ETV Bharat / bharat

ಎನ್​ಸಿಪಿಯಲ್ಲಿ ಬಿರುಕಿಲ್ಲ, ಅಜಿತ್ ಪವಾರ್ ನಮ್ಮ ಪಕ್ಷದ ನಾಯಕ: ಶರದ್ ಪವಾರ್ - ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಸ್ಫೋಟಕ ಹೇಳಿಕೆ

NCP Political Crisis: ಮಹಾರಾಷ್ಟ್ರದ ರಾಜಕೀಯದಲ್ಲಿ ಸಂಚಲನ ಉಂಟಾಗಿದ್ದು, ಅಜಿತ್ ಪವಾರ್ ನಮ್ಮ ನಾಯಕ ಎಂದು ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Sharad Pawar
ಶರದ್ ಪವಾರ್
author img

By ETV Bharat Karnataka Team

Published : Aug 25, 2023, 11:41 AM IST

ಪುಣೆ (ಮಹಾರಾಷ್ಟ್ರ) : ಮಹಾ ವಿಕಾಸ್ ಅಘಾಡಿ ನೇತೃತ್ವದಲ್ಲಿ ನಡಯಲಿರುವ I N D I A ಒಕ್ಕೂಟದ 3 ನೇ ಸಭೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಬೆನ್ನಲ್ಲೇ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. "ಎನ್‌ಸಿಪಿಯಲ್ಲಿ ಯಾವುದೇ ಬಿರುಕುಗಳಿಲ್ಲ, ಅಜಿತ್ ಪವಾರ್ ಅವರೇ ನಮ್ಮ ನಾಯಕ" ಎಂಬ ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಬಾರಾಮತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈರುಳ್ಳಿ ರಫ್ತು ಸುಂಕದ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿಲುವಿನ ಕುರಿತು ಪ್ರಶ್ನಿಸಿದರು. ಜೊತೆಗೆ, ಈರುಳ್ಳಿ ಮೇಲಿನ ಶೇ. 40 ರಷ್ಟು ತೆರಿಗೆಯನ್ನು ಕೇಂದ್ರ ಸರ್ಕಾರ ತಗ್ಗಿಸಬೇಕು, ಈರುಳ್ಳಿ ಉತ್ಪಾದನೆಗೆ ತಗಲುವ ವೆಚ್ಚ ಅಧಿಕವಾಗುತ್ತಿದ್ದು, ಇದರಿಂದ ರೈತರು ಬೀದಿ ಪಾಲಾಗುತ್ತಿದ್ದಾರೆ. ಹಾಗೆಯೇ, ಈರುಳ್ಳಿ ಖರೀದಿಗೆ ಕೇಂದ್ರ ಸರ್ಕಾರ ನೀಡಿರುವ ಹಣ ರೈತರಿಗೆ ಸಾಕಾಗುತ್ತಿಲ್ಲ" ಎಂದರು.

ಇದನ್ನೂ ಓದಿ : Maharashtra Politics: ಅಜಿತ್​ ನನ್ನ ಸೋದರ ಸಂಬಂಧಿ, ಭೇಟಿಯಲ್ಲಿ ತಪ್ಪೇನು?- ಶರದ್ ಪವಾರ್

"ನಿನ್ನೆ ಕೇಂದ್ರ ಸಚಿವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ಭೇಟಿ ಮಾಡಲು ಸಾಧ್ಯವಾಗಲಿಲ್ಲ. ನಾನು ಕೃಷಿ ಸಚಿವನಾಗಿದ್ದಾಗ ಈರುಳ್ಳಿ ರಫ್ತಿನ ಮೇಲೆ ನಲವತ್ತು ಪ್ರತಿಶತ ರಫ್ತು ತೆರಿಗೆ ವಿಧಿಸಿರಲಿಲ್ಲ. ಇದೀಗ, ಕೇಂದ್ರ ಸರ್ಕಾರ ನಲವತ್ತು ಪರ್ಸೆಂಟ್ ಸುಂಕ ಏಕೆ ವಿಧಿಸಿದೆ ಎಂಬುದನ್ನು ವಿವರಿಸಬೇಕು. ಸಕ್ಕರೆ ರಫ್ತಿನ ಮೇಲೆ ಸಹ ನಿರ್ಬಂಧ ಹೇರಬೇಕೇ? ಎಂಬ ಬಗ್ಗೆ ಕೇಂದ್ರ ಸರ್ಕಾರದ ಸಚಿವಾಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ನಿರ್ಬಂಧಗಳನ್ನು ಜಾರಿಗೆ ತಂದರೆ ಸಕ್ಕರೆ ಮಾರುಕಟ್ಟೆ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಕೇಂದ್ರದ ಮಾಜಿ ಕೃಷಿ ಸಚಿವ ಶರದ್​​ ಪವಾರ್ ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ : Sharad Pawar : 'ಇಂಡಿಯಾ ಒಕ್ಕೂಟ'ದಲ್ಲಿ ಗೊಂದಲವಿಲ್ಲ, ಬಿಜೆಪಿ ಜೊತೆ ಎನ್​ಸಿಪಿ ಸೇರಲ್ಲ: ಶರದ್​ ಪವಾರ್

ಬಳಿಕ, ಶರದ್ ಪವಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಮತ್ತು ವಿಧಾನ ಪರಿಷತ್ತಿನ ಮಾಜಿ ವಿರೋಧ ಪಕ್ಷದ ನಾಯಕ ಪ್ರವೀಣ್ ದಾರೇಕರ್, "ಶರದ್ ಪವಾರ್ ಇಂತಹ ಹೇಳಿಕೆ ನೀಡಿದರೂ ನ್ಯಾಯಾಲಯದ ಹೋರಾಟದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ, ನ್ಯಾಯಾಲಯಕ್ಕೆ ಅಂಕಿ- ಅಂಶಗಳು ಮತ್ತು ಸತ್ಯವಷ್ಟೇ ಮುಖ್ಯವಾಗಿದೆ. ಶರದ್ ಪವಾರ್ ಅವರ ರಾಜಕೀಯ ಇಂದಿಗೂ ಗೊಂದಲಮಯವಾಗಿದೆ. ಯಾರ ಬದುಕನ್ನು ರಾಜಕೀಯಗೊಳಿಸಲಾಗುತ್ತಿದೆ ಎಂಬುದನ್ನು ಕಾರ್ಯಕರ್ತರು ಮೊದಲು ಅರ್ಥ ಮಾಡಿಕೊಳ್ಳಬೇಕು?, ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲವಿದೆ. ಈಗ ಶರದ್ ಪವಾರ್ ನೀಡಿರುವ ಹೇಳಿಕೆಯಿಂದ ಅವರ ಗುಂಪು ಬಿಜೆಪಿಯನ್ನು ಬೆಂಬಲಿಸಿದೆ ಎಂದು ಹೇಳಿದರು.

ಇದನ್ನೂ ಓದಿ : Maharashtra Politics : ಕುತೂಹಲಕಾರಿ ಬೆಳವಣಿಗೆ.. ಶರದ್ ಪವಾರ್ ಭೇಟಿಯಾದ ಅಜಿತ್ ಪವಾರ್, ಪ್ರಫುಲ್ ಪಟೇಲ್ ಬಣದ NCP ಸಚಿವರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.