ನವದೆಹಲಿ: ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಅವರು ಇದೀಗ ಹೊಸದಾಗಿ ಪರಿಚಯಿಸಲಾದ ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿರ್ವಹಿಸಿದ ಮೊದಲ ಮಹಿಳಾ ಲೋಕೋ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತಿಹಾಸ ಸೃಷ್ಟಿಸಿರುವ ಸುರೇಖಾ ಯಾದವ್ ಅವರು ಕುರಿತು ಕೇಂದ್ರ ರೈಲ್ವೇ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಸೋಮವಾರ ಮುಂಬೈನ ಸೊಲ್ಲಾಪುರ ನಿಲ್ದಾಣ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲನ್ನು ಅವರು ಚಲಾಯಿಸಿದರು. ರೈಲು ನಿನ್ನೆ ಸರಿಯಾದ ಸಮಯಕ್ಕೆ ಸೊಲ್ಲಾಪುರ ನಿಲ್ದಾಣದಿಂದ ಹೊರಟು, ಆಗಮನದ ನಿಗದಿತ ಸಮಯಕ್ಕಿಂತ ಐದು ನಿಮಿಷಗಳ ಮೊದಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಅನ್ನು ತಲುಪಿದೆ.
ಸೆಂಟ್ರಲ್ ರೈಲ್ವೇ ಪ್ರಕಟಣೆಯ ಪ್ರಕಾರ, 450 - ಕಿಮೀ ದೂರದ ಪ್ರಯಾಣವನ್ನು ಪೂರ್ಣಗೊಳಿಸಿದ ಸುರೇಖಾ ಯಾದವ್ ಅವರನ್ನು CSMT ನ ಪ್ಲಾಟ್‌ಫಾರ್ಮ್ ಸಂಖ್ಯೆ 8 ರಲ್ಲಿ ಸನ್ಮಾನಿಸಲಾಯಿತು. ಸುರೇಖಾ ಯಾದವ್ ರೈಲು ಚಲಾಯಿಸಿರುವ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, "ವಂದೇ ಭಾರತ್ - ನಾರಿ ಶಕ್ತಿಯಿಂದ ನಡೆಸಲ್ಪಡುತ್ತಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್" ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
-
Vande Bharat - powered by Nari Shakti.
— Ashwini Vaishnaw (@AshwiniVaishnaw) March 13, 2023 " class="align-text-top noRightClick twitterSection" data="
Smt. Surekha Yadav, the first woman loco pilot of Vande Bharat Express. pic.twitter.com/MqVjpgm4EO
">Vande Bharat - powered by Nari Shakti.
— Ashwini Vaishnaw (@AshwiniVaishnaw) March 13, 2023
Smt. Surekha Yadav, the first woman loco pilot of Vande Bharat Express. pic.twitter.com/MqVjpgm4EOVande Bharat - powered by Nari Shakti.
— Ashwini Vaishnaw (@AshwiniVaishnaw) March 13, 2023
Smt. Surekha Yadav, the first woman loco pilot of Vande Bharat Express. pic.twitter.com/MqVjpgm4EO
"ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಲೋಕೋ ಪೈಲಟ್ ಆಗುವ ಮೂಲಕ ಸುರೇಖಾ ಯಾದವ್ ಕೇಂದ್ರ ರೈಲ್ವೆಯ ಕ್ಯಾಪ್‌ನಲ್ಲಿ ಮತ್ತೊಂದು ಗರಿಯನ್ನು ಮೂಡಿಸಿದ್ದಾರೆ" ಎಂದು ಕೇಂದ್ರ ರೈಲ್ವೆ ಹೇಳಿದೆ. ಸುರೇಖಾ ಯಾದವ್ ಅವರು ಈಗ ಮುಂಬೈ- ಪುಣೆ - ಸೋಲಾಪುರ ಮಾರ್ಗದಲ್ಲಿ ವಂದೇ ಭಾರತ್ ರೈಲನ್ನು ಚಲಾಯಿಸುತ್ತಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 2019ರಲ್ಲಿ ಪ್ರಾರಂಭಗೊಂಡಿದ್ದು, ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನವದೆಹಲಿ - ಕಾನ್ಪುರ - ಅಲಹಾಬಾದ್ - ವಾರಾಣಸಿ ಮಾರ್ಗದಲ್ಲಿ ಚಲಾಯಿಸಲಾಯಿತು. ಕಳೆದ ಫೆಬ್ರುವರಿಯಲ್ಲಿ ಸಹ ಪ್ರಧಾನಿ ನರೇಂದ್ರ ಮೋದಿ ಅವರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT)- ಸೊಲ್ಲಾಪುರದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪತಾಕೆ ಹಾರಿಸಿದ್ದರು.
ಪಶ್ಚಿಮ ಮಹಾರಾಷ್ಟ್ರದ ಸತಾರದವರಾದ ಸುರೇಖಾ ಯಾದವ್ ಅವರು 1998ರಲ್ಲಿ ಭಾರತದ ಮೊದಲ ಲೋಕೋ ಪೈಲಟ್ ಆದರು. ಲೋಕೋ ಪೈಲಟ್ ಆಗಿ ಅವರ ಸಾಧನೆಗೆ ಇದುವರೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ವಂದೇ ಭಾರತ್ ರೈಲನ್ನು ನಿರ್ವಹಿಸುವ ಅವಕಾಶವನ್ನು ನೀಡಿದ್ದಕ್ಕಾಗಿ ಸುರೇಖಾ ಯಾದವ್ ಕೃತಜ್ಞತೆ ವ್ಯಕ್ತಪಡಿಸಿದ್ದು, "ಆಧುನಿಕ ಯುಗ, ಅತ್ಯಾಧುನಿಕ ತಂತ್ರಜ್ಞಾನದ ವಂದೇ ಭಾರತ್ ರೈಲನ್ನು ಪೈಲಟ್ ಮಾಡುವ ಅವಕಾಶವನ್ನು ನೀಡಿದ್ದಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನ 8ರಂದು ಸೆಂಟ್ರಲ್ ರೈಲ್ವೇಯ ಪ್ರತಿಷ್ಠಿತ ಮುಂಬೈ- ಪುಣೆ ಡೆಕ್ಕನ್ ಕ್ವೀನ್ ಎಕ್ಸ್‌ಪ್ರೆಸ್ ಮತ್ತು ಸಿಎಸ್‌ಎಂಟಿ - ಕಲ್ಯಾಣ ಲೇಡೀಸ್ ವಿಶೇಷ ಸ್ಥಳೀಯ ರೈಲನ್ನು ಎಲ್ಲಾ ಮಹಿಳಾ ಸಿಬ್ಬಂದಿಯೊಂದಿಗೆ ಪ್ರಾರಂಭಿಸಿತ್ತು. ಆ ದಿನ ಸುರೇಖಾ ಯಾದವ್ ಅವರು ಸಹಾಯಕ ಲೋಕೋ ಪೈಲಟ್ ಆಗಿ ಸಯಾಲಿ ಸಾವರ್ಡೇಕರ್ ಅವರೊಂದಿಗೆ ಡೆಕ್ಕನ್ ಕ್ವೀನ್ ರೈಲನ್ನು ನಿರ್ವಹಿಸಿದರು.
ಸಿಎಸ್‌ಎಂಟಿ-ಸೋಲಾಪುರ ಮತ್ತು ಸಿಎಸ್‌ಎಂಟಿ-ಸಾಯಿನಗರ ಶಿರಡಿ ಮಾರ್ಗಗಳಲ್ಲಿ ಕೇಂದ್ರ ರೈಲ್ವೇ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸಿದ್ದು, ಇವುಗಳಿಗೆ 2023ರ ಫೆಬ್ರವರಿ 10 ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ಧ್ವಜವನ್ನು ತೋರಿಸಿದ್ದರು.
ಇದನ್ನೂ ಓದಿ: ನೋಡಿ: ಬೆಂಗಳೂರು-ಮೈಸೂರು ರಾಜರಾಣಿ ಎಕ್ಸ್‌ಪ್ರೆಸ್‌ನಲ್ಲಿ 'ರಾಣಿ'ಯರದ್ದೇ ಕಾರುಬಾರು!