ರಾಯಪುರ (ಛತ್ತೀಸ್ಗಢ): ಪಿಕ್ನಿಕ್ಗೆ ಎಂದು ಬಂದ ಆರು ಜನರು ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಛತ್ತೀಸ್ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಿಂದ 14 ಮಂದಿ ಇಲ್ಲಿನ ರಾಮ್‌ದಾಹಾ ಜಲಪಾತಕ್ಕೆ ಬಂದಿದ್ದರು.
ಇಂದು ಎರಡು ವಾಹನಗಳಲ್ಲಿ 14 ಜನರು ರಾಮ್ದಾಹ ಜಲಪಾತಕ್ಕೆ ಬಂದಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ರಾಮ್ದಾಹ ಜಲಪಾತದಲ್ಲಿ ಎಲ್ಲರೂ ಸ್ನಾನ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಆರು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಷಯ ತಿಳಿದು ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಓಡಿ ಬಂದಿದ್ದಾರೆ. ಇತ್ತ, ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಿದ್ದಾರೆ. ಗ್ರಾಮಸ್ಥರ ನೆರವಿನಿಂದ 2 ಜನರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಇನ್ನೂ ನಾಲ್ವರಿಗಾಗಿ ಹುಡುಕಾಟ ನಡೆಯುತ್ತಿದೆ.
ನಾವು ದೇವಸ್ಥಾನ ನಿರ್ಮಾಣದ ಕೆಲಸಕ್ಕೆಂದು ಬಂದಿದ್ದೆವು. ಈ ವೇಳೆ ಇಲ್ಲಿ ಕೆಲವರು ಜಲಪಾತದ ಕೆಳಗೆ ಮುಳುಗುತ್ತಿರುವುದನ್ನು ಕಂಡು ಅವರನ್ನು ರಕ್ಷಿಸಲು ಓಡಿ ಬಂದೆವು ಎಂದು ಗ್ರಾಮಸ್ಥರಾದ ಶಿವಕುಮಾರ್ ಮತ್ತು ಗುಲ್ಶನ್ ಕುಮಾರ್ ಎಂಬುವರು ತಿಳಿಸಿದ್ದಾರೆ.
ಇನ್ನು, ಇದೇ ರಾಮದಾಹ ಜಲಪಾತದಲ್ಲಿ ಈ ಹಿಂದೆಯೂ ಇಂತಹ ಘಟನೆಗಳು ಸಂಭವಿಸಿದೆ. ಸುಮಾರು ಐದು ತಿಂಗಳ ಹಿಂದೆ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ದೇವರ ದರ್ಶನಕ್ಕೆ ಟ್ರಾಕ್ಟರ್ನಲ್ಲಿ ಹೋಗುತ್ತಿದ್ದಾಗ ಅಪಘಾತ: ಆರು ಜನರ ಸಾವು