ನವದೆಹಲಿ: ಜಾನುವಾರು ಕಳ್ಳಸಾಗಣೆ ಪ್ರಕರಣ, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಟಿಎಂಸಿ ನಾಯಕ ಅನುಬ್ರತಾ ಮೊಂಡಲ್ ಪುತ್ರಿ ಸುಕನ್ಯಾ ಮೊಂಡಲ್ರನ್ನು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಿಚಾರಣೆಯ ನಂತರ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಸುಕನ್ಯಾ ಮೊಂಡಲ್ರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕಿ ಸುಕನ್ಯಾ ಮೊಂಡಲ್ ಅವರನ್ನು ಗುರುವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ. ಅಲ್ಲಿ ಇಡಿ ಆಕೆಯನ್ನು ಹೆಚ್ಚಿನ ವಿಚಾರಣೆ ಹಿನ್ನೆಲೆ, ಕಸ್ಟಡಿ ವಿಸ್ತರಿಸಲು ಕೋರಲಿದೆ. ಈ ಹಿಂದೆಯೂ ಆಕೆಯನ್ನು ಇಡಿ ಹಲವು ಬಾರಿ ವಿಚಾರಣೆಗೆ ಒಳಪಡಿಸಿತ್ತು.
ಇಡಿಯಿಂದ 32 ಆಸ್ತಿಗಳ ಜಪ್ತಿ: ಟಿಎಂಸಿಯ ಬಿರ್ಭೂಮ್ ಜಿಲ್ಲಾಧ್ಯಕ್ಷರಾದ ಅನುಬ್ರತಾ ಮೊಂಡಲ್ ಅವರನ್ನು ಜಾನುವಾರು ಕಳ್ಳಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಸಿಬಿಐ ಬಂಧಿಸಿತ್ತು. ಚಾರ್ಜ್ ಶೀಟ್‌ನಲ್ಲಿ ಆಕೆ ಹೆಸರಿರನ್ನು ಸೇರಿಸಲಾಗಿತ್ತು. ನಂತರ ಇಡಿ ಕೂಡ ಅವರನ್ನು ಬಂಧಿಸಿತ್ತು. ಡಿಸೆಂಬರ್‌ನಲ್ಲಿ ಅವರ ಮಾಜಿ ಅಂಗರಕ್ಷಕ ಹಾಗೂ ಆಪ್ತ ಸೆಹೆಗಲ್ ಹೊಸೈನ್‌ಗೆ ಸೇರಿದ 1.58 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 32 ಆಸ್ತಿಗಳನ್ನು ಇಡಿ ಜಪ್ತಿ ಮಾಡಿತು ಎಂದು ಇಡಿ ಹೇಳಿದೆ.
ಹೊಸೈನ್ ಅನುಬ್ರತಾ ಮೊಂಡಲ್ ಅವರ ನಿಕಟ ವಿಶ್ವಾಸಿ ಮತ್ತು ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಪೂರ್ಣ ಕಳ್ಳಸಾಗಣೆ ದಂಧೆಯ ಪ್ರಮುಖ ಸದಸ್ಯರಲ್ಲಿ ಒಬ್ಬರು ಎಂದು ಮೂಲಗಳು ಹೇಳಿವೆ. ಪ್ರಕರಣದ ಪ್ರಮುಖ ಆರೋಪಿ ಹೊಸೈನ್, ಇನಾಮುಲ್ ಹಕ್ ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಮಾಂಡೆಂಟ್ ಶ್ರೇಣಿಯ ಅಧಿಕಾರಿ (36 ನೇ ಬಿಎಸ್‌ಎಫ್ ಬೆಟಾಲಿಯನ್‌ನ) ಸತೀಶ್ ಕುಮಾರ್ ಅವರನ್ನೂ ಈ ಪ್ರಕರಣದಲ್ಲಿ ಇಡಿ ಬಂಧಿಸಿದೆ.
ಜಾನುವಾರು ಕಳ್ಳಸಾಗಣೆ ಪ್ರಕರಣ: ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ಭದ್ರತಾ ಗ್ರಿಡ್‌ನ ಭಾಗವಾಗಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತು ಮಾಲ್ಡಾ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದ ಸತೀಶ್ ಕುಮಾರ್ ಅವರನ್ನು ಈ ಹಿಂದೆ ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿತ್ತು. 2020ರ ಸೆಪ್ಟೆಂಬರ್‌ನಲ್ಲಿ ಸಿಬಿಐ ದೂರಿನನ್ವಯ ಇಡಿಯು ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಸಂಸ್ಥೆ(ಇಡಿ) ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಎರಡು ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದೆ. ಏಳು ತಾತ್ಕಾಲಿಕ ಅಟ್ಯಾಚ್‌ಮೆಂಟ್ ಆದೇಶಗಳ ಭಾಗವಾಗಿ 20.25 ಕೋಟಿ ರೂ. ಮೌಲ್ಯದ ಒಟ್ಟು ಆಸ್ತಿಯನ್ನು ಜಪ್ತಿ ಮಾಡಿದೆ.
ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ಹಗರಣ: ಅದರ ಚಾರ್ಜ್ ಶೀಟ್ ಅನ್ನು ಏಪ್ರಿಲ್‌ನಲ್ಲಿ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಹಕ್, ಟಿಎಂಸಿ ನಾಯಕ ವಿನಯ್ ಮಿಶ್ರಾ, ಅವರ ಸಹೋದರ ವಿಕಾಸ್ ಮಿಶ್ರಾ (ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಮತ್ತೊಂದು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿಯಿಂದ ಬಂಧಿಸಲಾಗಿದೆ.) ಜೊತೆಗೆ ಈ ವ್ಯಕ್ತಿಗಳಿಗೆ ಸಂಬಂಧಿಸಿದ ಕಂಪನಿಗಳು -ಹೋಕ್ ಇಂಡಸ್ಟ್ರೀಜ್ ಪ್ರೈ. ಲಿಮಿಟೆಡ್, ಹೋಕ್ ಮರ್ಕೆಂಟೈಲ್ ಪ್ರೈ. ಲಿಮಿಟೆಡ್ ಮತ್ತು ಅನಂತ್ ಟ್ರೇಡ್ಕಾಮ್ ಪ್ರೈ. ಲಿಮಿಟೆಡ್ ಪ್ರಕರಣದಲ್ಲಿ ಆರೋಪಿಯಾಗಿದ್ದರು. "ಈ ಪ್ರಕರಣದಲ್ಲಿ ಪತ್ತೆಯಾದ ಅಪರಾಧದ ಒಟ್ಟು ಆದಾಯವು ಇಲ್ಲಿಯವರೆಗೆ 29.43 ಕೋಟಿ ರೂಪಾಯಿಗಳು ಆಗಿದೆ" ಎಂದು ಇಡಿ ಹೇಳಿದೆ.
ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ ದೋಖಾ: ಭಾರತೀಯ ಮಹಿಳೆಯ ಸ್ನೇಹ ಬೆಳೆಸಿ 33 ಲಕ್ಷ ಹಣ ಪೀಕಿದ ಪಾಕಿಸ್ತಾನಿ!