ETV Bharat / bharat

Swarnim Vijay Varsh: ವಿಜಯದ ಜ್ಯೋತಿ ಸ್ವೀಕರಿಸಿದ ನಿವೃತ್ತ ಮಾರ್ಷಲ್​ ಸಿ.ವಿ. ಪಾರ್ಕರ್ - ಬಾಂಗ್ಲಾದೇಶ

ಸ್ವರ್ಣೀಮ್ ವಿಜಯ್​ ವರ್ಷ್ ಭಾಗವಾಗಿ ಏರ್ ವೈಸ್​ನ ನಿವೃತ್ತ ಮಾರ್ಷಲ್​ ಸಿ.ವಿ. ಪಾರ್ಕರ್ ವಿಜಯದ ಜ್ಯೋತಿಯನ್ನು ಸ್ವೀಕರಿಸಿದ್ದಾರೆ.

ಇಂಡೋ-ಪಾಕ್
ಇಂಡೋ-ಪಾಕ್
author img

By

Published : Sep 12, 2021, 10:19 AM IST

ಹೈದರಾಬಾದ್: 1971 ರ ಇಂಡೋ-ಪಾಕ್ ಯುದ್ಧ(Indo-Pak War-1971)ದಲ್ಲಿ ಭಾರತ ಜಯಗಳಿಸಿ ಡಿಸೆಂಬರ್ 16 ಕ್ಕೆ 50 ವರ್ಷಗಳು ಪೂರೈಸಲಿವೆ. ಇದರ ಭಾಗವಾಗಿ ಸ್ವರ್ಣೀಮ್​ ವಿಜಯ್​ ವರ್ಷ ಆಚರಿಸಲಾಗುತ್ತದೆ.

ಹಕಿಂಪೇಟ್​​​ನ ಏರ್​ಫೋರ್ಸ್​​ ಸ್ಟೇಷನ್​​ಗೆ ವಿಜಯದ ಜ್ಯೋತಿ ಆಗಮಿಸಿದ್ದು, ಇದನ್ನು ಏರ್ ಕಮಾಂಡರ್ ಎಎಸ್​ ಮಿನ್ಹಾಸ್, ಏರ್ ವೈಸ್​ನ ನಿವೃತ್ತ ಮಾರ್ಷಲ್​ ಸಿ.ವಿ. ಪಾರ್ಕರ್ ಸ್ವೀಕರಿಸಿದ್ದಾರೆ.

ಈ ವೇಳೆ ಮಾತನಾಡಿದ ಪಾರ್ಕರ್​​, 1971 ರಲ್ಲಿ ನಡೆದ ಯುದ್ಧದಲ್ಲಿ ಅವರ ಹೋರಾಟವನ್ನು ನೆನಪಿಸಿಕೊಂಡರು. 50 ವರ್ಷಗಳ ಹಿಂದೆ ಯುದ್ಧದಲ್ಲಿ ಜಯಗಳಿಸಿದ ಆ ದಿನ ತುಂಬಾ ಭಾವನಾತ್ಮಕವಾಗಿ ಕೂಡಿತ್ತು. ಇಂದು ಆ ಘಟನೆಗಳನ್ನು ನೆನಪಿಸಿಕೊಳ್ಳುವ ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದಗಳು ಎಂದರು.

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಡಿಸೆಂಬರ್ 16, 2020 ರಂದು ಪ್ರಧಾನಿ ಮೋದಿ ವಿಜಯದ ಜ್ಯೋತಿ ಬೆಳಗಿಸುವ ಮೂಲಕ ಸ್ವರ್ಣೀಮ್​ ವಿಜಯ ವರ್ಷ ಆಚರಣೆಗೆ ಚಾಲನೆ ನೀಡಿದರು. ಅಂದಿನಿಂದ ದೇಶದ ಉದ್ದಗಲಕ್ಕೂ ವಿಜಯದ ಜ್ವಾಲೆ ಪಸರಿಸುತ್ತಿದೆ.

ಇದನ್ನೂ ಓದಿ: ಅಕ್ಟೋಬರ್ 6 ರಿಂದ ಅಯೋಧ್ಯೆ ರಾಮಲೀಲಾ ಕಾರ್ಯಕ್ರಮ ನೇರಪ್ರಸಾರ

1971 ರಲ್ಲಿ ಬಾಂಗ್ಲಾದೇಶವನ್ನು ಪಾಕ್​ನಿಂದ ಬೇರ್ಪಡಿಸಿದ ಡಿಸೆಂಬರ್ 16 ರನ್ನು ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಭಾರತೀಯ ಸೇನೆಯ ಇತಿಹಾಸದಲ್ಲಿ ನಮ್ಮ ಸೈನಿಕರು ಕೈಗೊಂಡ ತ್ವರಿತ ನಿರ್ಧಾರದ ಪರಿಣಾಮವಾಗಿ ಬಾಂಗ್ಲಾ ಎಂಬ ಹೊಸ ರಾಷ್ಟ್ರ ಉದ್ಭವಿಸಿತು. 1971 ರಲ್ಲಿ ಪಾಕ್ ಸೋತ ನಂತರ ಅಂದಿನ ಸೇನಾ ಮುಖ್ಯಸ್ಥ ಜನರಲ್ ಅಮಿರ್ ಅಬ್ದುಲ್ಲಾ ಖಾನ್ ನಿಯಾಜಿ ತನ್ನ 93 ಸಾವಿರ ಸೈನಿಕರೊಂದಿಗೆ ಭಾರತಕ್ಕೆ ಶರಣಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.