ಮುಂಬೈ(ಮಹಾರಾಷ್ಟ್ರ): ಪತ್ರಾ ಚಾಲ್ ಭೂ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ಸದ್ಯ ಜಾರಿ ನಿರ್ದೇಶನಾಲಯ(ಇಡಿ) ವಶದಲ್ಲಿದ್ದು ವಿಚಾರಣೆ ಮುಂದುವರೆದಿದೆ. ಇಂದು ಈ ಕುರಿತ ವಿಚಾರಣೆ ನಡೆಸಿದ ಇಲ್ಲಿನ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ರಾವುತ್ ಇಡಿ ಕಸ್ಟಡಿ ಅವಧಿಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಿ ಆದೇಶಿಸಿದೆೆ.
ವಿಚಾರಣೆಯ ಸಂದರ್ಭದಲ್ಲಿ, "ಸೆಲ್ನಲ್ಲಿ ನಿಮಗೆ ಏನಾದ್ರೂ ಸಮಸ್ಯೆ ಇದೆಯೇ?" ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಆಗ ರಾವುತ್ "ಸರಿಯಾದ ಗಾಳಿ ಬರುತ್ತಿಲ್ಲ" ಎಂದು ಹೇಳಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿರುವ ಇಡಿ ವಕೀಲರು, ಅವರನ್ನು ಇರಿಸಿರುವ ಕಚೇರಿಯಲ್ಲಿ ಎಸಿ ವ್ಯವಸ್ಥೆ ಇದೆ. ರಾವುತ್ ಸುಳ್ಳು ಹೇಳುತ್ತಿದ್ದಾರೆಂದು ತಿಳಿಸಿದರು.
ಪ್ರಕರಣದಲ್ಲಿ ಸಂಜಯ್ ರಾವುತ್ ಅವರ ಖಾತೆಗೆ 1 ಕೋಟಿ 6 ಲಕ್ಷ ರೂ ಹೇಗೆ ಬಂದಿದೆ?. ವಿದೇಶಿ ಪ್ರವಾಸಕ್ಕೆ ಎಷ್ಟು ಹಣ ಖರ್ಚಾಗಿದೆ? ಎಂಬುದರ ಬಗ್ಗೆ ನಾವು ತನಿಖೆ ನಡೆಸಬೇಕಾಗಿದೆ. ಹೆಚ್ಚಿನ ವಿಚಾರಣೆಗೊಸ್ಕರ ಅವರನ್ನು ವಶಕ್ಕೆ ನೀಡುವಂತೆ ಕೋರ್ಟ್‌ನಲ್ಲಿ ಇಡಿ ಮಾಡಿದ ಮನವಿಯನ್ನು ಕೋರ್ಟ್ ಪುರಸ್ಕರಿಸಿತು.
ಇದನ್ನೂ ಓದಿ: 'ಪತ್ರಾ ಚಾಲ್' ಭೂ ಹಗರಣ ಪ್ರಕರಣ: ಶಿವಸೇನಾ ಸಂಸದ ಸಂಜಯ್ ರಾವುತ್ ಬಂಧನ
ಕಳೆದ ಐದು ದಿನಗಳ ಹಿಂದೆ ಸಂಜಯ್ ರಾವುತ್ ಅವರ ಮುಂಬೈ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ವಶಕ್ಕೆ ಪಡೆದು ನಂತರ ಬಂಧಿಸಲಾಗಿತ್ತು.