ಕಾನ್ಪುರ (ಉತ್ತರ ಪ್ರದೇಶ): ಅಕ್ರಮವಾಗಿ ವಿದೇಶದಿಂದ ಬರುವ ಕರೆಗಳನ್ನು ಟೆಲಿಫೋನ್ ಎಕ್ಸ್ಚೇಂಜ್ ಮೂಲಕ ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದ ಗುಂಪನ್ನು ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಭೇದಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಿರ್ಜಾ ಅಸಾದ್ ಮತ್ತು ಶಾಹಿದ್ ಜಮಾಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಸುಮಾರು 4 ಸಾವಿರಕ್ಕೂ ಅಧಿಕ ಪೂರ್ವ ಸಕ್ರಿಯ ಸಿಮ್ ಕಾರ್ಡ್, ಮೋಡೆಮ್ ರೂಟರ್ ಹಾಗೂ ಇತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣಕ್ಕೆ ಬಗ್ಗೆ ಎಟಿಎಸ್ (ಭಯೋತ್ಪಾದಕ ನಿಗ್ರಹ ದಳ) ಹೇಳಿಕೆಯ ಬಿಡುಗಡೆಗೊಳಿಸಿದ್ದು, "ಅಂತಾರಾಷ್ಟ್ರೀಯ ಗೇಟ್ ವೇ ಅನ್ನು ಬೈಪಾಸ್ ಮಾಡಿ ವಿದೇಶದಿಂದ ಬರುವ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುವ ಬಗ್ಗೆ ಮಾಹಿತಿ ಪಡೆದಿದ್ದೆವು, ಅದರಂತೆ ಇಬ್ಬರು ಆರೋಪಿಗಳನ್ನು ಇಂದು ಬಂಧಿಸಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ ಎಂದು ತಿಳಿಸಿದರು. ಅಂತಾರಾಷ್ಟ್ರೀಯ ಗೇಟ್ ವೇ ಅನ್ನು ಬೈಪಾಸ್ ಮಾಡುವುದರಿಂದ ಕರೆ ಮಾಡಿದವರನ್ನು ಗುರುತಿಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಹವಾಲಾ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಮತ್ತು ದೇಶಕ್ಕೆ ಆದಾಯದ ನಷ್ಟದಂತಹ ದೇಶ ವಿರೋಧಿ ಚಟುವಟಿಕೆಗಳ ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಕೋರಿಯರ್ ಮೂಲಕ ಸಿಮ್ ಕಾರ್ಡ್ಗಳ ರವಾನೆ: ಆರೋಪಿಗಳು ಪೂರ್ವ ಸಕ್ರಿಯ ಸಿಮ್ ಕಾರ್ಡ್ಗಳ್ನು ಕೊರಿಯರ್ ಮೂಲಕ ಸಿಮ್ ಕಾರ್ಡ್ ಬಾಕ್ಸ್ಗಳನ್ನೂ ರವಾನಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆ ಮೂಲಕ ಅಧಿಕಾರಿಗಳಿಗೆ ತಿಳಿದು ಬಂದಿದೆ. ಇದೀಗ ನಗರದ ಎಲ್ಲ ಕೊರಿಯರ್ ಕಂಪನಿ ನಿರ್ವಾಹಕರನ್ನೂ ವಿಚಾರಣೆಗೊಳಪಡಿಸಲಾಗಿದ್ದು, ಈ ಗ್ಯಾಂಗ್‌ನಲ್ಲಿ ಸಿಮ್ ಕಾರ್ಡ್‌ಗಳನ್ನು ಕಳುಹಿಸುವ ವ್ಯಕ್ತಿಗಳು ಯಾರು ಎಂಬುದರ ಜಾಲ ಪತ್ತೆ ಹಚ್ಚಬೇಕಾಗಿದೆ. ಆರೋಪಿಗಳು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಇತರ ರಾಜ್ಯಗಳ ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದರು ಎಂದು ಅಧಿಕಾರಿಗಳಿಗೆ ತಿಳಿದು ಬಂದಿದೆ.
ನಕ್ಸಲ್ವಾದಿ ಬಂಧನ: ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ವಾದಿ ದಿನೇಶ್ ಗೋಪೆಯನ್ನು ನೇಪಾಳದಲ್ಲಿ ಬಂಧಿಸಲಾಗಿದೆ. ಈತನ ತಲೆಗೆ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಎನ್‌ಐಎ ಮತ್ತು ಜಾರ್ಖಂಡ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರಗಾಮಿ ಸಂಘಟನೆಯಾದ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ ಮುಖ್ಯಸ್ಥ ಗೋಪೆಯನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಭಾರತದಲ್ಲಿ ದಿನೇಶ್ ನೇತೃತ್ವದ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾದ ಚಟುವಟಿಕೆಯ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ಹೀಗಾಗಿ ಆತ ನೇಪಾಳಕ್ಕೆ ಪಲಾಯನವಾಗಿ ಅಲ್ಲಿಂದ ಸಂಘಟನೆಯನ್ನು ನಿರ್ವಹಣೆ ಮಾಡುತ್ತಿದ್ದ. ಜಾರ್ಖಂಡ್ ಪೊಲೀಸರ ಜೊತೆಗೆ ಕೇಂದ್ರ ತನಿಖಾ ಸಂಸ್ಥೆಯೂ ದಿನೇಶ್ ಪತ್ತೆಗಾಗಿ ನಿರಂತರವಾಗಿ ಪ್ರಯತ್ನ ನಡೆಸಿತ್ತು. ಇದರಿಂದ ದಿನೇಶ್ ಭಾರತದ ನೆರೆಯ ರಾಷ್ಟ್ರ ನೇಪಾಳದ ರಾಜಧಾನಿ ಆತ ಆಶ್ರಯ ಪಡೆದುಕೊಂಡಿರುದ್ದ. ಈ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದರು
ಇದನ್ನೂ ಓದಿ: ಶ್ರೀನಗರದಲ್ಲಿ ಜಿ20 ಸಭೆ: ಸಿರಿಧಾನ್ಯಗಳ ಖಾದ್ಯಗಳನ್ನು ಸವಿಯಲಿರುವ ಪ್ರತಿನಿಧಿಗಳು