ETV Bharat / bharat

ಅಫ್ತಾಬ್​ಗೆ 2 ತಾಸು ನಾರ್ಕೋ ಟೆಸ್ಟ್​: ನಡೆಯುತ್ತಾ ಬ್ರೈನ್ ಮ್ಯಾಪಿಂಗ್? - etv bharat kannada

ವರದಿಗಳ ಪ್ರಕಾರ, ರೋಹಿಣಿಯಲ್ಲಿರುವ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಎಫ್‌ಎಸ್‌ಎಲ್) ಯಲ್ಲಿ ನಡೆದ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಅಫ್ತಾಬ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆದರೆ ಈ ಬಗ್ಗೆ ಆತ ಯಾವುದೇ ಪಶ್ಚಾತ್ತಾಪದ ಲಕ್ಷಣಗಳನ್ನು ತೋರಿಸಿಲ್ಲ.

ಅಫ್ತಾಬ್​ಗೆ 2 ತಾಸು ನಾರ್ಕೋ ಟೆಸ್ಟ್​: ನಡೆಯುತ್ತಾ ಬ್ರೈನ್ ಮ್ಯಾಪಿಂಗ್?
Aftab Poonawala narco test
author img

By

Published : Dec 1, 2022, 5:36 PM IST

ನವದೆಹಲಿ: ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾ ವಾಕರ್ ಅವಳನ್ನು ಹತ್ಯೆಗೈದ ಆರೋಪಿ ಅಫ್ತಾಬ್ ಪೂನಾವಾಲಾ ಗುರುವಾರ ದೆಹಲಿಯ ರೋಹಿಣಿ ಆಸ್ಪತ್ರೆಯಲ್ಲಿ ನಾರ್ಕೋ ಪರೀಕ್ಷೆಗೆ ಒಳಗಾಗಿದ್ದಾನೆ. ಸುಮಾರು ಎರಡು ಗಂಟೆಗಳ ಕಾಲ ನಡೆದ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾರ್ಕೊ ಪರೀಕ್ಷೆಯಲ್ಲಿ ವ್ಯಕ್ತಿಯ ನರದೊಳಗೆ ಔಷಧವನ್ನು ಸೇರಿಸಲಾಗುತ್ತದೆ. ಈ ಔಷಧದಿಂದ ಟೆಸ್ಟ್​ಗೆ ಒಳಗಾಗುವ ವ್ಯಕ್ತಿಯು ಅರಿವಳಿಕೆಯ ವಿವಿಧ ಹಂತಗಳಿಗೆ ಪ್ರವೇಶಿಸುತ್ತಾನೆ. ಸೋಡಿಯಂ ಪೆಂಟೊಥಾಲ್, ಸ್ಕೋಪೋಲಮೈನ್ ಮತ್ತು ಸೋಡಿಯಂ ಅಮಿಟಾಲ್‌ನಂತಹ ಔಷಧಗಳು ವ್ಯಕ್ತಿಯ ಸ್ವಯಂ ಪ್ರಜ್ಞೆಯನ್ನು ಕಡಿಮೆ ಮಾಡುತ್ತವೆ ಮತ್ತು ವ್ಯಕ್ತಿಯನ್ನು ಸಂಮೋಹನ ಸ್ಥಿತಿ ಅಥವಾ ನಿದ್ರಾಜನಕ ಸ್ಥಿತಿಗೆ ಹೋಗುವಂತೆ ಮಾಡುತ್ತವೆ.

ಆರೋಗ್ಯ ಸಂಪೂರ್ಣವಾಗಿ ಚನ್ನಾಗಿದೆ: ಪರೀಕ್ಷೆಯ ನಂತರ ಅಫ್ತಾಬ್​ನ್ನು ನಿಗಾ ಇರಿಸಲಾಗಿದೆ ಮತ್ತು ಆತನ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಉತ್ತಮವಾಗಿದೆ ಎಂದು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಸಾಗರ್ ಪ್ರೀತ್ ಹೂಡಾ ಹೇಳಿದ್ದಾರೆ.

ಅಫ್ತಾಬ್​ಗೆ 2 ತಾಸು ನಾರ್ಕೋ ಟೆಸ್ಟ್​: ನಡೆಯುತ್ತಾ ಬ್ರೈನ್ ಮ್ಯಾಪಿಂಗ್?
ಅಫ್ತಾಬ್​ಗೆ 2 ತಾಸು ನಾರ್ಕೋ ಟೆಸ್ಟ್​: ನಡೆಯುತ್ತಾ ಬ್ರೈನ್ ಮ್ಯಾಪಿಂಗ್?

ಪರೀಕ್ಷೆಗೆ ಮುನ್ನ ಆರೋಗ್ಯ ತಪಾಸಣೆ: ನಾರ್ಕೋ ಪರೀಕ್ಷೆಗೂ ಮುನ್ನ ಅಫ್ತಾಬ್​ನ ರಕ್ತದೊತ್ತಡ, ನಾಡಿಮಿಡಿತ, ದೇಹದ ಉಷ್ಣತೆ ಮತ್ತು ಹೃದಯ ಬಡಿತದ ಸಾಮಾನ್ಯ ತಪಾಸಣೆ ಮಾಡಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾರ್ಕೋ ಪರೀಕ್ಷೆಗೆ ಆತ ಒಪ್ಪಿಗೆ ನೀಡಿರುವ ಪತ್ರವನ್ನು ನಾರ್ಕೋ ಪರೀಕ್ಷೆ ನಡೆಸುತ್ತಿರುವ ತಂಡದ ಸದಸ್ಯರೊಬ್ಬರು ಸಂಪೂರ್ಣವಾಗಿ ಆತನ ಮುಂದೆ ಓದಿ ಹೇಳಿದರು. ಅಫ್ತಾಬ್ ಇದಕ್ಕೆ ಸಹಿ ಮಾಡಿದ ನಂತರ ಕಾರ್ಯವಿಧಾನವನ್ನು ಪ್ರಾರಂಭಿಸಲಾಯಿತು ಎಂದು ಮಾಧ್ಯಮ ವರದಿ ತಿಳಿಸಿದೆ.

ಗುರುವಾರ ನ್ಯಾಯಾಲಯದಿಂದ ನಾರ್ಕೊ ಪರೀಕ್ಷೆಗೆ ಅನುಮತಿ ಪಡೆಯುವ ಮುಂಚೆ, ಅಫ್ತಾಬ್ ಈ ವಾರದ ಆರಂಭದಲ್ಲಿ ಬಹು ಸುತ್ತಿನ ಪಾಲಿಗ್ರಾಫ್ ಪರೀಕ್ಷೆಗಳಿಗೆ ಒಳಗಾಗಿದ್ದ. ನಾರ್ಕೊ ಪರೀಕ್ಷೆಗಿಂತ ಭಿನ್ನವಾಗಿ, ಪಾಲಿಗ್ರಾಫ್ ಪರೀಕ್ಷೆಯು ಆಕ್ರಮಣಶೀಲವಲ್ಲದ ವಿಧಾನವಾಗಿದೆ. ವರದಿಗಳ ಪ್ರಕಾರ, ರೋಹಿಣಿಯಲ್ಲಿರುವ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಎಫ್‌ಎಸ್‌ಎಲ್) ಯಲ್ಲಿ ನಡೆದ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಅಫ್ತಾಬ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆದರೆ, ಈ ಬಗ್ಗೆ ಆತ ಯಾವುದೇ ಪಶ್ಚಾತ್ತಾಪದ ಲಕ್ಷಣಗಳನ್ನು ತೋರಿಸಿಲ್ಲ.

  • दिल्ली: श्रद्धा हत्याकांड के आरोपी आफताब को नार्को टेस्ट के लिए तिहाड़ जेल से अंबेडकर अस्पताल लाया गया। pic.twitter.com/tgy436qNij

    — ANI_HindiNews (@AHindinews) December 1, 2022 " class="align-text-top noRightClick twitterSection" data=" ">

ನಾರ್ಕೋ ಟೆಸ್ಟ್​ ನಂತರ ಮುಂದೇನು?: ಶುಕ್ರವಾರ ಅಫ್ತಾಬ್​ನನ್ನು ಎಫ್‌ಎಸ್‌ಎಲ್‌ ಲ್ಯಾಬ್​ಗೆ ಮತ್ತೆ ಕರೆದುಕೊಂಡು ಹೋಗುವ ಸಾಧ್ಯತೆಗಳಿವೆ. ಎಫ್‌ಎಸ್‌ಎಲ್ ಮೂಲಗಳ ಪ್ರಕಾರ, ಆತ ಪಾಲಿಗ್ರಾಫ್ ಮತ್ತು ನಾರ್ಕೊ ಪರೀಕ್ಷೆಗಳಲ್ಲಿ ನೀಡಿದ ಉತ್ತರಗಳನ್ನು ಹೋಲಿಸಿ ವಿಶ್ಲೇಷಿಸಲಾಗುತ್ತದೆ. ಆತ ನೀಡಿದ ಉತ್ತರಗಳ ಬಗ್ಗೆ ಆತನಿಗೆ ತಿಳಿಸಲಾಗುವುದು. ಈ ಪರೀಕ್ಷೆಗಳ ಸಮಯದಲ್ಲಿ ಆರೋಪಿಯ ತಪ್ಪೊಪ್ಪಿಗೆಗಳನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಪರಿಗಣಿಸಲಾಗುವುದಿಲ್ಲ. ಆದರೆ, ಸತ್ಯ ತಿಳಿಯಲು ಮತ್ತು ಪುರಾವೆಗಳನ್ನು ಸಂಗ್ರಹಿಸಲು ತನಿಖಾ ಸಂಸ್ಥೆಗಳು ಈ ತಂತ್ರಗಳನ್ನು ಬಳಸುತ್ತವೆ.

ಪಾಲಿಗ್ರಾಫ್ ಮತ್ತು ನಾರ್ಕೋ ಪರೀಕ್ಷೆಗಳ ಉತ್ತರಗಳು ಒಂದೇ ರೀತಿಯಲ್ಲಿ ಇರದಿದ್ದ ಪಕ್ಷದಲ್ಲಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಅಫ್ತಾಬ್‌ನ ಬ್ರೈನ್ ಮ್ಯಾಪಿಂಗ್‌ಗೆ ಮುಂದಾಗಬಹುದು ಎಂದು ಎಫ್‌ಎಸ್‌ಎಲ್ ಮೂಲಗಳು ತಿಳಿಸಿವೆ.

ಅಫ್ತಾಬ್ ಮೇ 18 ರಂದು ಶ್ರದ್ಧಾಳ ಕತ್ತು ಹಿಸುಕಿ ಕೊಲೆ ಮಾಡಿ, ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ನಗರದ ವಿವಿಧ ಭಾಗಗಳಲ್ಲಿ ವಿಲೇವಾರಿ ಮಾಡಿದ್ದ. ದೆಹಲಿ ಪೊಲೀಸರು ಮೆಹ್ರೌಲಿ ಅರಣ್ಯ ಪ್ರದೇಶದಿಂದ ದೇಹದ 13 ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಅವು ಶ್ರದ್ಧಾ ಅವರದ್ದೇ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಡಿಎನ್‌ಎ ಪರೀಕ್ಷೆಯ ಫಲಿತಾಂಶ ಇನ್ನೂ ಲಭ್ಯವಾಗಿಲ್ಲ. ಡಿಎನ್‌ಎ ಪ್ರೊಫೈಲಿಂಗ್‌ನಲ್ಲಿನ ವಿಳಂಬದ ಬಗ್ಗೆ ತಜ್ಞರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಇದನ್ನೂ ಓದಿ: ಶ್ರದ್ಧಾ ವಾಲ್ಕರ್​ ಅಫ್ತಾಬ್​ ಮಾದಕ ವ್ಯಸನಿಯಾಗಿದ್ದ ಎಂದು ಹೇಳಿದ್ದಳು: ನಟ ಇಮ್ರಾನ್ ನಜೀರ್ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.