ETV Bharat / bharat

"ಈ ಹಳ್ಳಿ ಎಲ್ಲ ಗ್ರಾಮಗಳಂತಲ್ಲ" ಒಂದು ಕಡೆ ಪಾಕಿಸ್ತಾನ, ಮೂರು ಕಡೆ ನದಿ: ನಗರಕ್ಕೆ ಬರಲು ದೋಣಿಯೊಂದೇ ದಾರಿ! - ಗಡಿ ಗ್ರಾಮ ಕಾಲುವಾಳ

ಈ ಹಳ್ಳಿಯಲ್ಲಿ ವಾಸವಾಗಿರುವ ವ್ಯಕ್ತಿಯ ಆರೋಗ್ಯ ಹದಗೆಟ್ಟರೆ, ಮೊದಲು ಬಿಎಸ್​ಎಫ್​​ನಿಂದ ಅನುಮತಿ ಪಡೆದು, ತದನಂತರ ದೋಣಿಯ ಮೂಲಕ ನದಿ ದಾಟಿ ಫಿರೋಜ್​ಪುರ ನಗರದಲ್ಲಿರುವ ಸಿವಿಲ್​ ಆಸ್ಪತ್ರೆಗೆ ಕರೆದೊಯ್ಯಬೇಕು.

Kaluwala village on the border
Kaluwala village on the border
author img

By

Published : Feb 9, 2022, 3:50 AM IST

Updated : Feb 9, 2022, 6:37 AM IST

ಫಿರೋಜ್​ಪುರ(ಪಂಜಾಬ್​): ಪಂಜಾಬ್​ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ಮತದಾರರ ಗಮನ ಸೆಳೆಯಲು ಬಹುತೇಕ ಎಲ್ಲ ಪಕ್ಷಗಳು ಈಗಾಗಲೇ ಭರಪೂರ ಭರವಸೆ ನೀಡಿವೆ. ಆದರೆ, ಗಡಿಭಾಗದ ಕಾಲುವಾಳ ಗ್ರಾಮದ ಕಥೆ ಮಾತ್ರ ವಿಭಿನ್ನ. ಭಾರತಕ್ಕೆ ಸ್ವತಂತ್ರ ಸಿಕ್ಕು ಏಳು ದಶಕಗಳು ಕಳೆದ್ರೂ ಕೂಡ ಇಲ್ಲಿನ ಜನರಿಗೆ ಮೂಲ ಸೌಲಭ್ಯಗಳಿಲ್ಲ. ರಾತ್ರಿಯಾಗುತ್ತಿದ್ದಂತೆ ಪಾಕಿಸ್ತಾನದಲ್ಲಿ ವಾಸವಾಗಿರುವ ಭಾವನೆ ಮೂಡಲು ಶುರುವಾಗುತ್ತದೆ.

Kaluwala village on the border
ರಾತ್ರಿಯಾಗುತ್ತಿದ್ದಂತೆ ಪಾಕ್​ನಲ್ಲಿ ವಾಸವಾಗಿರುವ ಭಾವನೆ

ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಫಿರೋಜ್‌ಪುರದಲ್ಲಿ ಮೂರು ಕಡೆ ಸಟ್ಲೇಜ್ ನದಿಯಿಂದ ಸುತ್ತುವರೆದಿದ್ದು, 70 ಕುಟುಂಬಗಳು ನೆಲೆಸಿರುವ ಗ್ರಾಮವಿದೆ. ಇಲ್ಲಿನ ಜನಸಂಖ್ಯೆ ಕೇವಲ 400. ಏಳು ದಶಕಗಳಿಂದಲೂ ಶಿಕ್ಷಣದಿಂದ ವಂಚಿತವಾಗಿರುವ ಈ ಕಾಲುವಾಳ ಗ್ರಾಮದಲ್ಲಿ ಇಲ್ಲಿಯವರೆಗೆ ಐವರು ಮಾತ್ರ 12ನೇ ತರಗತಿ ತೇರ್ಗಡೆಯಾಗಿದ್ದಾರೆ. ವಿದ್ಯುತ್​ ಪೂರೈಕೆ ಇದೆ. ಆದರೆ, ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ವ್ಯತ್ಯಯವಾಗಿದೆ. ಹೀಗಾಗಿ, ಕಳೆದ ಎರಡು ತಿಂಗಳಿಂದ ಸಮಸ್ಯೆ ಬಗೆಹರಿದಿಲ್ಲ. ಫಿರೋಜ್‌ಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಕಾಲುವಾಳ (ದ್ವೀಪ) ಗ್ರಾಮದ ಸ್ಥಿತಿ ಎಲ್ಲ ಹಳ್ಳಿಗಿಂತಲೂ ತೀರಾ ವಿಭಿನ್ನ.

Kaluwala village on the border
ಗಡಿಭಾಗದ ಕಾಲುವಾಳ ಗ್ರಾಮದ ಕಥೆ ಮಾತ್ರ ವಿಭಿನ್ನ

ಭಾರತ-ಪಾಕ್​ ವಿಭಜನೆಯಾದಾಗಿನಿಂದಲೂ ಪಂಜಾಬ್​ನಲ್ಲಿ ಅಕಾಲಿ-ಬಿಜೆಪಿ ಮೈತ್ರಿ ಮತ್ತು ಕಾಂಗ್ರೆಸ್ ಅಧಿಕಾರ ನಡೆಸಿವೆ. ಆದರೆ, ಈ ಗ್ರಾಮದ ಅಭಿವೃದ್ಧಿಗೆ ಯಾವುದೇ ಪಕ್ಷ ಯೋಜನೆ ರೂಪಿಸಿಲ್ಲ. ಆಸ್ಪತ್ರೆ, ಸೇತುವೆ ಸಹ ನಿರ್ಮಾಣಗೊಂಡಿಲ್ಲ. ಹಳ್ಳಿಯಲ್ಲಿ ವಾಸವಾಗಿರುವ ವ್ಯಕ್ತಿಯ ಆರೋಗ್ಯ ಹದಗೆಟ್ಟರೆ, ಮೊದಲು ಬಿಎಸ್​ಎಫ್​​ ಪೋಸ್ಟ್​ನಿಂದ ಅನುಮತಿ ಪಡೆದು, ತದನಂತರ ದೋಣಿಯ ಮೂಲಕ ನದಿ ದಾಟಿ ಫಿರೋಜ್​ಪುರ ನಗರದಲ್ಲಿರುವ ಸಿವಿಲ್​ ಆಸ್ಪತ್ರೆಗೆ ಹೋಗಬೇಕು.

ಈ ಗ್ರಾಮದ ಜನರು ಅಗತ್ಯ ವಸ್ತು ಖರೀದಿ ಮಾಡಲು ದೋಣಿ ಮೂಲಕ ತೆರಳಬೇಕಾಗಿದ್ದು, ಈ ಗ್ರಾಮದಲ್ಲಿ ಆಸ್ಪತ್ರೆ, ಅಂಗಡಿ ಕೂಡ ಇಲ್ಲ. ಕಳೆದ ವರ್ಷ ಸರ್ಕಾರಿ ಶಾಲೆ ನಿರ್ಮಾಣ ಮಾಡಲಾಗಿದೆ. ಆದರೆ. ಶಿಕ್ಷಕರೇ ಇಲ್ಲ. ಜನರು ತಮ್ಮ ಅಗತ್ಯ ಪೂರೈಕೆಗಳಿಗಾಗಿ ದೋಣಿ ಮೂಲಕ ತೆರಳಬೇಕು. ಬಿಎಸ್​ಎಫ್​ ಸಂಜೆ 7ರಿಂದ ಬೆಳಗ್ಗೆ 8 ಗಂಟೆವರೆಗೆ ಗೇಟ್​ ಬಂದ್ ಮಾಡುವುದರಿಂದ ಎಲ್ಲ ಸಂಪರ್ಕ ಕಡಿತಗೊಳ್ಳುತ್ತದೆ.

Kaluwala village on the border
ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಫಿರೋಜ್‌ಪುರದ ಕಾಲುವಾಳ

ಫಿರೋಜ್​ಪುರದ ಕಾಲುವಾಳ ಗ್ರಾಮ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿದ್ದು, ಕಳೆದ ಏಳು ದಶಕಗಳಿಂದಲೂ ಇಲ್ಲಿಯ ಸಮಸ್ಯೆ ವಿಭಿನ್ನವಾಗಿದೆ.

ಇದನ್ನೂ ಓದಿರಿ: ಚಿನಾರ್​ ಕಾರ್ಪ್ಸ್​ನ ಫೇಸ್​ಬುಕ್​, ಇನ್​​ಸ್ಟಾಗ್ರಾಂ​ ಮೇಲೆ ನಿರ್ಬಂಧ

ಗ್ರಾಮಕ್ಕೆ ತೆರಳಿದ ಈಟಿವಿ ಭಾರತ್ ತಂಡ​: ಈ ಗಡಿ ಗ್ರಾಮದಲ್ಲಿ ವಾಸಿಸುತ್ತಿರುವ ಜನರ ಪರಿಸ್ಥಿತಿ ಹೇಗಿದೆ? ಯಾವೆಲ್ಲ ಸಮಸ್ಯೆ ಅನುಭವಿಸುತ್ತಿದ್ದಾರೆಂದು ತಿಳಿದುಕೊಳ್ಳಲು ಈಟಿವಿ ಭಾರತ್ ತಂಡ ಇಲ್ಲಿಗೆ ತೆರಳಿ ಸಮಸ್ಯೆ ಆಲಿಸಿದೆ. ಗ್ರಾಮದ ಪರಮಜೀತ್ ಸಿಂಗ್ ಮಾತನಾಡಿ, ಶಾಲೆ ತೆರೆಯಲು ಸರ್ಕಾರಕ್ಕೆ ಅನೇಕ ಸಲ ಪತ್ರ ಬರೆಯಲಾಗಿದೆ. ಇದೀಗ ಶಾಲೆ ಒದಗಿಸಿದೆ. ಆದರೆ, ಇಲ್ಲಿಗೆ ಶಿಕ್ಷಕರು ಬರುತ್ತಿಲ್ಲ. ಪ್ರತಿದಿನ ಒಂದಿಲ್ಲೊಂದು ಸಮಸ್ಯೆ ಉಂಟಾಗುತ್ತಿದ್ದು, ಗ್ರಾಮದ ಜನರು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ ಎಂದರು.

Kaluwala village on the border
ಕುಲುವಾಳ ಗಡಿ ಗ್ರಾಮಕ್ಕೆ ಗ್ರಾಮಕ್ಕೆ ತೆರಳಿದ ಈಟಿವಿ ಭಾರತ್ ತಂಡ

ಚುನಾವಣೆ ವೇಳೆ ರಾಜಕಾರಣಿಗಳ ಭೇಟಿ: ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣಿಗಳು ಇಲ್ಲಿಗೆ ಬರುತ್ತಾರೆ. ಉಳಿದ ಸಂದರ್ಭಗಳಲ್ಲಿ ಅವರು ಈ ಕಡೆ ಬರುವುದಿಲ್ಲ. ಮಳೆಗಾಲದ ಸಮಯದಲ್ಲಿ ನದಿ ಉಕ್ಕಿ ಹರಿಯುವುದರಿಂದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ. ಈ ವೇಳೆ ಅನಾರೋಗ್ಯದಿಂದ ಬಳಲುವ ವ್ಯಕ್ತಿಗಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹರಸಾಹಸ ಪಡಬೇಕಾಗುತ್ತದೆ. ನಾವು ಬೆಳೆಯುವ ಬೆಳೆಗಳನ್ನ ಮಾರಾಟಕ್ಕಾಗಿ ತೆಗೆದುಕೊಂಡು ಹೋಗಲು ಸಮಸ್ಯೆಯಾಗಿದ್ದು, ಇದೇ ಕಾರಣಕ್ಕಾಗಿ ಬಡತನಿಂದ ಬಳಲುವಂತಾಗಿದೆ ಎಂದಿದ್ದಾರೆ.

Kaluwala village on the border
ನಗರಕ್ಕೆ ಬರಲು ದೋಣಿಯೊಂದೇ ದಾರಿ

ಕಳೆದ ಐದು ವರ್ಷದಲ್ಲಿ ಎರಡು ಸಲ ಶಾಸಕರ ಭೇಟಿ: ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಈ ಭಾಗದ ಶಾಸಕರಿಗೆ ಅನೇಕ ಸಲ ಮನವಿ ಮಾಡಲಾಗಿದೆ. ಆದರೆ, ಕಳೆದ ಐದು ವರ್ಷಗಳಲ್ಲಿ ಕೇವಲ 2-3 ಸಲ ಮಾತ್ರ ಶಾಸಕರು ನಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಸೇತುವೆ ನಿರ್ಮಿಸಿಕೊಂಡುವ ಚುನಾವಣೆ ಭರವಸೆ ನೀಡಿದ್ದಾರೆ. ಆದರೆ, ಚುನಾವಣೆ ಮುಗಿದ ಬಳಿಕ ಈ ಯಾವುದೇ ಭರವಸೆ ಈಡೇರುವುದಿಲ್ಲ.

ತುರ್ತು ಪರಿಸ್ಥಿತಿ ವೇಳೆ ಬಿಎಸ್​ಎಫ್​ ಅನುಮತಿ ಅಗತ್ಯ: ಗ್ರಾಮದಿಂದ ಫಿರೋಜ್​ಪುರಕ್ಕೆ ತುರ್ತು ಸಂದರ್ಭಗಳಲ್ಲಿ ತೆರಳಲು ಬಿಎಸ್​ಎಫ್​ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ. ಅನಾರೋಗ್ಯ ಪೀಡಿತರನ್ನ ತೆಗೆದುಕೊಂಡು ಹೋಗಲು ಮೊದಲು ಬಿಎಸ್​ಎಫ್​ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Kaluwala village on the border
ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿರುವ ಜನರು

ಒಂದೇ ಒಂದು ಶೌಚಾಲಯವಿಲ್ಲ: ಕಳೆದ ಏಳು ದಶಕಗಳಿಂದ ಈ ಗ್ರಾಮದಲ್ಲಿ ವಾಸ ಮಾಡುತ್ತಿದ್ದರೂ ಕೂಡ, ಸರ್ಕಾರ ಶೌಚಾಲಯ ನಿರ್ಮಾಣಕ್ಕಾಗಿ ಒಂದು ರೂಪಾಯಿ ಕೂಡ ನೀಡಿಲ್ಲ. ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ನಮಗೆ ಸಿಗುತ್ತಿಲ್ಲ.

Last Updated : Feb 9, 2022, 6:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.