ETV Bharat / bharat

ಪಿಯು ಪರೀಕ್ಷೆಯಲ್ಲಿ 500 ಹುಡುಗಿಯರ ಮಧ್ಯೆ ಒಬ್ಬನೇ ಹುಡುಗ.. ಅವರನ್ನು ನೋಡಿ ಪ್ರಜ್ಞೆ ತಪ್ಪಿ ಬಿದ್ದ ವಿದ್ಯಾರ್ಥಿ!

author img

By

Published : Feb 2, 2023, 1:56 PM IST

ಬಿಹಾರದ ನಳಂದಾದಲ್ಲಿ ಇಂಟರ್‌ಮೀಡಿಯೇಟ್ ಪರೀಕ್ಷೆಯ ವೇಳೆ ವಿದ್ಯಾರ್ಥಿಯೊಬ್ಬ ಪ್ರಜ್ಞೆ ತಪ್ಪಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಆದ್ರೆ ಆತ ಪರೀಕ್ಷೆ ಸಂಬಂಧ ಮೂರ್ಛೆ ಹೋಗಿಲ್ಲ.. ಬದಲಿಗೆ ಹುಡುಗಿಯರನ್ನು ನೋಡಿ ಮೂರ್ಛೆ ಹೋಗಿರುವ ಅಚ್ಚರಿ ಸಂಗತಿ ತಿಳಿದು ಬಂದಿದೆ.

Student faints during exam in Nalanda  Intermediate exam in Nalanda  Intermediate Exam 2023  ನಳಂದಾದಲ್ಲಿ ಇಂಟರ್‌ಮೀಡಿಯೇಟ್ ಪರೀಕ್ಷೆ  ವಿದ್ಯಾರ್ಥಿಯೊಬ್ಬ ಪ್ರಜ್ಞೆ ತಪ್ಪಿ ಆಸ್ಪತ್ರೆ  ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ವಿಚಿತ್ರ  ಹಾಲ್​ ತುಂಬಾ ಹುಡುಗಿಯರನ್ನು ನೋಡಿ ಪ್ರಜ್ಞೆ  ಹುಡುಗಿಯರನ್ನು ನೋಡಿ ಪ್ರಜ್ಞೆ ತಪ್ಪಿ ಬಿದ್ದ ವಿದ್ಯಾರ್ಥಿ  ಬಾಲಕಿಯರನ್ನು ನೋಡಿ ಪ್ರಜ್ಞೆ ತಪ್ಪಿದ ವಿದ್ಯಾರ್ಥಿ  ಇಂದಿನಿಂದ ಇಂಟರ್ ಪರೀಕ್ಷೆ ಆರಂಭ  ಅಲ್ಲಮ ಇಕ್ಬಾಲ್ ಕಾಲೇಜಿನ ವಿದ್ಯಾರ್ಥಿ  ಬಿಹಾರ ಬೋರ್ಡ್‌ನ 12 ನೇ ತರಗತಿ ಪರೀಕ್ಷೆ
ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ವಿಚಿತ್ರ

ನಳಂದಾ(ಬಿಹಾರ): ಬಿಹಾರದ ನಳಂದಾದಲ್ಲಿ ಇಂಟರ್‌ಮೀಡಿಯೇಟ್(ಪಿಯು) ಪರೀಕ್ಷೆ ವೇಳೆ ವಿಚಿತ್ರ ಘಟನೆಯೊಂದು ನಡೆದಿದೆ. ಬಿಹಾರ ಬೋರ್ಡ್‌ನ 12 ನೇ ತರಗತಿ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷಾ ಕೊಠಡಿಯಲ್ಲೇ ಮೂರ್ಛೆ ಹೋಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಆ ವಿದ್ಯಾರ್ಥಿ ಮೂರ್ಛೆ ಹೋಗಿರುವ ಕಾರಣ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹೌದು, 500 ಹುಡುಗಿಯರಿರುವ ವಿದ್ಯಾರ್ಥಿನಿಯರ ಕೇಂದ್ರದಲ್ಲಿ ಆತನೊಬ್ಬನೇ ಕುಳಿತುಕೊಂಡು ಪರೀಕ್ಷೆ ಬರೆಯುವಂತಾಗಿದೆ. ಇಷ್ಟೊಂದು ಹುಡುಗಿಯರ ನಡುವೆ ಪರೀಕ್ಷೆ ಬರೆಯಬೇಕಾ ಎಂದು ಭಯ ಉಂಟಾಗಿ ಮೂರ್ಛೆ ಹೋಗಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆ ನಗರದ ಬ್ರಿಲಿಯಂಟ್ ಕಾನ್ವೆಂಟ್ ಖಾಸಗಿ ಶಾಲೆಯಲ್ಲಿ ಬುಧವಾರ ನಡೆದಿದೆ.

ಬಾಲಕಿಯರನ್ನು ನೋಡಿ ಪ್ರಜ್ಞೆ ತಪ್ಪಿದ ವಿದ್ಯಾರ್ಥಿ: ಅಲ್ಲಮ ಇಕ್ಬಾಲ್ ಕಾಲೇಜಿನ ವಿದ್ಯಾರ್ಥಿ ಮನೀಶ್ ಶಂಕರ್ (17) ಮೂರ್ಛೆ ಹೋದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಮನೀಶ್​ ತನ್ನ ತಂದೆ ಸಚ್ಚಿದಾನಂದ ಪ್ರಸಾದ್ ಅವರ ಜೊತೆ ಸುಂದರ್‌ಗಡ್‌ನಲ್ಲಿರುವ ಪರೀಕ್ಷಾ ಕೇಂದ್ರ ಬ್ರಿಲಿಯಂಟ್ ಕಾನ್ವೆಂಟ್ ಸ್ಕೂಲ್​ಗೆ ತೆರಳಿದ್ದಾನೆ. ಮನೀಶ್​ ಗಣಿತ ಪರೀಕ್ಷೆ ಬರೆಯಲು ನಿಗದಿತ ವೇಳಾಪಟ್ಟಿಯಂತೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಪರೀಕ್ಷೆ ಅಂದ್ಮೇಲೆ ವಿದ್ಯಾರ್ಥಿಗಳು ನರ್ವಸ್​ ಆಗುವುದು ಕಾಮಾನ್.. ಅದರಲ್ಲಿ ಗಣಿತ ಪರೀಕ್ಷೆ.. ಮನೀಶ್​ ಮೊದಲೇ ನರ್ವಸ್​ ಆದಂತೆ ಕಾಣುತ್ತಿದೆ. ಆಗ ತಮ್ಮ ಸೀಟಿಗೆ ಹೋದಾಗ ಹಾಲ್​ನಲ್ಲಿ ಬಹಳಷ್ಟು ಹುಡುಗಿಯರು ಇರುವುದನ್ನೇ ನೋಡಿದ್ದಾನೆ. ಇದರಿಂದ ಮತ್ತಷ್ಟು ಭಯದಿಂದ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾನೆ.

ಮನೀಶ್​ ಸೋದರತ್ತೆ ಮಾತು: ಸುದ್ದಿ ತಿಳಿದ ಮನೀಶ್‌ನ ಕುಟುಂಬಸ್ಥರು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಿದ್ದಾರೆ. ಆಗ ಅಲ್ಲಿ ಹುಡುಗಿಯರು ಮಾತ್ರ ಇದ್ದರು. ಐನೂರು ಹುಡುಗಿಯರ ಮಧ್ಯದಲ್ಲಿ ಒಬ್ಬನೇ ವಿದ್ಯಾರ್ಥಿ ಆ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಾಗಿತ್ತು. ಒಂದೇ ಬಾರಿಗೆ ಇಷ್ಟು ಹುಡುಗಿಯರನ್ನು ನೋಡಿ ನನ್ನ ಸೋದರಳಿಯನಿಗೆ ಭಯವಾಗಿದೆ. ಇದರಿಂದ ಪರೀಕ್ಷೆ ಬರೆಯುವ ಬದಲು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಶಾಲೆಯ ಮೇಲ್ವಿಚಾರಕರು ಮತ್ತು ಆಡಳಿತ ಮಂಡಳಿ ಆತನನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಕಲ್ಪಿಸಿದರು. ಇದೀಗ ತಮ್ಮ ಅಳಿಯನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಮನೀಶ್​ ಸೋದರ ಅತ್ತೆ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಬುಧವಾರದಿಂದ ಇಂಟರ್ ಪರೀಕ್ಷೆ ಆರಂಭ: ಬಿಹಾರದಲ್ಲಿ ಇಂಟರ್ ಪರೀಕ್ಷೆ ಆರಂಭವಾಗಿದೆ. ಇದಕ್ಕಾಗಿ ರಾಜ್ಯದಲ್ಲಿ 1464 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಒಟ್ಟು 13 ಲಕ್ಷದ 18 ಸಾವಿರದ 227 ವಿದ್ಯಾರ್ಥಿಗಳು ಇಂಟರ್ ಪರೀಕ್ಷೆ ಬರೆಯುತ್ತಿದ್ದಾರೆ. ಇವರಲ್ಲಿ 6 ಲಕ್ಷ 36 ಸಾವಿರದ 432 ವಿದ್ಯಾರ್ಥಿನಿಯರು ಮತ್ತು 6 ಲಕ್ಷ 81 ಸಾವಿರದ 795 ವಿದ್ಯಾರ್ಥಿಗಳು ಸೇರಿದ್ದಾರೆ. ಪರೀಕ್ಷೆಯನ್ನು ಎರಡು ಸಮಯದಲ್ಲಿ ನಡೆಸಲಾಗುತ್ತಿದೆ. ಮೊದಲ ಪರೀಕ್ಷೆಯನ್ನು 9.30 ರಿಂದ 12.45 ರವರೆಗೆ ಮತ್ತು ಎರಡನೇ ಪರೀಕ್ಷೆಯನ್ನು ಮಧ್ಯಾಹ್ನ 1.45 ರಿಂದ 5.00 ರವರೆಗೆ ನಡೆಸಲಾಗುತ್ತಿದೆ.

ಓದಿ: ಈ ಏರಿಯಾ ನಂದೇ ಎನ್ನುತ್ತಿರುವ 17 ಮರಿಗಳ ತಾಯಿ.. ತಡೋಬಾ ಅರಣ್ಯಕ್ಕೆ ಹೆಣ್ಣು ಹುಲಿ ಜುನಾಬಾಯಿಯೇ ರಾಣಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.