ETV Bharat / bharat

ಕರ್ತವ್ಯದ ವೇಳೆ ಬಿಜೆಪಿ ಸೇರಿದ ಇಬ್ಬರು ಪೊಲೀಸ್​ ಸಿಬ್ಬಂದಿ ಅಮಾನತು

author img

By ETV Bharat Karnataka Team

Published : Jan 4, 2024, 3:19 PM IST

ಯುನಿಫಾರಂನಲ್ಲಿದ್ದ ಕಾರ್ತಿಕೇಯನ್​ ಮತ್ತು ರಾಜೇಂದ್ರನ್​ ಮಿಸ್ಡ್​​ಕಾಲ್​​ ನೀಡಿ ಬಿಜೆಪಿ ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದು ದೃಢಪಟ್ಟ ಹಿನ್ನೆಲೆ ಇಲಾಖೆ ಅಮಾನತು ಮಾಡಿದೆ.

Suspension of two policemen for Joining BJP While on Duty

ಚೆನ್ನೈ: ಪೊಲೀಸ್​​ ಕರ್ತವ್ಯ ನಿರ್ವಹಣೆ ವೇಳೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದ ಇಬ್ಬರು ಪೊಲೀಸರನ್ನು ತಮಿಳುನಾಡು ಪೊಲೀಸ್​ ಇಲಾಖೆ ಅಮಾನತು ಮಾಡಿದೆ. ವಿಶೇಷ ಸಬ್​ ಇನ್ಸ್​ಪೆಕ್ಟರ್​ ಕಾರ್ತಿಕೇಯನ್​ ಮತ್ತು ಸಬ್​​ ಇನ್ಸ್​ಪೆಕ್ಟರ್​ ರಾಜೇಂದ್ರನ್​ ಅಮಾನತುಗೊಂಡಿರುವ ಅಧಿಕಾರಿಗಳು.

ಕಳೆದ ಡಿಸೆಂಬರ್​​ 27ರಂದು ಬಿಜೆಪಿ ರಾಜ್ಯಾಧ್ಯಕ್ಷೆ ಕೆ ಅಣ್ಣಾಮಲೈ ನೇತೃತ್ವದಲ್ಲಿನ ಕರಾವಳಿ ಜಿಲ್ಲೆ ನಾಗಪಟ್ಟಿನಂನಲ್ಲಿ ಬಿಜೆಪಿ ರೋಡ್​ ಶೋ ನಡೆಸುತ್ತಿತ್ತು. ಎನ್​ ಮನ್​ ಎನ್​ ಮಕ್ಕಳು (ನನ್ನ ಭೂಮಿ, ನನ್ನ ಜನರು) ರೋಡ್​ ಶೋಗೆ ಬಂದೋಬಸ್ತ್​​ನಲ್ಲಿ ಈ ಇಬ್ಬರೂ ಅಧಿಕಾರಿಗಳು ಕೂಡ ಕರ್ತವ್ಯ ನಿರ್ವಹಿಸುತ್ತಿದ್ದರು. ಅಯುರಿತಿದಳ್​ ಎಂಬ ಸಣ್ಣ ಊರಿನಲ್ಲಿ ಈ ಸಂದರ್ಭದಲ್ಲಿ ಪಕ್ಷಕ್ಕೆ ಹೊಸ ಸದಸ್ಯರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಇಲ್ಲಿ ಸಾಮಾನ್ಯ ಜನರಿಗೆ ಮೊಬೈಲ್​ ನಂಬರ್​​ಗೆ ಮಿಸ್ಡ್​​ಕಾಲ್​ ಮಾಡಿ ಬಿಜೆಪಿಗೆ ಸೇರುವ ಅವಕಾಶ ನೀಡಲಾಗಿತ್ತು. ಈ ವೇಳೆ ಯುನಿಫಾರಂನಲ್ಲಿದ್ದ ಕಾರ್ತಿಕೇಯನ್​ ಮತ್ತು ರಾಜೇಂದ್ರನ್​ ಮಿಸ್ಡ್​​ಕಾಲ್​​ ಮಾಡಿ ಬಿಜೆಪಿ ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ಇಲಾಖೆಯ ಸೇವಾ ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆ ಅವರಿಬ್ಬರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ನಾಗಪಟ್ಟಿನಂ ಜಿಲ್ಲೆಯ ಹಿರಿಯ ಪೊಲೀಸ್​ ಅಧಿಕಾರಿಗಳು ಮಾತನಾಡಿ, ಇದು ಸೇವಾ ನಿಯಮದ ಸಂಪೂರ್ಣ ಉಲ್ಲಂಘನೆಯಾಗಿದೆ. ಪೊಲೀಸರು ನಡೆಸಿರುವ ಈ ನೋಂದಣಿ ಪ್ರಕ್ರಿಯೆಯ ಕ್ಯಾಮರಾದಲ್ಲಿ ದಾಖಲಾಗಿದ್ದು, ಇದರಲ್ಲಿ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂಬುದು ಸಾಕ್ಷಿ ಸಿಕ್ಕಿದೆ ಎಂದಿದ್ದಾರೆ.

ಈ ಸಂಬಂಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಪ್ರಾಥಮಿಕ ತನಿಖೆಯನ್ನು ಅದೇ ದಿನ ನಾಗಪಟ್ಟಿನಂನ ಜಿಲ್ಲಾ ಸೂಪರಿಂಟೆಂಡೆಂಟ್​​​ ಹರ್ಷ ಸಿಂಗ್​ ಮಾಡಿದ್ದಾರೆ. ಡಿಸೆಂಬರ್​ 28ರಂದು ಈ ಇಬ್ಬರೂ ಪೊಲೀಸರನ್ನು ಮೀಸಲು ಸೇನಾ ಘಟಕಕ್ಕೆ ವರ್ಗಾಯಿಸಲಾಗಿದೆ. ಇದರ ಜೊತೆಗೆ ನಡೆದ ತನಿಖೆಯಲ್ಲಿ ಅವರ ವಿರುದ್ಧ ಆರೋಪ ದೃಢಪಟ್ಟಿದೆ. ಈ ಹಿನ್ನೆಲೆ ತಂಜಾಬೂರು ವಲಯದ ಡಿಜಿಪಿ ಜಯಚಂದ್ರನ್​​ ಅವರನ್ನು ತಮಿಳುನಾಡು ಅಧೀನ ಪೊಲೀಸ್ ಅಧಿಕಾರಿಗಳು ನಿಯಮಗಳ ಅನುಸಾರ ಅಮಾನತು ಮಾಡಿದ್ದಾರೆ.

தமிழக காவல்துறை உயர் அதிகாரிகளுக்கு ஒரு முன்னாள் காவல்துறை அதிகாரியின் வேண்டுகோள். pic.twitter.com/LiQPryMeA9

— K.Annamalai (@annamalai_k) January 3, 2024 " class="align-text-top noRightClick twitterSection" data=" ">

ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಪೊಲೀಸ್​ ಅಧಿಕಾರಿಯಾಗಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಈ ಅಮಾನತಿನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನಾಗರಶೈಲಿಯಲ್ಲಿ ಕಣ್ಮನ ಸೆಳೆಯುವ ಅಯೋಧ್ಯೆಯ ಭವ್ಯ ರಾಮಮಂದಿರ: ಅದರ ವೈಶಿಷ್ಟ್ಯಗಳಿವು ಇಲ್ಲಿವೆ

  • தமிழக காவல்துறை உயர் அதிகாரிகளுக்கு ஒரு முன்னாள் காவல்துறை அதிகாரியின் வேண்டுகோள். pic.twitter.com/LiQPryMeA9

    — K.Annamalai (@annamalai_k) January 3, 2024 " class="align-text-top noRightClick twitterSection" data=" ">

ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಪೊಲೀಸ್​ ಅಧಿಕಾರಿಯಾಗಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಈ ಅಮಾನತಿನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನಾಗರಶೈಲಿಯಲ್ಲಿ ಕಣ್ಮನ ಸೆಳೆಯುವ ಅಯೋಧ್ಯೆಯ ಭವ್ಯ ರಾಮಮಂದಿರ: ಅದರ ವೈಶಿಷ್ಟ್ಯಗಳಿವು ಇಲ್ಲಿವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.