ಸುಲ್ತಾನ್ಗಂಜ್(ಬಿಹಾರ): ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಇಬ್ಬರ ಪ್ರಾಣ ರಕ್ಷಣೆ ಮಾಡುವಲ್ಲಿ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬಿಹಾರದ ಸುಲ್ತಾನ್ಗಂಜ್ನ ಅಜ್ಗೈವಿನಾಥ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ.
ಅಜ್ಗೈವಿನಾಥ ದೇವಸ್ಥಾನಕ್ಕೆ ಬಂದಿದ್ದ ತಾಯಿ-ಮಗಳು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಈ ವೇಳೆ, ಮುಳುಗಲು ಪ್ರಾರಂಭಿಸಿದ್ದರಿಂದ ಪ್ರಾಣ ರಕ್ಷಣೆಗೋಸ್ಕರ ಕಿರುಚಾಡಿದ್ದಾರೆ. ತಕ್ಷಣವೇ ಅಲ್ಲಿಗೆ ಬಂದಿರುವ ಪೊಲೀಸ್ ಸಿಬ್ಬಂದಿ ನದಿಗೆ ಧುಮುಕಿ ಅವರನ್ನ ರಕ್ಷಿಸಿದ್ದಾರೆ.
ಇದನ್ನೂ ಓದಿರಿ: ಜಮ್ಮು- ಕಾಶ್ಮೀರದಲ್ಲಿ ಬಸ್ ಅಪಘಾತ: ಮೂವರು ಸಾವು, 10 ಮಂದಿಗೆ ಗಾಯ
ಬಿಹಾರದ ಭಾಗಲ್ಪುರ್ ಜಿಲ್ಲೆಯ ಸುಲ್ತಾನ್ಗಂಜ್ನ ಗಂಗಾ ನದಿ ದಡದ ಮೇಲೆ ಅಜ್ಗೈವಿನಾಥ ದೇವಸ್ಥಾನವಿದೆ. ಜುಲೈ 6ರಂದು ತಾಯಿ - ಮಗಳು ಇಲ್ಲಿಗೆ ಆಗಮಿಸಿ, ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಈ ವೇಳೆ, ಅವರು ಮುಳುಗಲು ಪ್ರಾರಂಭಿಸುತ್ತಿದ್ದಂತೆ ಕಿರುಚಾಡಿದ್ದಾರೆ. ಇದೀಗ ಅವರ ರಕ್ಷಣೆ ಮಾಡಲಾಗಿದ್ದು, ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಬ್ಕಾಕ್ ಡೆವಲಪ್ಮೆಂಟ್ ಅಧಿಕಾರಿ ಮನೋಜ್ ಮುರ್ಮು, ಸಿಒ ಶಂಭು ಶರಣ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಅಭಿನವ್ ಕುಮಾರ್ ದೇವಸ್ಥಾನದ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಘಟನೆ ನಡೆದಿದೆ.