ETV Bharat / bharat

'ಡಿಶ್‌ವಾಶರ್' ಕಸ್ಟಮರ್ ಕೇರ್​ ನಂಬರ್​ ಹುಡುಕಲು ಹೋಗಿ ₹8 ಲಕ್ಷ ಕಳೆದುಕೊಂಡ ವೃದ್ಧ ದಂಪತಿ! - ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್

ಹಿರಿಯ ನಾಗಕರಿ ದಂಪತಿಗೆ ಸೈಬರ್​ ವಂಚಕರು ಬಲೆ ಬೀಸಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದಾರೆ.

sr-citizen-looking-for-dishwasher-customer-care-number-loses-rs-8-dot-24-lakh-to-cyber-thugs
'ಡಿಶ್‌ವಾಶರ್' ಕಸ್ಟಮರ್ ಕೇರ್​ ನಂಬರ್​ ಹುಡುಕಲು ಹೋಗಿ 8 ಲಕ್ಷ ಕಳೆದುಕೊಂಡ ವೃದ್ಧ ದಂಪತಿ!
author img

By

Published : Feb 23, 2023, 9:17 PM IST

ನೋಯ್ಡಾ (ಉತ್ತರ ಪ್ರದೇಶ): ಇಂಟರ್‌ನೆಟ್‌ನಲ್ಲಿ ಡಿಶ್‌ವಾಶರ್ (ಪಾತ್ರೆ ತೊಳೆಯುವ ಯಂತ್ರ) ಕಂಪನಿಯ ಕಸ್ಟಮರ್ ಕೇರ್ ಸಂಖ್ಯೆ ಹುಡುಕಲು ಹೋಗಿ ಉತ್ತರ ಪ್ರದೇಶದ ನೋಯ್ಡಾ ಮೂಲದ ವೃದ್ಧ ದಂಪತಿಯೊಬ್ಬರು 8.24 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ದಂಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇಲ್ಲಿನ ಫಾರ್ಮ್‌ಹೌಸ್‌ವೊಂದರಲ್ಲಿ ವಾಸಿಸುತ್ತಿರುವ 70 ವರ್ಷದ ಅಮರ್‌ಜೀತ್ ಸಿಂಗ್​ ಮತ್ತವರ ಪತ್ನಿ ರಾಜಿಂದರ್ ಅರೋರಾ ಎಂಬುವರೇ ಇಷ್ಟೊಂದು ಹಣವನ್ನು ಕಳೆದುಕೊಂಡ ದಂಪತಿ. ಜನವರಿ 21ರ ಮಧ್ಯಾಹ್ನ ಗೂಗಲ್‌ನಲ್ಲಿ ಐಎಫ್‌ಬಿ ಡಿಶ್‌ವಾಶರ್‌ನ ಕಸ್ಟಮರ್​ ಕೇರ್ ಸಂಖ್ಯೆಯನ್ನು ಪತ್ನಿ ರಾಜಿಂದರ್ ಅರೋರಾ ಹುಡುಕಿದ್ದರು. ಇದರ ನಂತರ ಜನವರಿ 22 ಮತ್ತು 23ರಂದು ಬ್ಯಾಂಕ್​ ಖಾತೆಯಿಂದ ಹಣ ಎಗರಿಸುವ ಮೂಲಕ ವಂಚಿಸಲಾಗಿದೆ ಎಂದು ಅಮರ್‌ಜೀತ್ ಸಿಂಗ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಡೆದಿದ್ದೇನು?: ''ಗೂಗಲ್‌ನಲ್ಲಿ ಪತ್ನಿ ರಾಜಿಂದರ್ ಅರೋರಾ ಐಎಫ್‌ಬಿ ಡಿಶ್‌ವಾಶರ್‌ನ ಕಸ್ಟಮರ್​ ಕೇರ್ ಸಂಖ್ಯೆ ಹುಡುಕುವಾಗ ''1800258821'' ಸಂಖ್ಯೆಯನ್ನು ತೋರಿಸಿದೆ. ಆದರೆ, ಈಗ ಅದೇ ಸಂಖ್ಯೆಯು ಬಂಧನ್ ಬ್ಯಾಂಕ್‌ನ ಕಸ್ಟಮರ್​ ಕೇರ್ ಸಂಖ್ಯೆ ಎಂದು ತೋರಿಸುತ್ತಿದೆ'' ಎಂದು ಪತಿ ಅಮರ್‌ಜೀತ್ ಸಿಂಗ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

''ಡಿಶ್‌ವಾಶರ್‌ನ ಕಸ್ಟಮರ್​ ಕೇರ್ ಸಂಖ್ಯೆ ಭಾವಿಸಿ ಈ ''1800258821'' ಸಂಖ್ಯೆಗೆ ಕರೆ ಮಾಡಿದಾಗ ಮಹಿಳೆಯೊಬ್ಬರು ಕರೆ ಸ್ವೀಕರಿಸಿದರು. ನಂತರ ತಮ್ಮ ಹಿರಿಯ ಅಧಿಕಾರಿಗೆ ದೂರವಾಣಿಯನ್ನು ಕನೆಕ್ಟ್​ ಮಾಡಿದರು. ಇದರ ಬಳಿಕ ಆ ಹಿರಿಯ ಅಧಿಕಾರಿಯು ನನ್ನ ಪತ್ನಿಯ ಫೋನ್‌ನಲ್ಲಿ AnyDesk ಆ್ಯಪ್​​ ಡೌನ್‌ಲೋಡ್ ಮಾಡಿಕೊಂಡು ವಿಳಾಸ ಸೇರಿ ಕೆಲವು ವಿವರಗಳು ಮತ್ತು ಆ್ಯಪ್​ನಲ್ಲಿ ಪ್ರದರ್ಶಿಸಲಾದ ನಾಲ್ಕು ಅಂಕಿಯ ಕೋಡ್​ಅನ್ನು ಹಂಚಿಕೊಳ್ಳಲು ನನ್ನ ಪತ್ನಿಗೆ ಸೂಚಿಸಿದರು'' ಎಂದು ಅಮರ್‌ಜೀತ್ ಸಿಂಗ್ ಹೇಳಿದ್ದಾರೆ.

ಇದೇ ವೇಳೆ, ''ಆ ಹಿರಿಯ ಅಧಿಕಾರಿ ನಮ್ಮ ದೂರು ದಾಖಲಿಸಲು ಬ್ಯಾಂಕ್​ ಖಾತೆಯಿಂದ 10 ರೂಪಾಯಿ ಶುಲ್ಕವನ್ನು ಟ್ರಾನ್ಸ್​ಫರ್ ಮಾಡಲು ಹೇಳಿದರು. ಈ ಪ್ರಕ್ರಿಯೆಯ ಸಮಯದಲ್ಲಿ ಅನೇಕ ಬಾರಿ ಫೋನ್ ಕರೆಯ ಸಂಪರ್ಕ ಕಡಿತಗೊಂಡಿತ್ತು. ಆದರೆ, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಹಿರಿಯ ಅಧಿಕಾರಿ ತನ್ನ ವೈಯಕ್ತಿಕ ನಂಬರ್​ನಿಂದ ಪತ್ನಿ ರಾಜಿಂದರ್ ಅರೋರಾಗೆ ಮತ್ತೆ-ಮತ್ತೆ ಕರೆ ಮಾಡುತ್ತಲೇ ಇದ್ದ. ಈಗ ಈ ನಂಬರ್​ ಸ್ವಿಚ್​ ಆಫ್​ ಸಹ ಆಗಿದೆ'' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮುಂದುವರೆದು, ''ಸಂಜೆ 4.15ರ ಸುಮಾರಿಗೆ ನಮ್ಮ ಬ್ಯಾಂಕ್‌ನಿಂದ ಫೋನ್‌ಗೆ ಸಂದೇಶವೊಂದು ಬಂತು. ನಮ್ಮ ಜಂಟಿ ಬ್ಯಾಂಕ್ ಖಾತೆಯಿಂದ 2.25 ಲಕ್ಷ ರೂಪಾಯಿ ಕಡಿತವಾಗಿದೆ ಎಂಬ ಸಂದೇಶ​ದಾಗಿತ್ತು. ಅಲ್ಲದೇ, ಮರುದಿನ ಬೆಳಗ್ಗೆ ಕೂಡ ಬ್ಯಾಂಕ್​ ಖಾತೆಯಿಂದ 5.99 ಲಕ್ಷ ರೂ. ಡೆಬಿಟ್ ಎಂದು ಮತ್ತೊಂದು ಸಂದೇಶ ಬಂತು'' ಎಂದು ದೂರಿದ್ದಾರೆ.

''ಮೊದಲ ವಂಚನೆಯ ವಹಿವಾಟಿನ ಬೆನ್ನಲ್ಲೇ ನಾವು ನಮ್ಮ ಬ್ಯಾಂಕ್‌ನ ಮ್ಯಾನೇಜರ್‌ಗೆ ಸಮಸ್ಯೆ ಬಗ್ಗೆ ತಿಳಿಸಿದ್ದೆವು. ಆಗ ನಮ್ಮ ಜಂಟಿ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದರು. ಆದರೆ, ಇದರ ಹೊರತಾಗಿಯೂ ಖಾತೆಯಿಂದ ಹೆಚ್ಚಿನ ಹಣ ಅಕ್ರಮವಾಗಿ ಕಡಿತವಾಗಿದೆ. ಈ ಬಗ್ಗೆ ಜನವರಿ 22ರಂದು ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್​ (cybercrime.gov.in)ನಲ್ಲೂ ದೂರು ನೀಡಲಾಗಿದೆ'' ಎಂದು ವಿವರಿಸಿದ್ದಾರೆ.

ಅಷ್ಟೇ ಅಲ್ಲ, ''ನಾವು ಹಿರಿಯ ನಾಗರಿಕ ದಂಪತಿಯಾಗಿದ್ದು, ನಮ್ಮ ಉಳಿತಾಯ ಮತ್ತು ಬ್ಯಾಂಕ್‌ನಲ್ಲಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯನ್ನು ಜೀವನೋಪಾಯಕ್ಕೆ ಅವಲಂಬಿಸಿದ್ದೇವೆ. ಆದ್ದರಿಂದ ಕುರಿತು ಪೊಲೀಸರು ಕ್ರಮ ಕೈಗೊಳ್ಳಬೇಕು'' ಎಂದು ಅಮರ್‌ಜೀತ್ ಸಿಂಗ್​ ಮನವಿ ಮಾಡಿದ್ದಾರೆ. ಈ ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಸತ್ಯೇಂದ್ರ ಕುಮಾರ್​, ''ಸದ್ಯ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಮತ್ತು ಮುಂದಿನ ಕ್ರಮಕ್ಕಾಗಿ ಸೈಬರ್​​ ಸೆಲ್‌ಗೆ ಪ್ರಕರಣ ವರ್ಗಾಯಿಸಲಾಗಿದೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸೈಬರ್​ ಕಳ್ಳರಿದ್ದಾರೆ ಹುಷಾರ್​.. ಇನ್​ಸ್ಟಾಗ್ರಾಂ ಸ್ನೇಹಿತನಿಂದ 1 ಲಕ್ಷ ರೂ ವಂಚನೆ.. ಒಂದೇ ಗಂಟೆಯಲ್ಲಿ ಹಣ ವಾಪಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.