ETV Bharat / bharat

ಶೇರಾ - ಲಾಲುಗೆ ಭಾರಿ ಬೇಡಿಕೆ: 1.5 ಲಕ್ಷದ ಈ ಭೂಪ ಯಾರು?

ಬಕ್ರೀದ್ ಹಿನ್ನೆಲೆ ವಾರಾಣಸಿಯ ವಿವಿಧೆಡೆ ಮೇಕೆ ಮಾರುಕಟ್ಟೆಯನ್ನು ಸ್ಥಾಪಿಸಲಾಗಿದ್ದು, ಭಾರಿ ವ್ಯಾಪಾರ ನಡೆಯುತ್ತಿದೆ.

author img

By

Published : Jul 9, 2022, 8:26 PM IST

Bakra Mandi of Varanasi
ವಾರಣಾಸಿಯ ಮೇಕೆ ಮಾರುಕಟ್ಟೆ

ವಾರಾಣಸಿ(ಉತ್ತರ ಪ್ರದೇಶ): ಮುಸ್ಲಿಂ ಬಾಂಧವರ ಬಲಿದಾನದ ಹಬ್ಬವಾದ ಬಕ್ರೀದ್ ಹಬ್ಬವನ್ನು ನಾಳೆ ದೇಶದೆಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಹೊಸ ಬಟ್ಟೆ ತೊಟ್ಟು, ಅಲ್ಲಾರಿಗೆ ಪ್ರಾರ್ಥನೆ ಸಲ್ಲಿಸಿ, ಆತ್ಮೀಯರೊಂದಿಗೆ ಹಬ್ಬದೂಟ ಸವಿಯುತ್ತಾರೆ.

Bakra Mandi of Varanasi
ವಾರಣಾಸಿಯ ಮೇಕೆ ಮಾರುಕಟ್ಟೆ

ಬಕ್ರೀದ್ ಹಿನ್ನೆಲೆ ವಾರಾಣಸಿ ವಿವಿಧೆಡೆ ಮೇಕೆ ಮಾರುಕಟ್ಟೆಯನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಭೇಲುಪುರದಲ್ಲಿರುವ ಲಲಿತಾ ಚಿತ್ರಮಂದಿರದ ಮೈದಾನದಲ್ಲಿ ಮೇಕೆ ಮಾರುಕಟ್ಟೆ ಸ್ಥಾಪಿಸಲಾಗಿತ್ತು. ಅಲ್ಲಿ ಶೇರಾ ಎಂಬ ಮೇಕೆ ಆಕರ್ಷಣೆಯ ಕೇಂದ್ರವಾಗಿತ್ತು. ಇದು ಬನಾರಸ್‌ನ ಅತ್ಯಂತ ದುಬಾರಿ ಮೇಕೆ ಎಂದು ಹೇಳಲಾಗಿದೆ.

ವಾರಣಾಸಿಯ ಮೇಕೆ ಮಾರುಕಟ್ಟೆ

ಈ ಮೇಕೆ ಮಾರುಕಟ್ಟೆಗೆ ಕಾನ್ಪುರ, ಇತಾವ್ಹಾ, ಫತೇಪುರ್, ಅಜಂಗಢ, ಬಿಹಾರ, ರಾಜಸ್ಥಾನ, ಅಮೃತಸರ, ಸಿರೋಹಿ ಸೇರಿದಂತೆ ಮತ್ತಿತರ ಕಡೆಗಳಿಂದ ವ್ಯಾಪಾರಸ್ಥರು ತಮ್ಮ ಮೇಕೆಗಳೊಂದಿಗೆ ಆಗಮಿಸಿದ್ದರು. ಮೇಕೆಗಳ ಬೆಲೆ ಏಳು ಸಾವಿರ ರೂಪಾಯಿಯಿಂದ ಆರಂಭವಾಗಿ ಒಂದೂವರೆ ಲಕ್ಷ ರೂಪಾಯಿವರೆಗೂ ಇದೆ. ಇದರಲ್ಲಿ ಪಂಜಾಬ್ ತಳಿಯ 3 ಮೇಕೆಗಳು ಅತ್ಯಂತ ದುಬಾರಿಯಾಗಿ ಕಂಡು ಬಂದವು. ಶೇರಾ ಮೇಕೆಗೆ ಒಂದೂವರೆ ಲಕ್ಷ ರೂ., ಲಾಲು ಮೇಕೆಗೆ 1 ಲಕ್ಷದ 20 ಸಾವಿರ, ಕಳ್ಳು ಮೇಕೆಗೆ 1 ಲಕ್ಷ ರೂ. ಇದೆ.

ಛತ್ತೀಸ್‌ಗಢದಿಂದ ಬಂದ ಗುಲಾಬ್ ಮೊಹಮ್ಮದ್ ಹುಸೇನ್ ಮಾತನಾಡಿ, ಈ ಮೇಕೆಗಳನ್ನು ಪಂಜಾಬ್ ಮತ್ತು ಅಮೃತಸರದಿಂದ ತರಲಾಗಿದೆ. ನಾನು ಮೇಕೆಗಳ ವ್ಯಾಪಾರಿ. ತೂಕಕ್ಕೆ ಅನುಗುಣವಾಗಿ ಮೇಕೆಗಳ ಬೆಲೆ ನಿಗದಿ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಈ 'ಮೇಕೆ' ಬೆಲೆ ಬರೋಬ್ಬರಿ 77 ಲಕ್ಷ ರೂಪಾಯಿ.. ವಿಶೇಷತೆ ಏನು ಗೊತ್ತಾ!?

ಅತ್ಯಂತ ದುಬಾರಿ ಮೇಕೆ ಬಗ್ಗೆ ಮಾತನಾಡುತ್ತಾ, ಶೇರಾ ಮೇಕೆ ಬೆಲೆ 1.5 ಲಕ್ಷ ರೂಪಾಯಿ. ಇದರ ತೂಕ 120 ಕೆ.ಜಿ., ಎರಡೂವರೆ ವರ್ಷದಿಂದ 3 ವರ್ಷದವರೆಗಿನ ಮೇಕೆಗಳಿವೆ. ಲಾಲು ಮೇಕೆ 100 ಕೆಜಿ ಮತ್ತು ಕಳ್ಳು ಮೇಕೆ 95 ಕೆಜಿ ಇದೆ. ಮೇಕೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಬನಾರಸ್ ಮಂಡಿಯಲ್ಲಿ ಈ ತಳಿಯ ಮೇಕೆಗಳನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.