ETV Bharat / bharat

ಕೋಲ್ಕತ್ತಾ ನಕಲಿ ಲಸಿಕೆ ಹಗರಣ: ಪ್ರಮುಖ ಆರೋಪಿ ಕಚೇರಿ ಮೇಲೆ ಎಸ್​ಐಟಿ ದಾಳಿ - ನಕಲಿ ಕೋವಿಡ್ ಲಸಿಕೆ

ನಕಲಿ ಲಸಿಕಾ ಶಿಬಿರ ಏರ್ಪಡಿಸಿ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಸೇರಿದಂತೆ ಹಲವರಿಗೆ ಲಸಿಕೆ ನೀಡಿದ್ದ ಪ್ರಕರಣದ ತನಿಖೆಯನ್ನು ಎಸ್​ಐಟಿ ಚುರುಕುಗೊಳಿಸಿದೆ.

SIT raids office of main accused in Kolkata vaccine scam
ಕೊಲ್ಕತ್ತಾ ನಕಲಿ ಲಸಿಕೆ ಹಗರಣ
author img

By

Published : Jul 4, 2021, 11:26 AM IST

ಕೋಲ್ಕತ್ತಾ : ಐಎಎಸ್​ ಅಧಿಕಾರಿಯಂತೆ ನಟಿಸಿ ನಕಲಿ ಕೋವಿಡ್ ಲಸಿಕೆ ಶಿಬಿರ ನಡೆಸಿದ ಪ್ರಕರಣದ ಆರೋಪಿ ದೇಬಂಜನ್ ದೇಬ್​ನ ಕಚೇರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ದಾಳಿ ನಡೆಸಿದೆ.

ಕೋಲ್ಕತ್ತಾ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಹಾಜರಾತಿ ಪುಸ್ತಕಗಳು, ಸಂದರ್ಶಕರ ಸ್ಲಿಪ್‌, ಉದ್ಯೋಗ ಅರ್ಜಿ, ನಕಲಿ ಟೆಂಡರ್ ದಾಖಲೆಗಳು ಸೇರಿದಂತೆ ಹಲವು ವಸ್ತುಗಳನ್ನು ದೇಬ್​ ಕಚೇರಿಯಿಂದ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ನಕಲಿ ಲಸಿಕೆ ಹರಗಣಕ್ಕೆ ಸಂಬಂಧಪಟ್ಟಂತೆ ದೇಬಂಜನ್ ದೇಬ್ ಆತನ ಸಹಾಯಕ ಇಂದ್ರಜಿತ್ ಶಾ, ಭದ್ರತಾ ಸಿಬ್ಬಂದಿ ಅರವಿಂದ ಬೈದ್ಯಾ ಈ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಶುಕ್ರವಾರ ಆರೋಪಿ ಶಾ'ನನ್ನು ಬಂಧಿಸಲಾಗಿದೆ. ಈತ ನಕಲಿ ಲಸಿಕೆ ಶಿಬಿರ ಏರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಮುಂದಿನ ಶುಕ್ರವಾರದ ವೇಳೆಗೆ ಪ್ರಕರಣದ ಸಂಬಂಧ ಅಫಿಡವಿಟ್ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೈಕೋರ್ಟ್​ ಸೂಚಿಸಿದೆ.

ಓದಿ : Watch Video- ಕೆಚ್ಚೆದೆಯ ಅಂಗಡಿ ಮಾಲೀಕ.. ಫೈರಿಂಗ್​ಗೆ ಬೆಚ್ಚಿ ಓಡಿಹೋದ Gangsters

ಪೊಲೀಸರು ಪ್ರಕಾರ, ಬಂಧಿತ ಆರೋಪಿಗಳು ನಗರದ ಸಿಟಿ ಕಾಲೇಜು ಮತ್ತು ಕಸಬಾದಲ್ಲಿ ಇದೇ ರೀತಿಯ ನಕಲಿ ಲಸಿಕಾ ಶಿಬಿರ ಆಯೋಜಿಸಿದ್ದರು. ಪ್ರಕರಣದ ತನಿಖೆ ನಡೆಸುವ ಸಲುವಾಗಿ ಜೂನ್ 25 ರಂದು ಎಸ್​ಐಟಿ ತಂಡವನ್ನು ರಚಿಸಲಾಗಿದೆ. ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ದೂರು ದಾಖಲಿಸಿದ ಬಳಿಕ ಪೊಲೀಸರು ಪ್ರಮುಖ ಆರೋಪಿ ದೇಬ್​ನನ್ನು ಬಂಧಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.