ಹೈದರಾಬಾದ್: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಬಿರುಗಾಳಿಯ ಆವರ್ತನ ಕಡಿಮೆಯಾಗುತ್ತಿದ್ದು, ಅರೇಬಿಯನ್ ಸಮುದ್ರದಲ್ಲಿ ಸೈಕ್ಲೋನ್ ಪ್ರಭಾವ ಹೆಚ್ಚುತ್ತಿರುವುದರ ಕುರಿತು 1965- 2020ರ ಅವಧಿಯಲ್ಲಿನ ಮಧ್ಯದಲ್ಲಿ ಕೈಗೊಂಡ ಅಧ್ಯಯನಗಳು ಬೆಳಕು ಚೆಲ್ಲಿವೆ. ಇದರಿಂದಾಗಿ ದೇಶದ ಯಾವ ಯಾವ ರಾಜ್ಯಗಳು ಅಪಾಯಕ್ಕೆ ಸಿಲುಕಲಿವೆ ಮತ್ತು ಇದರ ಪ್ರಭಾವ ಹೇಗಿದೆ? ಹಾಗೆಯೇ ಚಂಡಮಾರುತದ ಆವರ್ತನದ ಪ್ರಭಾವ ಹೆಚ್ಚಾಗುತ್ತಿದೆಯೇ ಅಥವಾ ಕಡಿಮೆಯಾಗುತ್ತಿದೆಯೇ ಎಂಬುದರ ಕುರಿತು ಮಾಹಿತಿಯನ್ನು ನೀಡಿದೆ.
ಚಂಡಮಾರುತಗಳ ಮೇಲಿನ ಅಧ್ಯಯನ
ವರ್ಷ | ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ರೂಪುಗೊಂಡ ಒಟ್ಟು ಚಂಡಮಾರುತಗಳ ಸಂಖ್ಯೆ | ಭಾರತೀಯ ಕರಾವಳಿಯಲ್ಲಿ ಭೂಕುಸಿತವನ್ನು ಉಂಟುಮಾಡಿದ ಚಂಡಮಾರುತಗಳ ಸಂಖ್ಯೆ | ಒಟ್ಟು ಸಾವಿನ ಸಂಖ್ಯೆ |
2020 | 5 | 4 | 113 |
2019 | 8 | 2 | 105 |
2018 | 7 | 3 | 131 |
2017 | 3 | 0 | * |
2016 | 4 | 1 | 6 |
ಈ ಹಿಂದೆ ಕಂಡುಬಂದಿದ್ದ ತೀವ್ರವಾದ "ಓಖಿ" ಚಂಡಮಾರುತ ಕರಾವಳಿಯನ್ನು ದಾಟಿಲ್ಲದಿದ್ದರೂ, ಸಮುದ್ರದಲ್ಲಿ ಸುಮಾರು 200 ಕ್ಕೂ ಹೆಚ್ಚು ಮೀನುಗಾರರ ಪ್ರಾಣವನ್ನು ಬಲಿ ತೆಗೆದುಕೊಂಡಿತ್ತು.
ಬಂಗಾಳಕೊಲ್ಲಿಯ ಸಮುದ್ರದ ಮೇಲೆ ಹೆಚ್ಚುತ್ತಿರುವ ಚಂಡಮಾರುತಗಳ ಪ್ರಭಾವದಿಂದ ಅಲ್ಲಿನ ಕರಾವಳಿ ಭಾಗಗಳು ಹೆಚ್ಚಿನ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿದ್ದರೂ, ಅಲ್ಲಿ ಕಂಡುಬರುವ ಚಂಡಮಾರುತಗಳ ಆವರ್ತನದ ಕುರಿತು ಸ್ಥಿರವಾದ ಮಾಹಿತಿಗಳು ಲಭ್ಯವಿಲ್ಲ. ಅದರಂತೆಯೇ, ಅರೇಬಿಯನ್ ಸಮುದ್ರದ ಮೇಲೆ ಹೆಚ್ಚುತ್ತಿರುವ ಚಂಡಮಾರುತದ ಆವರ್ತನಗಳು ಅಲ್ಲಿನ ಪಶ್ಚಿಮ ಕರಾವಳಿ ಭಾಗಕ್ಕೆ ಅಪಾಯವನ್ನು ತರುವ ಬದಲಾಗಿ ಅವು ಪಶ್ಚಿಮ ರಾಷ್ಟ್ರಗಳಾದ ಒಮನ್, ಯೆಮೆನ್ಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತಿವೆ. ಆದ್ದರಿಂದ, ಗುಜರಾತ್ ಮತ್ತು ಮಹಾರಾಷ್ಟ್ರ ಕರಾವಳಿ ಭಾಗಕ್ಕೆ ಅಪಾಯವಿದೆ ಎನ್ನಲಾಗಿದೆ.
ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರವನ್ನು ಒಳಗೊಂಡಂತೆ ಉತ್ತರ ಹಿಂದೂ ಮಹಾಸಾಗರದಲ್ಲಿ (ಎನ್‌ಐಒ) ಕಂಡುಬಂದಿರುವ 5 ಪ್ರಭಾವಿ ಚಂಡಮಾರುತಗಳಲ್ಲಿ, ಸುಮಾರು 3 ರಿಂದ 4 ಭೂಕುಸಿತಗಳು ಸಂಭವಿಸಿ ಅಪಾರ ಪ್ರಮಾಣದ ಜೀವ ಮತ್ತು ಆಸ್ತಿ-ಪಾಸ್ತಿಗಳು ಹಾನಿಗೊಳಗಾಗಿವೆ. ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮತ್ತು ಪುದುಚೇರಿಯ ತಗ್ಗು ಪ್ರದೇಶದ ಕರಾವಳಿ ಭಾಗಗಳು ಇದರ ಪ್ರಭಾವಕ್ಕೆ ಸಿಕ್ಕ ರಾಜ್ಯಗಳಾಗಿವೆ ಎಂದು ಅಧ್ಯಯನ ತಿಳಿಸಿದೆ.
ಭೂ ವಿಜ್ಞಾನ ಸಚಿವಾಲಯದ (ಎಂಒಇಎಸ್) ಅಧೀನದಲ್ಲಿರುವ ಭಾರತೀಯ ಹವಾಮಾನ ಇಲಾಖೆ (ಐಎಮ್‌ಡಿ)ಯ ಮನ್ನೆಚ್ಚರಿಕೆ ಕೌಶಲ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಪರಿಣಾಮಕಾರಿ ಕ್ರಮಗಳ ಸುಧಾರಣೆಯ ಪರಿಣಾಮವಾಗಿ ಚಂಡಮಾರುತಗಳಿಂದ ಉಂಟಾಗುವ ಸಾವಿನ ಸಂಖ್ಯೆ ಗಮನಾರ್ಹವಾಗಿ ಇಳಿಮುಖವಾಗಿದೆ ಎಂದು ವರದಿ ತಿಳಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ಲೋಕಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ವೇಳೆ ಲಿಖಿತ ರೂಪದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.