ಖಗಾರಿಯಾ: ಬಿಹಾರದ ಖಗಾರಿಯಾದಲ್ಲಿ ಗುರುವಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಕ್ರಿ ಬಸ್ ಸ್ಯಾಂಡ್ ಬಳಿ ಕಸ ಸಂಗ್ರಹಿಸುವವರ ಮನೆಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಏಳು ಜನ ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಕಸ ಸಂಗ್ರಹಿಸುವವರು ಕಸ ಸಂಗ್ರಹಿಸುತ್ತಿದ್ದಾಗ, ಅವರ ಮಕ್ಕಳು ಮನೆಯೊಳಗೆ ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಬಾಂಬ್‌ಗಳನ್ನು ತಂದಿದ್ದಾರೆ.
ಬಾಂಬ್ ಅನ್ನು ಪಟಾಕಿ ಎಂದು ತಪ್ಪಾಗಿ ಭಾವಿಸಿದ ಅವರು, ಸ್ಫೋಟಿಸಲು ಪ್ರಯತ್ನಿಸಿದ್ದಾರೆ. ಇದು ಮೂರರಿಂದ ನಾಲ್ಕು ಸ್ಫೋಟಗಳಿಗೆ ಕಾರಣವಾಯಿತು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಮಗುಚಿ ಬಿದ್ದ ಬೋಟ್: ನಾಲ್ವರ ಮೃತದೇಹ ಪತ್ತೆ, 14 ಮಂದಿ ನಾಪತ್ತೆ
ಏಳು ಮಂದಿ ಗಾಯಾಳುಗಳು ಖಗಾರಿಯಾದ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಳು ಮಂದಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಭಾಗಲ್ಪುರಕ್ಕೆ ಕಳುಹಿಸಲಾಗಿದೆ. ಪರಿಸ್ಥಿತಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಅಲೋಕ್ ರಂಜನ್ ಘೋಷ್, ಎಫ್‌ಎಸ್‌ಎಲ್ ಮತ್ತು ಬಾಂಬ್ ಸ್ಕ್ವಾಡ್ ತಂಡಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಲಿದ್ದು, ನಂತರವಷ್ಟೇ ಘಟನೆಯ ಕಾರಣ ಬಯಲಿಗೆ ಬರಲು ಸಾಧ್ಯ ಎಂದರು.