಪಾಂತರಿ​ ಪತ್ತೆಯಾಗಿತ್ತು. ಇಂದು ತಮಿಳುನಾಡಿನಲ್ಲಿ ಒಮಿಕ್ರಾನ್‌ನ ಬಿಎ-4 ಉಪ-ವೇರಿಯಂಟ್ ಪ್ರಕರಣ ವರದಿಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಸುಬ್ರಮಣಿಯನ್ ಹೇಳಿದ್ದಾರೆ. ಒಮಿಕ್ರಾನ್‌ನ ರೂಪಾಂತರಿ BA-4 ರ ಪ್ರಕರಣವು ಚೆನ್ನೈ ಬಳಿಯ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ದಾಖಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಈ ಕುಟುಂಬದಲ್ಲಿ ಎರಡು ಕೋವಿಡ್-19 ಪಾಸಿಟಿವ್ ಪ್ರಕರಣಗಳಿದ್ದವು. ಮೇ 4 ರಂದು ತಾಯಿ ಮತ್ತು ಅವರ ಮಗಳು ಕೋವಿಡ್​ ಟೆಸ್ಟ್​ ಮಾಡಿಸಿಕೊಂಡಿದ್ದರು. ಈ ವೇಳೆ, ನಡೆಸಿದ ಪರೀಕ್ಷೆ ವೇಳೆ ಒಮಿಕ್ರಾನ್​ BA- 4 ರೂಪಾಂತರ ಸೋಂಕು ಇರುವುದು ದೃಢಪಟ್ಟಿದೆ. ಇಬ್ಬರಿಗೂ ಎರಡು ಡೋಸ್​ ಹಾಕಲಾಗಿದೆ. ಆದರೂ ಒಬ್ಬರಲ್ಲಿ ಒಮಿಕ್ರಾನ್​ನ ರೂಪಾಂತರಿ ವೈರಸ್ ಪತ್ತೆಯಾಗಿದೆ.

ರೂಪಾಂತರದ ಮೊದಲ ಪ್ರಕರಣ ಮೇ. 9ರಂದು ಹೈದರಾಬಾದ್​​ನಲ್ಲಿ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಭಾರತೀಯ SARS Cov - 2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG) ಗುರುವಾರ ಈ ವೈರಸ್​ ಇರುವುದನ್ನು ಬಹಿರಂಗಪಡಿಸಿತ್ತು.

ಇದನ್ನೂ ಓದಿ: ಕೇಳಿದಷ್ಟು ಹಣ ನೀಡದಕ್ಕೆ ಮಹಿಳೆ ಮೇಲೆ ಲಾರಿ ಹರಿಸಿ ಕೊಂದ ಕಿರಾತಕ ಡ್ರೈವರ್‌!

ಮೆಡಿಕಲ್​ ರಿಸರ್ಚ್​ ಕೌನ್ಸಿಲ್ ಆಫ್ ಇಂಡಿಯಾದ ವಿಜ್ಞಾನಿಯೊಬ್ಬರು ದಕ್ಷಿಣ ಆಫ್ರಿಕಾದಿಂದ ಹೈದರಾಬಾದ್​ಗೆ ವಾಪಸ್​ ಆಗಿದ್ದು, ಇವರಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್​ ಹಬ್ಬಲು ಕಾರಣವಾಗಿರುವ ಓಮಿಕ್ರಾನ್ ಉಪ ತಳಿಗಳ ಪೈಕಿ BA.4 ಕೂಡ ಒಂದಾಗಿದೆ. ಭಾರತದಲ್ಲಿ ಕೋವಿಡ್​ ಲಸಿಕೆ ಹೆಚ್ಚಿನ ಸಂಖ್ಯೆಯಲ್ಲಿ ಹಾಕಿರುವ ಕಾರಣ ಈ ರೂಪಾಂತರಿ ಹರಡುವ ಸಾಧ್ಯತೆ ತೀರಾ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ;ಭಾರತಕ್ಕೂ ಲಗ್ಗೆ ಹಾಕಿದ ಓಮಿಕ್ರಾನ್​ BA.4.. ಹೈದರಾಬಾದ್​​ನಲ್ಲಿ ಮೊದಲ ಕೇಸ್ ಪತ್ತೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.