ETV Bharat / bharat

ತಿರುಪತಿ ತಿಮ್ಮಪ್ಪನ ಸರ್ವದರ್ಶನಂ ಟಿಕೆಟ್‌ಗಳು ಹತ್ತೇ ನಿಮಿಷದಲ್ಲಿ ಸೋಲ್ಡ್‌ ಔಟ್‌ - ಆಂಧ್ರ ಪ್ರದೇಶದಲ್ಲಿ ತಿಮ್ಮಪ್ಪನ ಸನ್ನಧಿ

Thirumala Srivari Sarvadarshana: ತಿಮ್ಮಪ್ಪನ ಸರ್ವದರ್ಶನಂ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಹತ್ತೇ ನಿಮಿಷದಲ್ಲಿ ಮಾರಾಟ ಆಗಿವೆ ಎಂದು ಟಿಟಿಡಿ ಹೇಳಿದೆ. ದಿನಕ್ಕೆ ಹತ್ತು ಸಾವಿರ ಟಿಕೆಟ್‌ಗಳಂತೆ ಒಟ್ಟು 2.90 ಲಕ್ಷ ಡಿಸೆಂಬರ್‌ ತಿಂಗಳ ಟಿಕೆಟ್‌ಗಳನ್ನು ಭಕ್ತರು ಬುಕ್ ಮಾಡಿದ್ದಾರೆ.

Srivari Sarvadarshanam tickets released .. empty in ten minutes ..!
ತಿರುಪತಿ ತಿಮ್ಮಪ್ಪನ ಸರ್ವದರ್ಶನಂ ಟಿಕೆಟ್‌ಗಳು ಹತ್ತೇ ನಿಮಿಷದಲ್ಲಿ ಸೋಲ್ಟ್‌ ಔಟ್‌
author img

By

Published : Nov 27, 2021, 6:18 PM IST

ತಿರುಮಲ(ಆಂಧ್ರ ಪ್ರದೇಶ): ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದ್ದು, ಡಿಸೆಂಬರ್‌ ತಿಂಗಳ ಸರ್ವದರ್ಶನಂ ಟಿಕೆಟ್‌ ಆನ್‌ಲೈನ್‌ನಲ್ಲಿ ಬಿಡುಗಡೆಯಾದ ಹತ್ತು ನಿಮಿಷದಲ್ಲಿ ಸೋಲ್ಡ್‌ ಔಟ್‌ ಆಗಿವೆ.

ಕೋಟಾ ಟಿಕೆಟ್‌ಗಳು ನಾಳೆ ಬೆಳಗ್ಗೆ 9 ಗಂಟೆಗೆ ತಮ್ಮ ವೆಬ್‌ಸೈಟ್‌ನಲ್ಲಿ ಲಭ್ಯವಿರುವುದಾಗಿ ಟಿಟಿಡಿ ಹೇಳಿದೆ. ದಿನಕ್ಕೆ 10 ಸಾವಿರ ಟಿಕೆಟ್‌ಗಳಂತೆ ಎರಡು ಲಕ್ಷದ 90 ಸಾವಿರ ಟಿಕೆಟ್‌ಗಳನ್ನು ಭಕ್ತರು ಬುಕ್ ಮಾಡಿದ್ದಾರೆ. ಒಟಿಪಿ ಮತ್ತು ವರ್ಚುವಲ್ ಕ್ಯೂ ಮೋಡ್‌ನಲ್ಲಿ ಟಿಕೆಟ್‌ಗಳು ಮಾರಾಟವಾಗಿದ್ದು, ಈ ಪ್ರಕ್ರಿಯೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಉದ್ಭವಿಸಲಿಲ್ಲ ಅದು ಸ್ಪಷ್ಟಪಡಿಸಿದೆ.

ತಿರುಮಲದಲ್ಲಿ ವಾಸ್ತವ್ಯಕ್ಕೆ ಸಂಬಂಧಿಸಿದ ಟೋಕನ್‌ಗಳನ್ನು ನಾಳೆ ಬೆಳಗ್ಗೆ 9 ಗಂಟೆಗೆ ಬಿಡುಗಡೆ ಮಾಡಲಾಗುವುದು. ಡಿಸೆಂಬರ್ ತಿಂಗಳ ಕೋಟಾವನ್ನೂ ಬಿಡುಗಡೆ ಮಾಡಲಾಗುವುದು ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯಿಂದ ಕಿಷ್ಕಿಂಧೆಗೆ ರೈಲು ಆರಂಭಿಸುವಂತೆ ಪತ್ರ ಬರೆದ ಕೊಪ್ಪಳ ಸಂಸದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.