ETV Bharat / bharat

ಗಂಡು - ಹೆಣ್ಣಿನ ಧ್ವನಿಯಲ್ಲಿ ವಟಗುಟ್ಟುವ ಹೊಸ ಪ್ರಭೇದದ 'ಮ್ಯೂಸಿಕ್​ ಕಪ್ಪೆ' ಪತ್ತೆ

ಅರುಣಾಚಲಪ್ರದೇಶದಲ್ಲಿ ಹೊಸ ಜಾತಿಯ ಕಪ್ಪೆಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಮ್ಯೂಸಿಕ್​ ಕಪ್ಪೆ ಪತ್ತೆ
ಮ್ಯೂಸಿಕ್​ ಕಪ್ಪೆ ಪತ್ತೆ
author img

By ETV Bharat Karnataka Team

Published : Nov 22, 2023, 8:23 PM IST

ಇಟಾನಗರ (ಅರುಣಾಚಲಪ್ರದೇಶ) : ಪ್ರಾಣಿ ಪ್ರಪಂಚವೇ ಒಂದು ವಿಸ್ಮಯ. ಮೊಗೆದಷ್ಟೂ ಅದು ವಿಸ್ತೃತವೇ. ಗಂಡು- ಹೆಣ್ಣಿನ ಧ್ವನಿಯಲ್ಲಿ ವಟಗುಟ್ಟುವ ಹೊಸ ಪ್ರಭೇದದ ಕಪ್ಪೆಯನ್ನು ವಿಜ್ಞಾನಿಗಳು ಅರುಣಾಚಲಪ್ರದೇಶದಲ್ಲಿ ಪತ್ತೆ ಮಾಡಿದ್ದಾರೆ. ನೋವಾ ಡಿಹಿಂಗ್​ ನದಿ ಪಾತ್ರದಲ್ಲಿ ಇದನ್ನು ಶೋಧಿಸಲಾಗಿದ್ದು, ನದಿಯ ಹೆಸರನ್ನೇ ಸೂಚಿಸಲಾಗಿದೆ.

ಪತ್ತೆಯಾದ ಹೊಸ ಜಾತಿಯ ಕಪ್ಪೆಯು ಧ್ವನಿಯು ಸಂಗೀತದಂತೆ ಕೇಳಿಬರುತ್ತಿದ್ದು ಇದನ್ನು 'ಮ್ಯೂಸಿಕ್​ ಫ್ರಾಗ್​' ಎಂದು ವಿಜ್ಞಾನಿಗಳು ಕರೆದಿದ್ದಾರೆ. ಈ ಕಪ್ಪೆಯು ಮೂರು ರೀತಿಯಲ್ಲಿ ಧ್ವನಿ ಮಾಡುವ ವಿಶೇಷತೆ ಹೊಂದಿದೆ. ಇದನ್ನು ನಾವು ನೋವಾ ಡಿಹಿಂಗ್ ನದಿ ಬಳಿಯ ಜೌಗು ಪ್ರದೇಶದಲ್ಲಿ ಪತ್ತೆ ಮಾಡಿದೆವು. ಇದು ಹೆಚ್ಚೂ ಕಮ್ಮಿ ಕಾಡು ಬಾತುಕೋಳಿ ಜಾತಿಗೆ ಹೋಲುತ್ತದೆ. ಇದರ ಧ್ವನಿಯನ್ನೂ ನಾವು ಹಿಂದೆಂದೂ ಕೇಳಿರಲಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾಗಿ ಝೂಟಾಕ್ಸಾ ಜರ್ನಲ್‌ನಲ್ಲಿ ನವೆಂಬರ್ 15 ರಂದು ಪ್ರಕಟವಾದ ಲೇಖನದಲ್ಲಿ ಪ್ರಕಟವಾಗಿದೆ.

ವಿಜ್ಞಾನಿಗಳಾದ ಬಿಟುಪನ್ ಬೊರುವಾ, ವಿ ದೀಪಕ್ ಮತ್ತು ಅಭಿಜಿತ್ ದಾಸ್ ಅವರು 2021 ರ ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ಚಾಂಗ್ಲಾಂಗ್ ಮತ್ತು ಲೋಹಿತ್ ಜಿಲ್ಲೆಗಳಲ್ಲಿ ಕ್ಷೇತ್ರ ಸಮೀಕ್ಷೆ ನಡೆಸಿದ್ದರು. ಈ ವೇಳೆ, 6 ಸೆಂಟಿಮೀಟರ್ ಉದ್ದದ, ತೆಳು ಕೆನೆ ಬಣ್ಣ ಹೊಂದಿರುವ ಕಪ್ಪೆಯನ್ನು ಕಂಡು ಹಿಡಿದಿದ್ದರು. ಇದರ ದೇಹದ ಮಧ್ಯದಲ್ಲಿ ರೇಖೆಯ ಗುರುತಿದೆ.

ಹೊಸ ಕಪ್ಪೆಯ ವಿಶಿಷ್ಟತೆಗಳಿವು: ಆಳವಿಲ್ಲದ ನೀರಿನ ಕೊಳಗಳಲ್ಲಿ ಇದು ವಾಸಿಸುತ್ತದೆ. ಗಂಡು ಕಪ್ಪೆಗಳು ಜೋರಾಗಿ ಕೂಗುತ್ತವೆ. ಕಪ್ಪೆಯು ದೃಢವಾದ ದೇಹವನ್ನು ಹೊಂದಿದೆ. ಗಂಡು ಕಪ್ಪೆ ಸುಮಾರು 1.8 ಇಂಚು ಅಗಲ ಮತ್ತು 2.3 ಇಂಚು ಉದ್ದ ದೇಹ ಹೊಂದಿದ್ದರೆ, ಹೆಣ್ಣು 2.4 ಇಂಚು ಅಗಲ ಮತ್ತು 2.6 ಇಂಚು ಉದ್ದವನ್ನು ಹೊಂದಿದೆ. ನಡುಬೆನ್ನಿನ ಮೇಲೆ ಎಲುಬು ಊದಿಕೊಂಡಿದ್ದು, ಅದರ ಮೇಲೆ ಕಡು ಕಂದು ಬಣ್ಣದ ರೇಖೆ ಇದೆ. ಈ ಉಭಯಚರಗಳು ದುಂಡಾದ ಮುಖ ಮತ್ತು ನಯವಾದ ಚರ್ಮ, ತಿಳಿ ಕಂದು ಬಣ್ಣದ ಪಟ್ಟಿಗಳನ್ನು ದೇಹದ ತುಂಬಾ ಹೊಂದಿದೆ.

ಕಣ್ಣಿನ ಚರ್ಮದ ಮೇಲೆ ಮಚ್ಚೆ, ಪಟ್ಟಿಗಳು ಇವೆ. ಚಿನ್ನದ ಬಣ್ಣದ ಅಂಚು ಹೊಂದಿದೆ. ಕಣ್ಪೊರೆಗಳು ಗಾಢ ಕಂದು ಮತ್ತು ಗೋಲ್ಡನ್ ಸ್ಪಾಕಲ್ ಹೊಂದಿರುತ್ತವೆ.ಈ ಕಪ್ಪೆಗಳ ಗಂಟಲು, ಮುಂಗಾಲುಗಳು, ತೊಡೆಗಳು ಮತ್ತು ಹಿಂಭಾಗದ ಕಾಲುಗಳು ತಿಳಿ ಕಂದು ಮತ್ತು ಗುಲಾಬಿ ಬಣ್ಣದ್ದಾಗಿರುತ್ತವೆ. ತೊಡೆಯ ಹೊರಭಾಗವು ತಿಳಿ ಹಳದಿ ಬಣ್ಣದಿಂದ ಕೂಡಿದೆ. ಕೆನೆ ಬಣ್ಣದ ಎದೆ, ಚಿನ್ನದ ಹೊಳಪಿನ ಹೊಟ್ಟೆಯು ಹೊಂದಿರುತ್ತವೆ.

ಹೊಸ ಜಾತಿಗೆ ನೋವಾ ಡಿಹಿಂಗ್ ಹೆಸರು: ಈ ಪ್ರಭೇದದ ಕಪ್ಪೆಗಳು ಸಹಜವಾಗಿ ಜಪಾನ್, ತೈವಾನ್, ಚೀನಾ, ವಿಯೆಟ್ನಾಂ, ಲಾವೋಸ್ ಮತ್ತು ಥೈಲ್ಯಾಂಡ್​ನಲ್ಲಿ ಕಂಡುಬರುತ್ತದೆ. ಇವನ್ನು 'ನಿದಿರಾನ' ಜಾತಿಯಿಂದ ಗುರುತಿಸಲಾಗುತ್ತದೆ. ಇವು ಹೆಚ್ಚಾಗಿ ಜೌಗು ಪ್ರದೇಶಗಳು, ಕೊಳಗಳು ಮತ್ತು ಭತ್ತದ ಗದ್ದೆಗಳಲ್ಲಿ ವಾಸಿಸುತ್ತವೆ. ಮೊಟ್ಟೆಗಳನ್ನು ಇಡಲು ಹೆಚ್ಚಾಗಿ ಗೂಡುಗಳನ್ನು ನಿರ್ಮಿಸುತ್ತವೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ನೋವಾ ಡಿಹಿಂಗ್ ಪ್ರದೇಶದಲ್ಲಿ ಕಂಡು ಬಂದ ಮ್ಯೂಸಿಕ್​ ಫ್ರಾಗ್​ಗಳಲ್ಲಿ ಮೂರು ಗಂಡು ಮತ್ತು ಎರಡು ಹೆಣ್ಣು ಸೇರಿ ಐದು ಕಪ್ಪೆಗಳನ್ನು ವಿಜ್ಞಾನಿಗಳು ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ.. ಗುಡವಿ ಪಕ್ಷಿಧಾಮದಲ್ಲಿ ಪಕ್ಷಿಗಳ ಸಾವು: ಮರಣೋತ್ತರ ಪರೀಕ್ಷೆಯಲ್ಲಿ ಕಾರಣ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.