ETV Bharat / bharat

ಸಾರ್ವಜನಿಕ ಕೆರೆಯಲ್ಲಿ ಸ್ನಾನ; ಕೆಳವರ್ಗದ ಮಹಿಳೆಯರನ್ನು ಅರೆಬೆತ್ತಲಾಗಿ ಮನೆಗೆ ಓಡಿಸಿ ಹಲ್ಲೆ: ದೂರು ದಾಖಲು

author img

By

Published : Jan 9, 2023, 9:59 PM IST

ಸಾರ್ವಜನಿಕ ಕೆರೆಯಲ್ಲಿ ಸ್ನಾನ ಮಾಡಿದ ಕೆಳವರ್ಗದ ಮಹಿಳೆಯರ ಮೇಲೆ ಹಲ್ಲೆ - ಅರೆಬೆತ್ತಲೆಯಾಗಿ ಮನೆ ಬಂದ ಮಹಿಳೆಯರು - ಕ್ರೌರ್ಯದ ವಿರುದ್ಧ ಕಾನೂನಿನ ಹೋರಾಟಕ್ಕೆ ಮುಂದಾದ ಸಂತ್ರಸ್ತೆಯರು.

Bathing women in underwear beaten
ಪರಿಶಿಷ್ಟ ಜಾತಿಯವರ ಮೇಲೆ ಹಲ್ಲೆ

ಚೆನ್ನೈ( ತಮಿಳುನಾಡು): ದೇಶ ಎಷ್ಟೇ ಅಭಿವೃದ್ಧಿ ಹೊಂದಿದರೂ ಅಲ್ಲಲ್ಲಿ ವರ್ಗಾಧಾರಿತ ಹಲ್ಲೆಗಳು ಕಂಡು ಬರುತ್ತಿದೆ. ಕೆಳವರ್ಗಕ್ಕೆ ಸೇರಿದ್ದಾರೆ ಎಂಬ ಉದ್ದೇಶಕ್ಕೆ ಸಾರ್ವಜನಿಕ ಪ್ರದೇಶವನ್ನು ಪ್ರವೇಶ ಮಾಡಿದ್ದಕ್ಕೆ ಹಲ್ಲೆ ಮಾಡಿವುದು ಅಲ್ಲಲ್ಲಿ ವರದಿಗಳಾಗುತ್ತಲೇ ಇರುತ್ತವೆ. ಇಂತಹುದ್ದೇ ಕೆಳವರ್ಗಕ್ಕೆ ಸೇರಿದ ಮಹಿಳೆಯರು ಸಾರ್ವಜನಿಕ ಕೆರೆಯಲ್ಲಿ ಸ್ನಾನ ಮಾಡಿದ್ದಾರೆ ಎಂಬ ಉದ್ದೇಶಕ್ಕೆ ಹಲ್ಲೆ ಮಾಡಿರುವ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.

ಪುದುಕೊಟ್ಟೈ ಜಿಲ್ಲೆಯ ಅರಂತಂಗಿ ಸಮೀಪದ ಕೂತಂಗುಡಿ ಗ್ರಾಮದ ಪರಿಶಿಷ್ಟ ಸಮುದಾಯದ ಮಹಿಳೆಯರಯು ಜಾತಿ ನಿಂದನೆ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಪೆರುಂಗಾಡು ಪಂಚಾಯತ್ ವ್ಯಾಪ್ತಿಯ ವೈರಾಂಡಿ ಹೊಂಡದಲ್ಲಿ ಹೊಸ ವರ್ಷದ ದಿನದಂದು ಗ್ರಾಮದ 3 ಮಹಿಳೆಯರು ಸ್ನಾನ ಮಾಡುತ್ತಿದ್ದರು. ಈ ವೇಳೆ, ಅಲ್ಲಿಗೆ ಬಂದ ಅಯ್ಯಪ್ಪನ್ ಮತ್ತು ಮುತ್ತುರಾಮನ್ ಇಬ್ಬರೂ ಮಹಿಳೆಯರನ್ನು ಓಡಿಸಿದ್ದಾರೆ. ಸಾರ್ವಜನಿಕ ಹೊಂಡದಲ್ಲಿ ಕೆಳವರ್ಗದ ಜನರಿಗೆ ಸ್ನಾನ ಮಾಡಲು ಅವಕಾಶ ನೀಡದೇ ದೊಣ್ಣೆಗಳಿಂದ ಹೊಡೆದು ಓಡಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಇಬ್ಬರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಟ್ಟೆಗಳನ್ನು ಎಸೆದು ಅರೆಬೆತ್ತಲೆಯಾಗಿ ಓಡಿಸಿದರು: ಈ ಕುರಿತು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ಬಳಿಕ ಸಂತ್ರಸ್ತ ಮಹಿಳೆಯರು ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಸ್ನಾನ ಮಾಡುತ್ತಿದ್ದ ವೇಳೆ ಕಲ್ಲು ತೂರಾಟ ಮಾಡಿದ್ದಾರೆ. ಕೆರೆಯ ದಂಡೆಯ ಮೇಲೆ ಇಟ್ಟಿದ್ದ ಬಟ್ಟಗಳನ್ನು ಮುಳ್ಳಿನ ಪೊದೆಗಳಿಗೆ ಎಸೆದಿದ್ದಾರೆ. ನಂತರ ಕೆರೆಯಿಂದ ನಮ್ಮನ್ನು ಓಡಿಸಿದ್ದರು. ನಾವು ಅರೆಬೆತ್ತಲಾಗಿ ಮನೆ ಸೇರಿದ್ದೆವು ಎಂದು ಕಣ್ಣೀರಿಟ್ಟಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ತಮಿಳುನಾಡು ಅಸ್ಪೃಶ್ಯತಾ ನಿರ್ಮೂಲನಾ ಮೋರ್ಚಾ ಸಂಘಟನೆಯ ಆಡಳಿತಾಧಿಕಾರಿ ಜೀವಾನಂದಂ, ಜಾತಿಯ ದಬ್ಬಾಳಿಕೆಯಿಂದಾಗಿ ಮಹಿಳೆಯರು ಸ್ನಾನ ಮಾಡುವ ಒಳ ಉಡುಪಿನೊಂದಿಗೆ ಮನೆಗೆ ಹಿಂತಿರುಗಬೇಕಾದ ಪರಿಸ್ಥಿತಿ ಬಂದಿತ್ತು ಎಂದು ಘಟನೆಯ ವಿವರ ನೀಡಿದ್ದಾರೆ. ತಹಶೀಲ್ದಾರ್‌ಗೆ ದೂರು ನೀಡಲು ಮುಂದಾದಾಗ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಜೀವಾನಂದಂ ಇದೇ ವೇಳೆ ಮತ್ತೊಂದು ಆರೋಪ ಕೂಡಾ ಮಾಡಿದ್ದಾರೆ.

ಸಂತ್ರಸ್ತೆಯರೊಬ್ಬರ ಪತಿ ಮಾತನಾಡಿ, ’’ಪತ್ನಿ ಒಳಗಿನ ಸ್ಕರ್ಟ್‌ನೊಂದಿಗೆ ಅಳುತ್ತಾ ಮನೆಗೆ ಬಂದು ತನಗೆ ಮಾಹಿತಿ ನೀಡಿದ್ದಳು. ಈ ಘಟನೆ ಜನವರಿ 1 ರಂದು ನಡೆದಿದೆ. ಸಂಬಂಧಿಕರ ಸಹಾಯದಿಂದ ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಅರಂತಂಗಿ ಠಾಣೆಗೆ ಹೋದಾಗ ದೂರು ಸ್ವೀಕರಿಸಲು ನಿರಾಕರಿಸಿ ನಂತರ ನಾಗುಡಿ ಠಾಣೆಗೆ ತೆರಳಿ ದೂರು ನೀಡಿದೆವು‘‘ ಎಂದು ತಿಳಿಸಿದ್ದಾರೆ.

ನಗುಡಿ ಠಾಣೆಯಲ್ಲಿ ದೂರು ದಾಖಲು: ನಗುಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಅಯ್ಯಪ್ಪನ್ ಮತ್ತು ಮುತ್ತುರಾಮನ್ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ವಿಷಯ ತಿಳಿದ ಅಯ್ಯಪ್ಪನ್ ಮುತ್ತುರಾಮನ್ ಹಾಗೂ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಅಯ್ಯಪ್ಪನ್ ಮತ್ತು ಮುತ್ತುರಾಮನಿಗಾಗಿ ನಗುಡಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಪುದುಕೊಟ್ಟೈ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ನೀರಿನ ತೊಟ್ಟಿಯಲ್ಲಿ ಮಾನವ ಮಲವನ್ನು ಬೆರೆಸಿದ ಘಟನೆ ನಡೆದಿತ್ತು. ಇದಾದ ಬಳಿಕ ಜಿಲ್ಲಾಧಿಕಾರಿಗಳು ಆ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಪದ್ಧತಿಯನ್ನು ರದ್ದುಪಡಿಸಿ ಕ್ರಮ ಕೈಗೊಂಡಿದ್ದರು. ಅಲ್ಲದೇ ಪರಿಶಿಷ್ಟ ಜಾತಿಯ ಜನರನ್ನು ದೇವಾಲಯದ ಒಳಗೆ ಬಿಡುವುದಿಲ್ಲ ಎಂದು ತಿಳಿಸಿ ಜನರು ಆಡಳಿತದ ಸಹಾಯದಿಂದ ದೇವಾಲಯವನ್ನು ಪ್ರವೇಶಿಸಿದರು. ಹೀಗಿರುವಾಗ ಮತ್ತೊಂದು ಜಾತಿ ಹಿಂಸಾಚಾರದ ಘಟನೆ ಭಾರೀ ಆಘಾತವನ್ನುಂಟು ಮಾಡಿದೆ.

ಇದನ್ನೂ ಓದಿ: ಬೆಂಗಳೂರಿನ ದೇವಾಲಯದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಆರೋಪಿ ಧರ್ಮದರ್ಶಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.