ಚೆನ್ನೈ (ತಮಿಳುನಾಡು): ತಮಿಳುನಾಡಿನಲ್ಲಿ ಮಳೆ ಪ್ರವಾಹ ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಹಲವು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಎಂ.ಕೆ. ಸ್ಟಾಲಿನ್ ಭೇಟಿ ನೀಡುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸುತ್ತಿದ್ದಾರೆ.
ಇದೇ ರೀತಿ ಮಳೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ವೇಳೆ ನವ ವಿವಾಹಿತರ ಭೇಟಿಯಾಗಿ ದಂಪತಿಗೆ ಅಚ್ಚರಿ ಮೂಡಿಸಿದ್ದಾರೆ. ಇಲ್ಲಿನ ಇಬಿ ಜಂಕ್ಷನ್ನ ಕನ್ನಡಾಸನ್ ನಗರದ ಬಳಿ ತೆರಳುವ ವೇಳೆ ಮಾರ್ಗಮಧ್ಯೆ ನವದಂಪತಿಯ ಕಂಡು ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಸ್ಟಾಲಿನ್ ಈ ಅನಿರೀಕ್ಷಿತ ಭೇಟಿಯಿಂದ ಮದುವೆ ಮನೆಯಲ್ಲಿದ್ದವರು ಒಮ್ಮೆ ಆಶ್ಚರ್ಯಕ್ಕೊಳಗಾಗಿದ್ದಾರೆ. ಬಳಿಕ ಸಿಎಂ ನವ ದಂಪತಿ ಜೊತೆ ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಈ ವೇಳೆ ಸಿಎಂ ಭೇಟಿ ನೀಡಿದ್ದ ವಿಷಯ ತಿಳಿದು ನೂರಾರು ಮಂದಿ ಸ್ಥಳಕ್ಕಾಗಮಿಸಿ ಫೋಟೊ ಕ್ಲಿಕ್ಕಿಸಲು ಮುಗಿಬಿದ್ದರು. ನವ ದಂಪತಿಯೂ ಸಹ ಫೋಟೊ ತೆಗೆಸಿಕೊಂಡು ಕಾಲಿಗೆ ನಮಿಸಿ ಆಶೀರ್ವಾದ ಪಡೆದರು. ಇದಾದ ಬಳಿಕ ಸ್ಟಾಲಿನ್ ಮಳೆ ಪೀಡಿತ ಪ್ರದೇಶಗಳಾದ ರಾಯಪುರಂ, ಆರ್ಕೆ ನಗರ, ಪೆರಂಬೂರು ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದರಲ್ಲದೆ, ಸಂತ್ರಸ್ತರ ಅಹವಾಲು ಆಲಿಸಿ ವೈದ್ಯಕೀಯ ಮತ್ತು ಆಹಾರದ ಸಾಮಗ್ರಿ ನೀಡಿ ತೆರಳಿದರು.
ಇದನ್ನೂ ಓದಿ: Cruise Drugs Case: ಪಾರ್ಟಿ ನಡೆದ ಸ್ಥಳಕ್ಕೆ NCB SIT ಭೇಟಿ, 7 ಮಂದಿಗೆ ಸಮನ್ಸ್