ಮಥುರಾ (ಉತ್ತರ ಪ್ರದೇಶ): ರೈತರು ಶಾಂತವಾಗಲು ಸುಪ್ರೀಂ ಕೋರ್ಟ್ ತಡೆಯಾಜ್ಞೆ ಅಗತ್ಯವಿತ್ತು ಎಂದು ಸಂಸದೆ ಹೇಮಾಮಾಲಿನಿ ಹೇಳಿದ್ದಾರೆ.
"ಕೃಷಿ ಕಾನೂನುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ರೈತರನ್ನು ಶಾಂತಗೊಳಿಸಲು ಅಗತ್ಯವಾಗಿತ್ತು. ರೈತರು ತಮಗೆ ಏನು ಬೇಕು ಎಂಬುದನ್ನು ಮತ್ತು ಕೃಷಿ ಕಾನೂನುಗಳಿಂದ ಅವರಿಗೆ ಉಂಟಾಗಲಿರುವ ಸಮಸ್ಯೆ ಏನು ಎಂದು ಕೂಡಾ ಅವರಿಗೆ ತಿಳಿದಿಲ್ಲ. ಯಾರೋ ಹೇಳಿದ ಕಾರಣ ಅವರು ಪ್ರತಿಭಟನೆ ಮಾಡುತ್ತಿದ್ದಾರೆ." ಎನಿಸುತ್ತದೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
ನಮ್ಮ ಸರ್ಕಾರ ಅವರಿಗೆ ನಿರಂತರವಾಗಿ ಏನು ಬೇಕು ಎಂದು ಕೇಳುತ್ತಿದ್ದರೂ ಅವರು ತಮ್ಮ ನಿಜವಾದ ಸಮಸ್ಯೆ ಕುರಿತು ಹೇಳಿಲ್ಲ. ನನ್ನ ಕ್ಷೇತ್ರದ ರೈತರು ಈ ಬಗ್ಗೆ ಎಂದಿಗೂ ನನಗೆ ದೂರು ನೀಡದಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದರು.