ಮುಂಬೈ: ಸತತ ನಾಲ್ಕು ದಿನಗಳಿಂದ ಮುಂಬೈ ಷೇರುಪೇಟೆ ಕುಸಿತದ ಹಾದಿಯಲ್ಲಿದೆ. ವಾರದ ಆರಂಭದ ದಿನದ ಬೆಳಗಿನ ವ್ಯವಹಾರದಲ್ಲಿ ಷೇರುಪೇಟೆ 200 ಅಂಕ ಆರಂಭಿಕ ಇಳಿಕೆ ದಾಖಲಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಂಡು ಬಂದ ಹಿಂಜರಿತದ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಸಹ ಹಿಂಜರಿಕೆ ದಾಖಲಿಸಿದೆ. ಇನ್ನು ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ 15 ಸಾವಿರಕ್ಕಿಂತ ಕೆಳಕ್ಕಿಳಿದಿದೆ. ಪ್ರಮುಖ 30 ಷೇರುಗಳ ಬೆಲೆಯಲ್ಲಿ ಸುಮಾರು 60 ಅಂಕಗಳ ಇಳಿಕೆ ಕಂಡು ಬಂದಿದೆ.
ಎಂ ಅಂಡ್ ಎಂ, ಡಾ. ರೆಡ್ಡಿ, ಟಿಸಿಎಸ್ ಮತ್ತು ಬಜಾಜ್ ಆಟೋ ಷೇರುಗಳ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.
ಓದಿ: ಸತತ ಮೂರು ದಿನದಿಂದ ಪಾತಾಳದತ್ತ ಸೆನ್ಸೆಕ್ಸ್: ಇಂದು 435 ಪಾಯಿಂಟ್ ಕುಸಿತ