ETV Bharat / bharat

ಕೋವಿಡ್​ ಟೆಸ್ಟ್​, ಟ್ರ್ಯಾಕ್​, ವ್ಯಾಕ್ಸಿನೇಷನ್​ಗೆ ಆದ್ಯತೆ ನೀಡಿ: ಕಾಂಗ್ರೆಸ್​ ಆಡಳಿತದ ರಾಜ್ಯಗಳಿಗೆ ಸೋನಿಯಾ ಸೂಚನೆ

ಕೊರೊನಾ ಪರೀಕ್ಷೆ, ಸಂಪರ್ಕ ಭೇದಿಸುವುದು ಹಾಗೂ ಲಸಿಕೆ ನೀಡುವುದು ನಿಮ್ಮ ಆದ್ಯತೆಯಾಗಿರಬೇಕು ಎಂದು ಕಾಂಗ್ರೆಸ್​ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ.

Sonia reviews efforts to tackle COVID-19 in Cong-ruled states
ಸೋನಿಯಾ ಗಾಂಧಿ
author img

By

Published : Apr 10, 2021, 1:40 PM IST

ನವದೆಹಲಿ: ಭಾರತದಲ್ಲಿ ಕೋವಿಡ್​ ಎರಡನೇ ಅಲೆ ಉಲ್ಬಣಿಸಿದ್ದು, ಕಾಂಗ್ರೆಸ್​ ಆಡಳಿತವಿರುವ ರಾಜ್ಯಗಳಲ್ಲಿನ ಪರಿಸ್ಥಿತಿ ಕುರಿತು ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಪರಿಶೀಲನೆ ನಡೆಸಿದ್ದಾರೆ.

ಇಂದು ಕಾಂಗ್ರೆಸ್​ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವರ್ಚುಯಲ್​ ಸಭೆ ನಡೆಸಿರುವ ಸೋನಿಯಾ ಗಾಂಧಿ, ತಮ್ಮ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಹೇಗೆ ಕೋವಿಡ್​ 2ನೇ ಅಲೆ ಹಾಗೂ ವ್ಯಾಕ್ಸಿನೇಷನ್ ಡ್ರೈವ್ ಅನ್ನು ನಿಭಾಯಿಸುತ್ತಿವೆ ಎಂಬುದನ್ನು ಪರಿಶೀಲಿಸಿದರು.

  • Congress President, Smt. Sonia Gandhi addresses a meeting of Congress ruled States & Congress Ministers from our alliance States to review the efforts to fight #COVID19 including availability of vaccines, access to medicines & ventilators.

    Priority is test, track & vaccinate.

    — Randeep Singh Surjewala (@rssurjewala) April 10, 2021 " class="align-text-top noRightClick twitterSection" data=" ">

ಸಭೆಯನ್ನುದ್ದೇಶಿಸಿ ಮಾತನಾಡಿದ ಕೈ ನಾಯಕಿ, ಕೊರೊನಾ ಪರೀಕ್ಷೆ, ಸಂಪರ್ಕ ಭೇದಿಸುವುದು ಹಾಗೂ ಲಸಿಕೆ ನೀಡುವುದು ನಿಮ್ಮ ಆದ್ಯತೆಯಾಗಿರಬೇಕು ಎಂದು ಹೇಳಿದರು.

ಲಸಿಕೆಗಳ ಲಭ್ಯತೆ, ವೆಂಟಿಲೇಟರ್‌ಗಳು ಸೇರಿದಂತೆ ಕೋವಿಡ್​ ವಿರುದ್ಧ ಹೋರಾಡುವ ರಾಜ್ಯ ಸರ್ಕಾರಗಳ ಪ್ರಯತ್ನಗಳನ್ನು ಸೋನಿಯಾ ಗಾಂಧಿ ಪರಿಶೀಲಿಸಿದ್ದಾರೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ ಟ್ವೀಟ್​ ಮಾಡಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.