ETV Bharat / bharat

ಹರಿದ್ವಾರ ಅರ್ಧಕುಂಭದಲ್ಲಿ ಬಾಂಬ್​ ಸ್ಫೋಟಿಸುವ ಪ್ಲಾನ್​.. ಐವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ - ಹರಿದ್ವಾರ ಅರ್ಧಕುಂಭ

ಹರಿದ್ವಾರದಲ್ಲಿ 2016ರಲ್ಲಿ ಆಯೋಜನೆ ಮಾಡಲಾಗಿದ್ದ ಅರ್ಧ ಕುಂಭದಲ್ಲಿ ಬಾಂಬ್​ ಸ್ಫೋಟಿಸಲು ಯೋಜನೆ ರೂಪಿಸಿದ್ದ ಐವರು ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.

Ardh Kumbh in Haridwar in 2016
Ardh Kumbh in Haridwar in 2016
author img

By

Published : Jun 4, 2022, 10:22 AM IST

ನವದೆಹಲಿ: 2016ರಲ್ಲಿ ಹರಿದ್ವಾರದಲ್ಲಿ ಆಯೋಜನೆಗೊಂಡಿದ್ದ ಅರ್ಧ ಕುಂಭ ಮೇಳದಲ್ಲಿ ಬಾಂಬ್​ ಸ್ಫೋಟಿಸಲು ಯೋಜನೆ ರೂಪಿಸಿದ್ದ ಐವರು ಆರೋಪಿಗಳಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ದೆಹಲಿಯ ಎನ್​ಐಎ ಕೋರ್ಟ್​​​ ಜೈಲು ಶಿಕ್ಷೆ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಪರ್ವೀನ್​ ಸಿಂಗ್​ ಅಪರಾಧಿಗಳಾಗಿರುವ ಅಖ್ಲಾಕುರ್​ ರೆಹಮಾನ್​, ಮೊಹಮ್ಮದ್​ ಅಜೀಮುಶನ್, ಮೊಹಮ್ಮದ್ ಮೆರಾಜ್​, ಮೊಹಮ್ಮದ್ ಒಸಾಮಾ ಮತ್ತು ಮೊಹ್ಸಿನ್ ಇಬ್ರಾಹಿಂ ಸಯ್ಯದ್​ ಅವರಿಗೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 120 ಬಿ (ಅಪರಾಧ ಪಿತೂರಿ), ಮತ್ತು ಸೆಕ್ಷನ್ 18 (ಪಿತೂರಿ), 20 (ಭಯೋತ್ಪಾದಕ ಗುಂಪು ಅಥವಾ ಸಂಘಟನೆಯ ಸದಸ್ಯರಾಗಿದ್ದಕ್ಕಾಗಿ ಶಿಕ್ಷೆ) ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಮತ್ತು ಸ್ಫೋಟಕ ವಸ್ತುಗಳ ವಿಭಾಗಗಳ ಅಡಿ ದೋಷಿಗಳೆಂದು ಘೋಷಿಸಲಾಗಿದೆ.

ಇದನ್ನೂ ಓದಿ: ಕನಸುಗಳನ್ನ ನನಸು ಮಾಡುವ ಉತ್ಸಾಹ.. 2 ಕಿ.ಮೀ ಒಂಟಿ ಕಾಲಲ್ಲಿ ನಡೆದ ಬರುವ ವಿದ್ಯಾರ್ಥಿ

ಆರೋಪಿಗಳು ತಮ್ಮ ಮೇಲಿನ ಎಲ್ಲ ಆರೋಪ ಒಪ್ಪಿಕೊಂಡಿದ್ದು, ಸ್ವಯಂ ಪ್ರೇರಣೆಯಿಂದ ತಪ್ಪೊಪ್ಪಿಕೊಂಡಿರುವುದರಿಂದ ನ್ಯಾಯಾಲಯದ ಗಮನಕ್ಕೆ ಬಂದಿದೆ ಎಂದು ಕೋರ್ಟ್ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡನೆ ಮಾಡಿದ್ದ ಎನ್ಐಎ ಪಬ್ಲಿಕ್​ ಪ್ರಾಸಿಕ್ಯೂಟರ್ ವಿಶಾಲ್ ದ್ವಿವೇದಿ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಕೋರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.