ಮುಂಬೈ: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಮನೀಶ್ ರಾಜ್ ಗಾರಿಯಾ ಮತ್ತು ಅವಿನ್ ಸಾಹು ಅವರಿಗೆ ವಿಶೇಷ ಎನ್ಡಿಪಿಎಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಮೊದಲ ಜಾಮೀನು ಇದಾಗಿದೆ. ವಿ.ಪಾಟೀಲ್ ಅವರಿದ್ದ ಪೀಠ ಜಾಮೀನು ಮಂಜೂರು ಮಾಡಿದೆ.
ಮನೀಶ್ ಮತ್ತು ಅವಿನ್ ಸಾಹು ಕ್ರೂಸ್‌ನಲ್ಲಿ ಅತಿಥಿಗಳಾಗಿದ್ದರು. 11ನೇ ಆರೋಪಿಯಾದ ಮನೀಶ್ ರಾಜ್ ಬಳಿ 2.4 ಗ್ರಾಂ ಗಾಂಜಾ ಪತ್ತೆಯಾದ ನಂತರ ಎನ್ಸಿಬಿ ಬಂಧಿಸಿತ್ತು. ಮನೀಶ್ ಪರ ವಕೀಲ ಅಜಯ್ ದುಬೆ ಅವರು 50,000 ರೂಪಾಯಿ ಬಾಂಡ್ ಮೇಲೆ ಜಾಮೀನು ಕೊಡಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಮತ್ತು ಇತರ ಆರೋಪಿಗಳ ಜಾಮೀನು ಅರ್ಜಿಗಳು ಮುಂಬೈ ಹೈಕೋರ್ಟ್‌ನಲ್ಲಿ ನಾಳೆ ವಿಚಾರಣೆಗೆ ಬರಲಿವೆ.