ETV Bharat / bharat

1,540 ಸಹೋದರಿಯರು, ಒಂದು ವಾರ ರಾಖಿ ಹಬ್ಬ: ಸೂರತ್​ ಉದ್ಯಮಿಯ ಸಹೋದರ ಪ್ರೀತಿ ಅನನ್ಯ - ಸಹೋದರ ಸಹೋದರಿಯರ ನಡುವಿನ ಅಪಾರ ಪ್ರೀತಿಯ ಸಂಕೇತ

ಸಹೋದರ-ಸಹೋದರಿಯರ ಪ್ರೀತಿ ಬಾಂಧವ್ಯದ ಹಬ್ಬ ರಕ್ಷಾಬಂಧನ. ಸೂರತ್​ನ ಈ ವ್ಯಕ್ತಿಗಿದ್ದಾರೆ 1540 ಸಹೋದರಿಯರು. ಇವರು ಒಂದು ವಾರ ಆಚರಿಸುತ್ತಾರೆ ರಕ್ಷಾಬಂಧನ.

1540 ಸಹೋದರಿಯರು, ಒಂದು ವಾರ ರಾಖಿ ಹಬ್ಬ: ಸೂರತ್​ ಉದ್ಯಮಿಯ ಸಹೋದರ ಪ್ರೀತಿ ಅನನ್ಯ
1540 sisters, one week of Rakhi festival
author img

By

Published : Aug 11, 2022, 6:48 PM IST

ಸೂರತ್: ಸಹೋದರ ಸಹೋದರಿಯರ ನಡುವಿನ ಅಪಾರ ಪ್ರೀತಿಯ ಸಂಕೇತ ರಕ್ಷಾ ಬಂಧನ. ಈ ಪವಿತ್ರ ಹಬ್ಬದಂದು ಸಹೋದರಿ ತನ್ನ ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾಳೆ ಮತ್ತು ಸಹೋದರನ ದೀರ್ಘಾಯುಷ್ಯಕ್ಕೆ ಹಾರೈಸುತ್ತಾಳೆ. ಈ ರಕ್ಷಾಬಂಧನದಂದು ಸೂರತ್​ನ ಅಣ್ಣ-ತಂಗಿ ಪ್ರೀತಿಯ ಅದ್ಭುತ ಕಥೆಯೊಂದು ಇಲ್ಲಿದೆ ನೋಡಿ.

ಇಲ್ಲೊಬ್ಬ ಸಹೋದರನಿಗೆ ಎಷ್ಟು ಸೋದರಿಯರಿದ್ದಾರೆ ಎಂದರೆ ಅವರೆಲ್ಲರಿಂದ ಕೈಗೆ ರಾಖಿ ಕಟ್ಟಿಸಿಕೊಳ್ಳಲು ಈತನಿಗೆ ಜಾಗ ಸಾಕಾಗಲ್ಲ. ಸೂರತ್‌ನ ಚಿರಾಗ್ ದೋಷಿ ಅವರಿಗೆ 20, 50 ಅಥವಾ 100 ಅಲ್ಲ. ಇವರಿಗೆ 1,540 ಸಹೋದರಿಯರಿದ್ದಾರೆ. ಎಲ್ಲರೂ ಒಂದು ದಿನ ರಕ್ಷಾ ಬಂಧನ್ ಆಚರಿಸಿದರೆ ಇವರು ಒಂದು ವಾರ ಪೂರ್ತಿ ಹಬ್ಬ ಆಚರಿಸುತ್ತಾರೆ. ಒಂದು ದಿನದಲ್ಲಿ ಇವರಿಗೆ ಎಲ್ಲರಿಂದಲೂ ರಾಖಿ ಕಟ್ಟಿಸಿಕೊಳ್ಳಲು ಸಾಧ್ಯವಾಗದ ಕಾರಣ ಇವರು ಪೂರ್ತಿ ಒಂದು ವಾರ ಸಹೋದರಿಯರ ಬಳಿಗೆ ತೆರಳಿ ರಾಖಿ ಕಟ್ಟಿಸಿಕೊಳ್ಳುತ್ತಾರೆ. ಪ್ರತಿವರ್ಷವೂ ಇವರ ಸಹೋದರಿಯರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಶೇಷ.

ಚಿರಾಗ್ ದೋಷಿ ಸಮಾಜದ ಎಲ್ಲ ವರ್ಗಗಳ ಸಹೋದರಿಯರನ್ನು ಹೊಂದಿದ್ದು, ಎಲ್ಲ ಸಹೋದರಿಯರನ್ನು ಸಮಾನವಾಗಿ ನೋಡಿಕೊಳ್ಳುತ್ತಾರೆ. ಪ್ರತಿ ಹಬ್ಬದಲ್ಲಿಯೂ ಸಹೋದರಿಯರನ್ನು ನೆನಪಿಸಿಕೊಂಡು ಅವರನ್ನು ಭೇಟಿ ಮಾಡಲು ಹೋಗುತ್ತಾರೆ. ವಿಶೇಷವಾಗಿ ರಕ್ಷಾ ಬಂಧನದಂದು ರಾಖಿ ಮತ್ತು ಸಿಹಿತಿಂಡಿಗಳೊಂದಿಗೆ ಸಹೋದರಿಯರ ಬಲಿಗೆ ಹೋಗಿ ರಾಖಿ ಕಟ್ಟಿಸಿಕೊಳ್ಳುತ್ತಾರೆ.

ವೃತ್ತಿಯಿಂದ ಬಿಲ್ಡರ್ ಆಗಿರುವ, ಸೂರತ್ ನಿವಾಸಿ ಚಿರಾಗ್ ದೋಷಿ ಮಾತನಾಡಿ, "ಕೆಲವರಿಗೆ ಒಬ್ಬರೂ ಸಹೋದರಿ ಇರುವುದಿಲ್ಲ. ಆದರೆ ನನಗೆ ಸುಮಾರು 1540 ಸಹೋದರಿಯರಿದ್ದಾರೆ. ಗುಜರಾತ್ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ನನ್ನ ಸಹೋದರಿಯರಿದ್ದಾರೆ. ಈ ಸಹೋದರಿಯರು ನನ್ನ ಶಕ್ತಿಯಾಗಿದ್ದಾರೆ. ನಾನು ನನ್ನ ಸೇವಾ ಕಾರ್ಯಗಳಿಗೆ ಅವರಿಂದ ಸ್ಫೂರ್ತಿ ಪಡೆಯುತ್ತೇನೆ. ಮುಂದಿನ ದಿನಗಳಲ್ಲಿ ನಾನು 2100 ಸಹೋದರಿಯರನ್ನು ಹೊಂದಲು ಬಯಸುತ್ತೇನೆ. ಎಚ್‌ಐವಿ ಪೀಡಿತ, ಕ್ಯಾನ್ಸರ್ ಪೀಡಿತ ಸಹೋದರಿಯರು ಮತ್ತು ಇತರ ಕ್ಷೇತ್ರಗಳ ಸಹೋದರಿಯರು ಸಹ ನನಗೆ ರಾಖಿಗಳನ್ನು ಕಟ್ಟುತ್ತಾರೆ" ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.