ETV Bharat / bharat

ಜಮ್ಮು ಕಾಶ್ಮೀರದ 57 ಶಾಲೆಗಳು, ರಸ್ತೆಗಳಿಗೆ ಹುತಾತ್ಮರು, ಗಣ್ಯರ ಹೆಸರು - Jammu and Kashmir administration

ಜಮ್ಮು ಕಾಶ್ಮೀರದ ಹಲವು ರಸ್ತೆಗಳು, ಸರ್ಕಾರಿ ಶಾಲೆಗಳಿಗೆ ಹುತಾತ್ಮರು, ಗಣ್ಯರ ಹೆಸರಿಡಲಾಗಿದೆ. ಈ ಮೂಲಕ ಅವರನ್ನು ಅಜರಾಮರವನ್ನಾಗಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಅಂಡಮಾನ್​-ನಿಕೋಬಾರ್​ನ ದ್ವೀಪಗಳಿಗೆ ಪರಮವೀರರ ಹೆಸರಿಟ್ಟಿತ್ತು.

schools-roads-named
ಜಮ್ಮು ಕಾಶ್ಮೀರದಲ್ಲಿ ಶಾಲೆಗಳಿಗೆ ಮರುನಾಮಕರಣ
author img

By

Published : Jan 31, 2023, 10:21 AM IST

ಜಮ್ಮು: ಸುಂದರ ಕಣಿವೆ ಜಮ್ಮು ಕಾಶ್ಮೀರ ಉಗ್ರರ ಉಪಟಳದಿಂದ ಬೆಂದಿದೆ. ಇದನ್ನು ಹೋಗಲಾಡಿಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದರೂ ಬಂದೂಕಿನ ಸದ್ದು ಮಾತ್ರ ನಿಂತಿಲ್ಲ. ಇದೀಗ ಕಣಿವೆಯ 57 ಶಾಲೆಗಳು, ರಸ್ತೆಗಳಿಗೆ ಹುತಾತ್ಮರು ಮತ್ತು ಗಣ್ಯರ ಹೆಸರನ್ನು ಮರುನಾಮಕರಣ ಮಾಡಿದೆ. ರಾಷ್ಟ್ರಸೇವೆಯಲ್ಲಿ ಪ್ರಾಣತ್ಯಾಗ ಮಾಡಿದವರ ಹೆಸರನ್ನು ಶಾಶ್ವತವಾಗಿ ಸ್ಮರಿಸಲು ಲೆಫ್ಟಿನೆಂಟ್​ ಗವರ್ನರ್​ ಮನೋಜ್ ಸಿನ್ಹಾ ನೇತೃತ್ವದ ಸರ್ಕಾರ ಮುಂದಾಗಿದೆ.

2017 ರಲ್ಲಿ ಶ್ರೀನಗರದ ಜಾಮಿಯಾ ಮಸೀದಿ ಮುಂದೆ ಹತ್ಯೆಯಾದ ಕಾಶ್ಮೀರಿ ಪಂಡಿತ ಮಖನ್ ಲಾಲ್ ಬಿಂದ್ರೂ ಮತ್ತು ಡಿಎಸ್​ಪಿ ಮೊಹಮ್ಮದ್ ಅಯೂಬ್ ಪಂಡಿತ್ ಸೇರಿದಂತೆ ಗಣ್ಯರ ಹೆಸರನ್ನು ರಸ್ತೆ, ಶಾಲೆಗಳಿಗೆ ನೀಡಲು ಸರ್ಕಾರ ಅನುಮತಿಸಿದೆ ಎಂದು ಸರ್ಕಾರದ ಕಾರ್ಯದರ್ಶಿ ಪಿಯೂಷ್ ಸಿಂಗ್ಲಾ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ಬಾಲಕಿಯರ ಶಾಲೆಗೆ ಅಧಿಕಾರಿಯ ಹೆಸರು: ಶ್ರೀನಗರದ ಫಾರ್ಮಸಿಯೊಂದರ ಮಾಲೀಕರಾಗಿದ್ದ ಪಂಡಿತ್ ಮಖನ್ ಲಾಲ್ ಬಿಂದ್ರೂ ಅವರ ಹೆಸರನ್ನು ಶ್ರೀನಗರದ ನಾಝ್​ನಿಂದ ಗೊನಿಖಾನ್​ ಮಾರುಕಟ್ಟೆಗೆ ಸಂಪರ್ಕಿಸುವ ರಸ್ತೆಗೆ ನಾಮಕರಣ ಮಾಡಲಾಗಿದೆ. ಅದರಂತೆ ಖಾನ್ಯಾರ್​ನಲ್ಲಿನ ಬಾಲಕಿಯರ ಸರ್ಕಾರಿ ಶಾಲೆಗೆ ಡಿಎಸ್​​ಪಿ ಮೊಹಮ್ಮದ್​ ಅಯೂಬ್​ ಪಂಡಿತ್​ ಅವರ ಹೆಸರಿಡಲಾಗಿದೆ. ಅಯೂಬ್​ ಪಂಡಿತ್ ಅವರನ್ನು 2017 ರ ಜೂನ್ 23 ರಂದು ಜಾಮಿಯಾ ಮಸೀದಿ ಬಳಿಗೆ ಎಳೆದು ತಂದು ವಿವಸ್ತ್ರಗೊಳಿಸಿ ಕಬ್ಬಿಣದ ರಾಡ್‌ಗಳಿಂದ ಹೊಡೆದು ಕೊಲ್ಲಲಾಗಿತ್ತು.

ಶೌರ್ಯ ಮೆರೆದ ಅಧಿಕಾರಿಯ ನೆನಪು: ಗಗ್ವಾಲ್ (ಕಥುವಾ) ನಲ್ಲಿರುವ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಮೇಜರ್ ರೋಹಿತ್ ಕುಮಾರ್ ಹೆಸರಿಟ್ಟರೆ, ಭಯೋತ್ಪಾದಕರಿಂದ ಹತ್ಯೆಗೀಡಾದ ಇನ್ಸ್‌ಪೆಕ್ಟರ್ ಶಬೀರ್ ಅಹ್ಮದ್ ಭಟ್ ಅವರ ಹೆಸರನ್ನು ಶಂಸಾಬಾದ್‌ನ ಸರ್ಕಾರಿ ಪ್ರಾಥಮಿಕ ಶಾಲೆಗೆ ಇಡಲಾಗಿದೆ. 2017 ರಲ್ಲಿ ಉಗ್ರಗಾಮಿಗಳೊಂದಿಗಿನ ಕಾದಾಟದಲ್ಲಿ ಕೊಲ್ಲಲ್ಪಟ್ಟ ಸಬ್​ಇನ್‌ಸ್ಪೆಕ್ಟರ್ ಇಮ್ರಾನ್ ಹುಸೇನ್ ತಕ್ ಅವರ ಹೆಸರನ್ನು ಬಸಂತ್‌ಗಢದ ಸರ್ಕಾರಿ ಹೈಯರ್ ಸೆಕೆಂಡರಿಗೆ ಹೆಸರಿಸಲಾಗಿದೆ. ಸಾಹಸಕ್ಕಾಗಿ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರವನ್ನು ನೀಡಲಾಗಿದೆ.

ಜುಲೈನಲ್ಲಿ ರಾಜಸ್ತಾನದ ಬಾರ್ಮರ್ ಬಳಿ ತರಬೇತಿಯ ಸಮಯದಲ್ಲಿ MiG-21 ವಿಮಾನ ಅಪಘಾತದಲ್ಲಿ ಅಸುನೀಗಿದ ವಿಂಗ್ ಕಮಾಂಡರ್ ಎಂ.ರಾಣಾ, ಫ್ಲೈಟ್ ಲೆಫ್ಟಿನೆಂಟ್ ಅದ್ವಿತಿಯಾ ಬಾಲ್ ಅವರ ಹೆಸರನ್ನು ಆರ್.ಎಸ್.ಪುರದಲ್ಲಿರುವ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಗೆ ಹೆಸರಿಸಲಾಗಿದೆ. ಇದಲ್ಲದೇ, ಎಎಸ್‌ಐ, ಪೊಲೀಸರು ಮತ್ತು ಸಿಆರ್‌ಪಿಎಫ್‌ನ 37 ಕಾನ್‌ಸ್ಟೇಬಲ್‌ಗಳು, ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳು, ಆರು ಸೆಲೆಕ್ಷನ್ ಗ್ರೇಡ್ ಕಾನ್‌ಸ್ಟೇಬಲ್‌ಗಳು ಮತ್ತು ಐವರು ವಿಶೇಷ ಪೊಲೀಸ್ ಅಧಿಕಾರಿಗಳ ಹೆಸರನ್ನು ಲೆಫ್ಟಿನೆಂಟ್​ ಗವರ್ನರ್​ ಆದೇಶದ ಮೇರೆಗೆ ವಿವಿಧ ರಸ್ತೆಗಳು ಮತ್ತು ಶಾಲೆಗಳಿಗೆ ಹೆಸರಿಸಲಾಗಿದೆ.

ದ್ವೀಪಗಳಿಗೆ ಪರಮವೀರರ ಹೆಸರು: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್​ ನಿಕೋಬಾರ್​ನಲ್ಲಿನ 21 ದೊಡ್ಡ ದ್ವೀಪಗಳಿಗೆ ದೇಶದ ಅತ್ಯುನ್ನತ ಸೇನಾ ಪ್ರಶಸ್ತಿಯಾದ ಪರಮವೀರ ಚಕ್ರ ಸ್ವೀಕರಿಸಿದ ಮಹಾನ್​ ವೀರ ಯೋಧರ ಹೆಸರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುಭಾಷ್​ಚಂದ್ರ ಬೋಸ್​ ಅವರ ಜನ್ಮದಿನದ ಅಂಗವಾಗಿ ನಾಮಕರಣ ಮಾಡಿದ್ದರು. ನೇತಾಜಿ ಸುಭಾಷ್​ಚಂದ್ರ ಬೋಸ್​ ದ್ವೀಪದಲ್ಲಿ ನಿರ್ಮಾಣವಾಗುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನೂ ಬಿಡುಗಡೆ ಮಾಡಿದ್ದರು.

ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಮತ್ತು ಸುಬೇದಾರ್ ಮೇಜರ್ ಯೋಗೇಂದ್ರ ಸಿಂಗ್ ಯಾದವ್ (ನಿವೃತ್ತ) ಸೇರಿದಂತೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರನ್ನು ಈ ದ್ವೀಪಗಳಿಗೆ ಹೆಸರಿಸುವ ಮೂಲಕ ಅವರನ್ನು ಕೇಂದ್ರ ಸರ್ಕಾರ ಅಜರಾಮರವನ್ನಾಗಿ ಮಾಡಿದೆ.

ಇದನ್ನೂ ಓದಿ: ನೇತಾಜಿ ಸ್ಮರಣೆ: ಅಂಡಮಾನ್​ ನಿಕೋಬಾರ್​ನ 21 ದ್ವೀಪಗಳಿಗೆ 'ಪರಮವೀರರ' ಹೆಸರು ಅನಾವರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.