ರಾಯ್‌ಪುರ(ಛತ್ತೀಸ್ಗಢ): ಮಾನಸಿಕ ಅಸ್ವಸ್ಥ ರೋಗಿಯೊಬ್ಬ ತಾನು ದಾಖಲಾದ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿ ಆಸ್ಪತ್ರೆಯ ಮುಂಭಾಗದ ಸ್ಕೈವಾಕ್ ಹತ್ತಿ ರಂಪಾಟ ಮಾಡಿದ್ದಾನೆ. ಈ ವೇಳೆ, ರಕ್ಷಣೆಗೆ ಹೋದಾಗ ಅಲ್ಲಿಂದ ಜಿಗಿದು ಗಾಯಗೊಂಡಿದ್ದಾನೆ.
ಛತ್ತೀಸ್ಗಢದ ರಾಯ್‌ಪುರ ಜಿಲ್ಲೆಯ ಅಂಬೇಡ್ಕರ್ ಆಸ್ಪತ್ರೆಯ ಮುಂಭಾಗ ಈ ಘಟನೆ ನಡೆದಿದೆ. ಮಾನಸಿಕ ರೋಗಿಯು ಮಧ್ಯಪ್ರದೇಶದ ಸುಜಿತ್ ಸಾಕೇತ್ ಎನ್ನಲಾಗಿದೆ. ಸುಜಿತ್ ಸಾಕೇತ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನಂತೆ. ಅಲ್ಲದೇ, ಇವರಿಗೆ ಮೂರ್ಛೆ ರೋಗ ಕೂಡ ಇದೆ. ಕೆಲ ದಿನಗಳ ಹಿಂದಷ್ಟೇ ಈತನನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಆರೋಪಿಸಿದ ಸುಜಿತ್ ಆಸ್ಪತ್ರೆ ಮುಂಭಾಗದ ಸ್ಕೈವಾಕ್ ಹತ್ತಿ ರಂಪಾಟ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೂ ಜಗ್ಗದ ಈ ವ್ಯಕ್ತಿ ಸ್ಕೈವಾಕ್ ಮೇಲಿಂದ ತಲೆಕೆಳಗಾಗಿ ನೇತಾಡಿ ಭೀತಿ ಉಂಟು ಮಾಡಿದ್ದ.
ಗಂಟೆಗಳ ಕಾಲ ಆತನ ಮನವೊಲಿಕೆಗೆ ಯತ್ನಿಸಿದ ವಿಫಲರಾದ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ಕರೆತಂದು ಆ ಯುವಕನ ರಕ್ಷಿಸಲು ಸ್ಕೈ ವಾಕ್ ಹತ್ತಿದ್ದಾರೆ. ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯುವಕ ಅಲ್ಲಿದ ಜಿಗಿದಿದ್ದಾನೆ. ಗಾಯಗೊಂಡ ಯುವಕನನ್ನು ತಕ್ಷಣ ಮೆಕಹರಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಯುವಕನಿಗೆ ಮೂರ್ಛೆ ರೋಗವಿದ್ದು, ಮಾನಸಿಕ ಸ್ಥಿತಿಯೂ ಸರಿಯಿಲ್ಲ ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ. ರೋಗದ ಚಿಕಿತ್ಸೆಗಾಗಿ ಬಂದಿದ್ದು, ಆತ ದಾಖಲಾದ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಓದಿ: ಉಕ್ರೇನ್ ಬೀದಿಗಳಲ್ಲಿ ನಾಗರಿಕರ ಶವಗಳು ಪತ್ತೆ: ರಷ್ಯಾ ವಿರುದ್ಧ ಹೆಚ್ಚಿದ ಆಕ್ರೋಶ