ETV Bharat / bharat

ಸುಲ್ಲಿ ಡೀಲ್ಸ್‌ 'ಹರಾಜು' ಆ್ಯಪ್‌ ಸೃಷ್ಟಿಕರ್ತನ ಬಂಧಿಸಿದ ದೆಹಲಿ ವಿಶೇಷ ಪೊಲೀಸ್ - ದೆಹಲಿ ಪೊಲೀಸರ ವಿಶೇಷ ತಂಡ

'ಸುಲ್ಲಿ ಡೀಲ್ಸ್' ಆ್ಯಪ್ ಸೃಷ್ಟಿಕರ್ತ ಓಂಕಾರೇಶ್ವರ್ ಠಾಕೂರ್​ನನ್ನು ದೆಹಲಿ ಪೊಲೀಸರ ವಿಶೇಷ ತಂಡ ಇಂದೋರ್​ನಲ್ಲಿ ಬಂಧಿಸಿದೆ.

ಓಂಕಾರೇಶ್ವರ್ ಠಾಕೂರ್​
ಓಂಕಾರೇಶ್ವರ್ ಠಾಕೂರ್​
author img

By

Published : Jan 9, 2022, 10:41 AM IST

ನವದೆಹಲಿ: ಸುಲ್ಲಿ ಡೀಲ್ಸ್​ ಆ್ಯಪ್ ಸೃಷ್ಟಿಕರ್ತ ಹಾಗೂ ಪ್ರಕರಣದ ರೂವಾರಿ ಓಂಕಾರೇಶ್ವರ್ ಠಾಕೂರ್​ನನ್ನು ಇಂದೋರ್​ನಲ್ಲಿ ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿದೆ.

ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಒಪ್ಪಿಗೆಯಿಲ್ಲದೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದು ಹಾಗು ಆನ್‌ಲೈನ್‌ನಲ್ಲಿ ಹರಾಜು ಹಾಕುವುದು ಈ ಸುಲ್ಲಿ ಡೀಲ್ಸ್​ ಖದೀಮರ ಕೆಲಸವಾಗಿತ್ತು.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ 'ಸುಲ್ಲಿ ಡೀಲ್ಸ್' ಆ್ಯಪ್ ಸೃಷ್ಟಿಕರ್ತ ಓಂಕಾರೇಶ್ವರ್ ಠಾಕೂರ್​ನನ್ನು ಡಿಸಿಪಿ ಕೆಪಿಎಸ್ ಮಲ್ಹೋತ್ರಾ, ಐಎಫ್‌ಎಸ್‌ಒ ಹಾಗೂ ದೆಹಲಿ ಪೊಲೀಸರ ವಿಶೇಷ ತಂಡ ಕಾರ್ಯಚರಣೆ ನಡೆಸಿ ಹಡೆಮುರಿ ಕಟ್ಟಿದೆ.

ಕಳೆದ ಕೆಲ ದಿನಗಳ ಹಿಂದೆ ಸುಲ್ಲಿ ಡೀಲ್ಸ್ ರೀತಿಯೇ ಟ್ವಿಟರ್ ಹ್ಯಾಂಡಲ್​ನಲ್ಲಿ ಬುಲ್ಲಿ ಬಾಯಿ ಹೆಸರಿನಲ್ಲಿ ಖಾತೆ ಸೃಷ್ಟಿಸಿ ಮಹಿಳಾ ಪತ್ರಕರ್ತೆಯ ಚಿತ್ರಗಳನ್ನು ಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: Bulli Bai App Case: ನನ್ನ ಅಕ್ಕ ನಿರಪರಾಧಿ ಎಂದ ಆರೋಪಿ ಸಹೋದರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.