ETV Bharat / bharat

17 ವರ್ಷದ ಬಳಿಕ ಪಾಕ್‌ ಜೈಲಿಂದ ಮರಳಿ ತಾಯ್ನಾಡಿಗೆ..; ಮನೆಯಲ್ಲಿ 'ದೀಪಾವಳಿ', ಆನಂದಭಾಷ್ಪ!

ಬಿಹಾರದ ಸುಪೌಲ್​ನ ಶ್ಯಾಮಸುಂದರ್ ದಾಸ್ ಎಂಬಾತ ಪಾಕಿಸ್ತಾನದಲ್ಲಿ 17 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು. ಇದೀಗ ದೀಪಾವಳಿಯ ದಿನ ಬಿಹಾರದ ತನ್ನ ಮನೆಗೆ ಹಿಂದಿರುಗಿದ್ದು, ವಯಸ್ಸಾದ ತಂದೆ ಸಂತೋಷದಿಂದ ಕಣ್ಣೀರು ಹಾಕಿದರು.

author img

By

Published : Oct 25, 2022, 10:08 PM IST

ಲಾಲ್ ಶ್ಯಾಮಸುಂದರ್ ದಾಸ್
ಲಾಲ್ ಶ್ಯಾಮಸುಂದರ್ ದಾಸ್

ಸುಪೌಲ್(ಬಿಹಾರ): 14 ವರ್ಷಗಳ ವನವಾಸದ ನಂತರ ಭಗವಾನ್ ಶ್ರೀರಾಮ ಅಯೋಧ್ಯೆಗೆ ಹಿಂದಿರುಗಿದಾಗ ಜನರು ಸಂತೋಷದಿಂದ ತುಪ್ಪದ ದೀಪಗಳನ್ನು ಬೆಳಗಿಸಿ ಸಂಭ್ರಮದ ದೀಪಾವಳಿ ಆಚರಿಸಿದ್ದರು ಎಂಬುದು ಪುರಾಣ ಪ್ರಸಿದ್ಧ ನಂಬಿಕೆ. ಅದೇ ರೀತಿ 17 ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿದ್ದ ಬಿಹಾರದ ಲಾಲ್ ಶ್ಯಾಮಸುಂದರ್ ದಾಸ್ ಎಂಬವರು ದೀಪಾವಳಿಯ ದಿನ ಅವರ ಮನೆ ತಲುಪಿದಾಗ ಅವರ ಮನೆಯಲ್ಲಿ ಆನಂದದ ಬೆಳಕು ಹರಿಯಿತು. ಅಪ್ಪನ ಕಣ್ಣುಗಳಲ್ಲಿ ಬದುಕಿನ ಹೊಸ ಭರವಸೆಯ ಕಿರಣ ಮೂಡಿತು.

ಭವಾನಿಪುರ ದಕ್ಷಿಣ ಪಂಚಾಯಿತಿ ವಾರ್ಡ್ ನಂ.3ರ ನಿವಾಸಿ ಭಗವಾನ್ ದಾಸ್ ಅವರ ಪುತ್ರ ಶ್ಯಾಮಸುಂದರ್ ದಾಸ್ 2005ರಲ್ಲಿ ಕೆಲವು ಸ್ನೇಹಿತರ ಜತೆ ಪಂಜಾಬ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಇತರ ಐವರೊಂದಿಗೆ ಅಮೃತಸರದಿಂದ ಪಾಕಿಸ್ತಾನ ಗಡಿ ದಾಟಿ ಪಾಕಿಸ್ತಾನ ತಲುಪಿದ್ದರು. ಅಲ್ಲಿ, ಯಾವುದೇ ದಾಖಲೆಗಳಿಲ್ಲದೆ ಸಿಕ್ಕಿಬಿದ್ದರು. ಪಾಕಿಸ್ತಾನಿ ಪೊಲೀಸರು ಇವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿದ್ದರು.

ದಾಖಲೆಗಳ ಕೊರತೆಯಿಂದ ಜೈಲು ಶಿಕ್ಷೆ: ಶ್ಯಾಮಸುಂದರ್ ದಾಸ್ ಜೊತೆ ಬಂಧಿತರಾಗಿದ್ದ ಇತರೆ ಐವರು ಸಹಚರರನ್ನು ಆರು ತಿಂಗಳ ಬಳಿಕ ವಿಚಾರಣೆ ಹಾಗು ಮತ್ತಿತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬಿಡುಗಡೆ ಮಾಡಿ ಪಾಕಿಸ್ತಾನ ಪೊಲೀಸರು ಭಾರತಕ್ಕೆ ಕಳುಹಿಸಿದ್ದರು. ಆದರೆ ಶ್ಯಾಮಸುಂದರ್ ಅವರ ಮಾನಸಿಕ ಸ್ಥಿತಿ ಸರಿಯಿಲ್ಲದ ಕಾರಣ ಅವರಿಗೆ ತನ್ನ ಕುರಿತು ಸರಿಯಾದ ಮಾಹಿತಿ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪಾಕಿಸ್ತಾನದ ಜೈಲಿನಲ್ಲಿ 17 ವರ್ಷ ಕಳೆಯಬೇಕಾಯಿತು.

ಪಾಕಿಸ್ತಾನದ ರಾಯಭಾರ ಕಚೇರಿಯು ಶ್ಯಾಮಸುಂದರ್ ಭಾರತೀಯ ಎಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ಕೇಳಿತ್ತು. ಆದರೆ ಆತ ಭಾರತದಲ್ಲಿ ಇರುವ ಸ್ಥಳದ ಬಗ್ಗೆ ನಿಖರ ಮಾಹಿತಿಯ ಕೊರತೆಯಿಂದಾಗಿ ಇಷ್ಟು ವರ್ಷಗಳನ್ನು ಜೈಲಿನಲ್ಲೇ ಕಳೆಯಬೇಕಾಗಿತ್ತು. ಈ ವಿಷಯ ಕುಟುಂಬದ ಸದಸ್ಯರಿಗೂ ತಿಳಿದಿರಲಿಲ್ಲ.

ತಂದೆಗೆ ಒಂದು ವರ್ಷದ ಹಿಂದೆ ಮಾಹಿತಿ ಸಿಕ್ಕಿತ್ತು: 2021 ರಲ್ಲಿ ಶ್ಯಾಮಸುಂದರ್ ಪಾಕಿಸ್ತಾನದ ಜೈಲಿನಲ್ಲಿರುವ ಸುದ್ದಿ ಕುಟುಂಬಕ್ಕೆ ಸಿಕ್ಕಿತ್ತು ಎಂದು ತಂದೆ ಭಗವಾನ್ ದಾಸ್ ಹೇಳಿದ್ದಾರೆ. ಅಂದಿನಿಂದ, ಅವರ ಸಂಬಂಧಿಕರು ಪ್ರತಾಪಗಂಜ್ ಪೊಲೀಸ್ ಠಾಣೆಯನ್ನು ಸಂಪರ್ಕಿಸುತ್ತಲೇ ಇದ್ದರು ಮತ್ತು ಅವರನ್ನು ಪಾಕಿಸ್ತಾನದಿಂದ ಕರೆತರಲು ಸಹಾಯಕ್ಕಾಗಿ ಮನವಿ ಮಾಡುತ್ತಿದ್ದರು.

ಶ್ಯಾಮಸುಂದರ್ ಭಾರತೀಯ ಎಂಬುದಕ್ಕೆ ಭಗವಾನ್ ದಾಸ್ ಎಲ್ಲ ಸಾಕ್ಷ್ಯಗಳನ್ನು ಪೊಲೀಸರಿಗೆ ಒದಗಿಸಿದ್ದರು. ಇದನ್ನು ಕಳೆದ ವರ್ಷ ಪ್ರತಾಪಗಂಜ್ ಎಸ್‌ಎಚ್‌ಒ ಭಾರತೀಯ ರಾಯಭಾರ ಕಚೇರಿಗೆ ಕಳುಹಿಸಿದ್ದರು. ಅದೇ ಆಧಾರದ ಮೇಲೆ, ಪಾಕಿಸ್ತಾನ ಸರ್ಕಾರವು 29 ಸೆಪ್ಟೆಂಬರ್ 2022 ರಂದು ಶ್ಯಾಮಸುಂದರ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಪೂಜೆ ಮಾಡಿ ಹಚ್ಚಿಟ್ಟಿದ್ದ ದೀಪದಿಂದ ಬಸ್​ಗೆ ಬೆಂಕಿ: ಚಾಲಕ, ನಿರ್ವಾಹಕ ಸಜೀವ ದಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.