ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಸೇನೆ ತಿಳಿಸಿದೆ.
ಜನವರಿ 11ರಂದು ಎಲ್‌ಒಸಿ ಬಳಿ ಕಾರ್ಯಾಚರಣೆ ನಡೆಯುತ್ತಿದ್ದಾಗ ಪಂಜಾಬ್ನ ಗುರುದಾಸ್ಪುರದ 24 ವರ್ಷದ ಯೋಧ ಗುರುಪ್ರೀತ್ ಸಿಂಗ್ ಅವರು ತೀವ್ರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸೇನಾ ಶಿಬಿರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಆದರೆ, ಶುಕ್ರವಾರ ಅವರು ಕೊನೆಯುಸಿರೆಳೆದರು ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
Chinar Corps regrets the unfortunate demise of Gnr Gurpreet Singh while performing operational task in forward area in #Baramulla Sector.
— Chinar Corps🍁 - Indian Army (@ChinarcorpsIA) January 12, 2024 " class="align-text-top noRightClick twitterSection" data="
Gnr Gurpreet Singh hails from Gurdaspur, Punjab and is survived by his mother Smt Lakhwinder Kaur.
In this hour of grief, the #IndianArmy… pic.twitter.com/39KlVKXthl
">Chinar Corps regrets the unfortunate demise of Gnr Gurpreet Singh while performing operational task in forward area in #Baramulla Sector.
— Chinar Corps🍁 - Indian Army (@ChinarcorpsIA) January 12, 2024
Gnr Gurpreet Singh hails from Gurdaspur, Punjab and is survived by his mother Smt Lakhwinder Kaur.
In this hour of grief, the #IndianArmy… pic.twitter.com/39KlVKXthlChinar Corps regrets the unfortunate demise of Gnr Gurpreet Singh while performing operational task in forward area in #Baramulla Sector.
— Chinar Corps🍁 - Indian Army (@ChinarcorpsIA) January 12, 2024
Gnr Gurpreet Singh hails from Gurdaspur, Punjab and is survived by his mother Smt Lakhwinder Kaur.
In this hour of grief, the #IndianArmy… pic.twitter.com/39KlVKXthl
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಬಾರಾಮುಲ್ಲಾ ಸೆಕ್ಟರ್‌ನ ಫಾರ್ವರ್ಡ್ ಏರಿಯಾದಲ್ಲಿ ಕಾರ್ಯಾಚರಣೆಯ ಕಾರ್ಯವನ್ನು ನಿರ್ವಹಿಸುತ್ತಿರುವಾಗ ಜನರಲ್ ಗುರುಪ್ರೀತ್ ಸಿಂಗ್ ಅವರು ದುರದೃಷ್ಟಕರವಾಗಿ ನಮ್ಮನ್ನಗಲಿದ್ದಾರೆ ಎಂದು ತಿಳಿಸಲು ವಿಷಾದವಿದೆ. ಇಂತಹ ದುಃಖದ ಸಮಯದಲ್ಲಿ ಭಾರತೀಯ ಸೇನೆಯು ದುಃಖಿತ ಕುಟುಂಬದೊಂದಿಗೆ ಇರಲಿದೆ. ಅವರ ಯೋಗಕ್ಷೇಮ ನೋಡಿಕೊಳ್ಳಲು ಬದ್ಧವಾಗಿದೆ ಎಂದು ತಿಳಿಸಿದೆ.
ಯೋಧ ಗುರುಪ್ರೀತ್ಸಿಂಗ್ ಅವರು ತಾಯಿ ಲಖ್ವಿಂದರ್ ಕೌರ್ ಅವರನ್ನು ಅಗಲಿದ್ದಾರೆ ಎಂದು ಅದು ಹೇಳಿದೆ. ಚಿನಾರ್ ಕಾರ್ಪ್ಸ್ ಪಡೆ ವೀರಯೋಧ ಗುರುಪ್ರೀತ್ ಸಿಂಗ್ ಅವರಿಗೆ ಪುಷ್ಪಾಂಜಲಿ ಅರ್ಪಿಸಿ ನಮನ ಸಲ್ಲಿಸಿದೆ. ಅಗಲಿದ ಯೋಧನ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದೆ.
ಪೂಂಚ್ನಲ್ಲಿ ಸೇನೆ ಮೇಲೆ ಉಗ್ರ ದಾಳಿ: ಗಡಿ ಜಿಲ್ಲೆಯಾದ ಪೂಂಚ್ನಲ್ಲಿ ಸೇನಾ ವಾಹನದ ಮೇಲೆ ಶುಕ್ರವಾರ ದಾಳಿ ನಡೆದಿದೆ. ಖನೇತಾರ್ ಪ್ರದೇಶದಲ್ಲಿ ಸಿಎಒ ಸೇನಾ ವಾಹನ ತೆರಳುತ್ತಿದ್ದಾಗ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೈನಿಕರು ಸಹ ಪ್ರತಿದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ದಾಳಿಗೂ ಮುನ್ನ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು, ಹೆಚ್ಚಿನ ಉಗ್ರ ಪೀಡಿತ ಪ್ರದೇಶಗಳಾದ ಪೂಂಚ್ ಮತ್ತು ರಾಜೌರಿಯಲ್ಲಿ ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ. ಆದರೆ, ಪರಿಸ್ಥಿತಿ ಸೂಕ್ಷ್ಮತೆಯಿಂದ ಕೂಡಿದ್ದು ಬಿಗುವಿನ ವಾತಾವರಣ ಇದೆ ಎಂದು ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಉಗ್ರ ದಾಳಿ ನಡೆದಿದೆ.
ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಎಂದಿನಂತೆ ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳು ಉಗ್ರರನ್ನು ಸದೆ ಬಡಿಯಲು ಪ್ರದೇಶವನ್ನು ಸುತ್ತುವರಿದಿವೆ. ಮೂಲಗಳ ಪ್ರಕಾರ ಘಟನಾ ಸ್ಥಳದಿಂದ ದಾಳಿಕೋರ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಐಎಎಫ್ ವಿಮಾನದ ಅವಶೇಷ ಪತ್ತೆ!