ETV Bharat / bharat

ಜನವರಿ 6ರಂದು ಸುಪ್ರೀಂನಲ್ಲಿ ಸಲಿಂಗ ವಿವಾಹ ಕುರಿತ ಅರ್ಜಿಗಳ ವಿಚಾರಣೆ - ಕೇರಳ ಹೈಕೋರ್ಟ್‌

ಸಲಿಂಗ ವಿವಾಹಕ್ಕೆ ಮಾನ್ಯತೆ ಕುರಿತು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ - ಜನವರಿ 6ರಂದು ದೆಹಲಿ ಮತ್ತು ಕೇರಳ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ

sc-to-hear-plea-regarding-same-sex-marraige-on-6th-jan
ಜನವರಿ 6ರಂದು ಸುಪ್ರೀಂನಲ್ಲಿ ಸಲಿಂಗ ವಿವಾಹ ಕುರಿತ ಅರ್ಜಿಗಳ ವಿಚಾರಣೆ
author img

By

Published : Jan 3, 2023, 10:51 PM IST

ನವದೆಹಲಿ: ಸಲಿಂಗ ವಿವಾಹ ಕುರಿತ ವಿಚಾರಣೆಯನ್ನು ಜನವರಿ 6ರಂದು ಸುಪ್ರೀಂಕೋರ್ಟ್‌ ನಡೆಸಲಿದೆ. ದೆಹಲಿ ಮತ್ತು ಕೇರಳ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಅರ್ಜಿಗಳ ವಿಚಾರಣೆಗಳನ್ನು ಕೈಗೆತ್ತಿಕೊಳ್ಳುವ ಕುರಿತ ಸಹ ವಿಚಾರಣೆ ನಡೆಸುವುದಾಗಿ ಸರ್ವೋಚ್ಛ ನ್ಯಾಯಾಲಯು ಮಂಗಳವಾರ ತಿಳಿಸಿವೆ.

ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠದ ಮುಂದೆ ವಕೀಲೆ ಮೇನಕಾ ಗುರುಸ್ವಾಮಿ ಮತ್ತು ವಕೀಲ ಕರುಣಾ ನಂದಿ ಈ ವಿಷಯವನ್ನು ಪ್ರಸ್ತಾಪಿಸಿದರು. ಸಲಿಂಗ ವಿವಾಹಕ್ಕೆ ಸಂಬಂಧಿಸಿದ ಪ್ರತ್ಯೇಕ ವಿಚಾರಣೆಯು ಬಾಕಿ ಉಳಿದಿದ್ದು, ಜನವರಿ 6ರಂದು ವಿಚಾರಣೆ ನಿಗದಿಪಡಿಸಲಾಗಿದೆ. ಆದ್ದರಿಂದ ದೆಹಲಿ ಮತ್ತು ಕೇರಳ ಹೈಕೋರ್ಟ್‌ಗಳ ವರ್ಗಾವಣೆ ಅರ್ಜಿಗಳನ್ನು ಸಹ ಅಂದು ಪಟ್ಟಿ ಮಾಡಬಹುದು ಎಂದು ಕರುಣಾ ನಂದಿ ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಸಾಕ್ಷಿಯಾದ ಕೋಲ್ಕತ್ತಾ.. ದಾಂಪತ್ಯಕ್ಕೆ ಕಾಲಿಟ್ಟ ಇಬ್ಬರು ಪುರುಷರು!

ದೆಹಲಿ ಮತ್ತು ಕೇರಳದ ವಿವಿಧ ಹೈಕೋರ್ಟ್‌ಗಳಲ್ಲಿ ಇದೇ ರೀತಿಯ ಅರ್ಜಿಗಳು ಬಾಕಿ ಉಳಿದಿವೆ. ಹೀಗಾಗಿಯೇ ಸುಪ್ರೀಂಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸಬಹುದು ಎಂದು ಹೇಳಿದರು. ಇದಕ್ಕೆ ಸಿಜೆಐ ಒಪ್ಪಿಗೆ ಸೂಚಿಸಿ, ಜನವರಿ 6ರಂದು ಎಲ್ಲ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆಗೆ ಪಟ್ಟಿ ಮಾಡಿದರು. ಸಲಿಂಗ ವಿವಾಹಕ್ಕೆ ಆಗ್ರಹಿಸಿ ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ವೇಳೆ ಈ ಹಿಂದೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.

ಸಲಿಂಗ ಮದುವೆಗೆ ಒತ್ತಾಯಿಸಿದ ಅರ್ಜಿಗಳು: ಕಳೆದ 10 ವರ್ಷಗಳಿಂದ ಒಟ್ಟಿಗೆ ಇರುವ ಜೋಡಿ ಈ ತಮ್ಮ ಸಂಬಂಧವನ್ನು ವಿಶೇಷ ವಿವಾಹ ಕಾಯ್ದೆಯಡಿ ಮದುವೆ ಎಂದು ಘೋಷಿಸಬೇಕೆಂದು ಮನವಿ ಮಾಡಿದೆ. ನಮ್ಮ ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳು ಒಟ್ಟಾಗಿ ಸೇರಿ ಕಾರ್ಯಕ್ರಮ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈ ಜೋಡಿ ತಮ್ಮ ಅರ್ಜಿಯಲ್ಲಿ ತಿಳಿಸಿದೆ.

ಅಲ್ಲದೇ, ಕಳೆದ 17 ವರ್ಷಗಳಿಂದ ಒಟ್ಟಿಗೆ ಇರುವ ಮತ್ತೊಂದು ಜೋಡಿ ಸಹ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಮಕ್ಕಳನ್ನು ನಾವು ಒಟ್ಟಿಗೆ ಬೆಳೆಸುತ್ತಿದ್ದೇವೆ. ಆದರೆ, ಭಾರತದಲ್ಲಿ ಸಲಿಂಗಕ್ಕೆ ಕಾನೂನುಬದ್ಧವಾಗಿಲ್ಲದ ಕಾರಣ ಮದುವೆಯಾಗಲು ಸಾಧ್ಯವಿಲ್ಲ. ಇದರಿಂದ ಪಾಲಕರು ಹಾಗೂ ಮಕ್ಕಳಿಗೆ ಕಾನೂನು ಸಮಸ್ಯೆ ತೊಡಕು ಎದುರಿಸುವಂತೆ ಆಗಿದೆ ಎಂದು ಸುಪ್ರೀಂಗೆ ಸಲ್ಲಿಸಲಾಗಿದೆ.

ಇದನ್ನೂ ಓದಿ: ಅಮೆರಿಕ: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಮಸೂದೆಗೆ ಸೆನೆಟ್‌ ಒಪ್ಪಿಗೆ

ಅಲ್ಲದೇ, ಮತ್ತೊಂದು ಜೋಡಿ ಸಹ ಸಲಿಂಗ ಮದುವೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದೆ. ನಾವು ಇಬ್ಬರು ಭಾರತೀಯ ಪ್ರಜೆ ಮತ್ತು ಇನ್ನೊಬ್ಬರು ಅಮೆರಿಕದ ಪ್ರಜೆಯಾಗಿದ್ದೇವೆ. 2014ರ ಲ್ಲಿ ಅಮೆರಿಕಾದಲ್ಲಿ ತಮ್ಮ ಮದುವೆಯನ್ನೂ ನೋಂದಾಯಿಸಿಕೊಂಡಿವೆ. ಆದರೆ, ಭಾರತದಲ್ಲಿ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಈಗ ನಾವು ನಮ್ಮ ವಿವಾಹವನ್ನು ವಿದೇಶಿ ವಿವಾಹ ಕಾಯಿದೆ -1969ರಡಿಯಲ್ಲಿ ನೋಂದಾಯಿಸಲು ಬಯಸುತ್ತೇವೆ ಎಂದು ಈ ಜೋಡಿ ಸುಪ್ರೀಂ ಮೊರೆ ಹೋಗಿದೆ.

ಇನ್ನು, 2018ರಲ್ಲಿ ಸರ್ವೋಚ್ಚ ನ್ಯಾಯಾಲಯವು ಸೆಕ್ಷನ್ 377ಅನ್ನು ರದ್ದುಗೊಳಿಸಿತ್ತು. ಒಮ್ಮತದ ಸಲಿಂಗಕಾಮವು ಅಪರಾಧವಲ್ಲ ಮತ್ತು ಲೈಂಗಿಕ ದೃಷ್ಟಿಕೋನವು ಸ್ವಾಭಾವಿಕವಾಗಿದೆ. ಅದರ ಮೇಲೆ ಜನರಿಗೆ ಯಾವುದೇ ನಿಯಂತ್ರಣವಿಲ್ಲ ಎಂದು ತೀರ್ಪು ಕೊಟ್ಟಿತ್ತು. ಆದಾಗ್ಯೂ, ತೀರ್ಪಿನ ಆಧಾರದ ಮೇಲೆ ಸಲಿಂಗ ವಿವಾಹವನ್ನು ಸಾಧ್ಯವಿಲ್ಲ ಎಂದು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ತಿಳಿಸಿತ್ತು. ಇತ್ತೀಚೆಗೆ ರಾಜ್ಯಸಭೆಯಲ್ಲಿ ಬಿಜೆಪಿ ಸುಶೀಲ್ ಮೋದಿ ದೇಶದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬಾರದು ಎಂದು ಒತ್ತಾಯಿಸಿದ್ದರು ಎಂಬುವುದು ಗಮನಾರ್ಹ.

ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಮಾನ್ಯತೆ ಬೇಡ; ಬಿಜೆಪಿ ಸಂಸದ ಸುಶೀಲ್ ಮೋದಿ ಒತ್ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.