ETV Bharat / bharat

ನಟ ಸುಶಾಂತ್ ಸಿಂಗ್ ಡ್ರಗ್ಸ್​​ ಪ್ರಕರಣ: ದೀಪೇಶ್​ ಸಾವಂತ್​ನನ್ನು ಕೋರ್ಟ್​ ಮುಂದೆ ಹಾಜರುಪಡಿಸಿದ ಎನ್​ಸಿಬಿ

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮನೆಯ ಕೆಲಸದಾಳುನನ್ನು ಡ್ರಗ್ಸ್ ಪ್ರಕರಣದಲ್ಲಿ ಕಾನೂನುಬಾಹಿರವಾಗಿ ಬಂಧಿಸಲಾಗಿಲ್ಲ ಎಂದು ಎನ್‌ಸಿಬಿ ಬಾಂಬೆ ಹೈಕೋರ್ಟ್​ಗೆ ಹೇಳಿದೆ.

ಎನ್​ಸಿಬಿ
ಎನ್​ಸಿಬಿ
author img

By

Published : Nov 23, 2020, 7:41 PM IST

ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮನೆಯ ಕೆಲಸದವನಾದ ದೀಪೇಶ್​ ಸಾವಂತ್​​ನನ್ನು ಎನ್​ಸಿಬಿ ಅಧಿಕಾರಿಗಳು ಬಾಂಬೆ ಹೈಕೋರ್ಟ್​ ಮುಂದೆ ಸೋಮವಾರ ಹಾಜರುಪಡಿಸಿದ್ರು. ಅಲ್ಲದೇ ಕಾನೂನು ಬಾಹಿರವಾಗಿ ಬಂದಿಲ್ಲ ಎಂದು ಕೋರ್ಟ್​ಗೆ ಹೇಳಿದ್ದಾರೆ.

ಇವರನ್ನು ಕಾನೂನು ಪ್ರಕಾರವಾಗಿಯೇ ಡ್ರಗ್ಸ್​​ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸೆ.5ರಂದು ಬಂಧಿಸಲಾಗಿದೆ. ಇದರಲ್ಲಿ ಯಾವುದೂ ಕಾನೂನುಬಾಹಿರ ಇಲ್ಲ ಎಂದು ಹೆಚ್ಚುವರಿ ಸಾಲಿಸಿಟರ್​ ಜನರಲ್​ ಅನಿಲ್​ ಸಿಂಗ್​, ನ್ಯಾ.ಎಸ್​.ಎಸ್​.ಶಿಂಧೆ ಮತ್ತು ಎಂ.ಎಸ್. ಕಾರ್ನಿಕ್​ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದ್ರು.

ಅಕ್ಟೋಬರ್‌ನಲ್ಲಿ, ಸಾವಂತ್ ಅವರನ್ನು ಎನ್‌ಸಿಬಿ ಅಧಿಕಾರಿಗಳು ಕಾನೂನುಬಾಹಿರವಾಗಿ ಬಂಧಿಸಿದ್ದಾರೆ. ಅಲ್ಲದೇ 10 ಲಕ್ಷ ರೂ.ಗಳ ಪರಿಹಾರವನ್ನು ಕೋರಿದ್ದಾರೆ ಎಂದು ಸಲ್ಲಿಸಿದ್ದ ಅರ್ಜಿಗೆ ಎಎಸ್‌ಜಿ ಸಿಂಗ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಸೋಮವಾರ, ಸಾವಂತ್ ಅವರ ವಕೀಲರಾದ ಅಮೀರ್ ಕೊರಡಿಯಾ ಅವರು ಸಿಂಗ್​ ಅವರ ವಾದಕ್ಕೆ ಪ್ರತಿಯಾಗಿ ಉತ್ತರಿಸಿ, ಸೆಪ್ಟೆಂಬರ್ 4 ರಂದು ನಗರದ ತಮ್ಮ ಕಚೇರಿಯಿಂದ ಸಾವಂತ್ ಅವರನ್ನು ಬಂಧಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಂಗ್​ ಎನ್‌ಸಿಬಿ ಅವರು ಬಂಧಿಸಲು ವಾರೆಂಟ್​​ನನ್ನು ಹೊಂದಿದ್ದಾರೆ (ಸಾವಂತ್). ಹಾಗಾಗಿ ಅವರನ್ನು ಸೆಪ್ಟೆಂಬರ್ 5 ರಂದು ಬಂಧಿಸಿ ಎನ್‌ಸಿಬಿ ಕಚೇರಿಗೆ ಕರೆತರಲಾಯಿತು ಎಂದರು. ಕೊನೆಯಲ್ಲಿ ವಾದ-ಪ್ರತಿವಾದವನ್ನು ಆಲಿಸಿದ ಕೋರ್ಟ್ ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.