ETV Bharat / bharat

ಮುಖೇಶ್​ ಅಂಬಾನಿಗೆ ವಿದೇಶದಲ್ಲೂ Z+ ಭದ್ರತೆ ನೀಡಲು ಸುಪ್ರೀಂ ಸೂಚನೆ - ಭದ್ರತೆಗೆ ಮುಕೇಶ್​ರಿಂದಲೇ ಹಣ ಪಡೆಯಲು ಸೂಚನೆ

ಅಂಬಾನಿಗೆ ಝಡ್​ ಪ್ಲಸ್​ ಭದ್ರತೆ- ಸುಪ್ರೀಂಕೋರ್ಟ್​ ಸೂಚನೆ- ಗೃಹ ಸಚಿವಾಲಯದಿಂದ ಝಡ್​ ಪ್ಲಸ್​​ ಭದ್ರತೆ- ಭದ್ರತೆಗೆ ಮುಖೇಶ್​ರಿಂದಲೇ ಹಣ ಪಡೆಯಲು ಸೂಚನೆ

ಮುಖೇಶ್​ ಅಂಬಾನಿಗೆ ವಿದೇಶದಲ್ಲೂ Z+ ಭದ್ರತೆ
ಮುಖೇಶ್​ ಅಂಬಾನಿಗೆ ವಿದೇಶದಲ್ಲೂ Z+ ಭದ್ರತೆ
author img

By

Published : Mar 1, 2023, 7:07 AM IST

ನವದೆಹಲಿ: ದೇಶದ ಕೈಗಾರಿಕೋದ್ಯಮಿ, ಗಣ್ಯ ವ್ಯಕ್ತಿಗಳಾದ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅತ್ಯುನ್ನತ ಮಟ್ಟದ Z ಪ್ಲಸ್ ಭದ್ರತೆಯನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಮುಂಬೈನಲ್ಲಿರುವಾಗ ಪೊಲೀಸರು ಭದ್ರತೆ ನೀಡಿದರೆ, ವಿದೇಶದಲ್ಲಿ ಕೇಂದ್ರ ಗೃಹ ಸಚಿವಾಲಯ ಸೆಕ್ಯುರಿಟಿ ನೀಡಬೇಕು ಎಂದು ಸೂಚಿಸಿದೆ.

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಈ ಆದೇಶ ಮಾಡಿದೆ. ಮುಕೇಶ್​ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಭದ್ರತಾ ಬೆದರಿಕೆಯಿದೆ. ಹೀಗಾಗಿ ಅವರಿಗೆ ರಕ್ಷಣೆ ನೀಡಬೇಕಿದೆ. ಸರ್ಕಾರ ನೀಡುವ ಸೆಕ್ಯುರಿಟಿಗೆ ಮುಕೇಶ್ ಅವರೇ ಹಣ ಪಾವತಿಸಬೇಕು ಎಂದು ಇದೇ ವೇಳೆ ಸುಪ್ರೀಂ ಕೋರ್ಟ್​ ಪೀಠ ಹೇಳಿದೆ.

ಗೃಹ ಸಚಿವಾಲಯದಿಂದ ಭದ್ರತೆ: ಝಡ್​ ಪ್ಲಸ್​​ ಎಂಬುದು ಕೇಂದ್ರ ಗೃಹ ಸಚಿವಾಲಯ ನೀಡಬೇಕಾದ ಭದ್ರತೆಯಾಗಿದೆ. ಮುಖೇಶ್​ ಅವರ ಕುಟುಂಬದ 2 ರಿಂದ 6 ಮಂದಿಗೆ ಭದ್ರತಾ ಬೆದರಿಕೆ ಇದೆ. ಹೀಗಾಗಿ ಅವರೆಲ್ಲರಿಗೂ ದೇಶವಲ್ಲದೇ ವಿದೇಶದಲ್ಲೂ ರಕ್ಷಣೆ ನೀಡಬೇಕು. ವಿದೇಶ ಪಯಣದ ವೇಳೆ ಗೃಹ ಸಚಿವಾಲಯ ಅವರನ್ನು ರಕ್ಷಿಸಬೇಕು ಎಂದು ಕೋರ್ಟ್​ ತನ್ನ ಆದೇಶದಲ್ಲಿ ತಿಳಿಸಿದೆ.

ಭಾರತ ಅಥವಾ ವಿದೇಶದಲ್ಲಿ ಅಂಬಾನಿ ಕುಟುಂಬಕ್ಕೆ Z+ ಭದ್ರತೆ ಒದಗಿಸುವ ಸಂಪೂರ್ಣ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ. ದೇಶದ ಒಳಗೆ ಮತ್ತು ದೇಶದ ಹೊರಗೆ ಅಂಬಾನಿಗಳ ವ್ಯಾಪಾರ ಚಟುವಟಿಕೆಗಳನ್ನು ಪರಿಶೀಲಿಸಲೂ ಸುಪ್ರೀಂ ಇದೇ ವೇಳೆ ಹೇಳಿದೆ. ಭದ್ರತೆ ಒದಗಿಸುವ ಉದ್ದೇಶವು ಒಂದು ನಿರ್ದಿಷ್ಟ ಸ್ಥಳ ಅಥವಾ ಪ್ರದೇಶಕ್ಕೆ ನಿರ್ಬಂಧಿಸಿದರೆ ಅದು ಸರಿಯಲ್ಲ ಎಂದು ಕೋರ್ಟ್​ ಹೇಳಿದೆ.

ಪ್ರಕರಣವೇನು?: ಮುಖೇಶ್​ ಅಂಬಾನಿ ಕುಟುಂಬಕ್ಕೆ ಝಡ್​ ಪ್ಲಸ್​ ಭದ್ರತೆ ನೀಡುವ ಬಗ್ಗೆ ಮಾಹಿತಿ ನೀಡಲು ಕೋರಿ 2022 ರ ಜುಲೈ 22 ರಂದು ಬಿಕಾಶ್ ಸಾಹಾ ಎಂಬುವರು ತ್ರಿಪುರಾ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿವರ ನೀಡುವಂತೆ ಹೈಕೋರ್ಟ್​ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಭದ್ರತಾ ಮಾಹಿತಿ ಕೇಳಿರುವುದನ್ನು ಪ್ರಶ್ನಿಸಿ ತ್ರಿಪುರಾ ಕೋರ್ಟ್​ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿ ಸುಪ್ರೀಂ, ವಿದೇಶದಲ್ಲೂ ಭದ್ರತೆ ನೀಡುವಂತೆ ಸೂಚಿಸಿ ಆದೇಶಿಸಿದೆ. ಈ ಹಿಂದೆ ಬಿಕಾಶ್ ಸಹಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇರೆಗೆ ತ್ರಿಪುರಾ ಹೈಕೋರ್ಟ್ 2022 ರ ಮೇ 31 ಮತ್ತು ಜೂನ್ 21 ರಂದು ಎರಡು ಮಧ್ಯಂತರ ಆದೇಶಗಳನ್ನು ನೀಡಿತ್ತು. ಅಂಬಾನಿ ಮತ್ತು ಅವರ ಪತ್ನಿಗೆ ಬೆದರಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ನಿಗಾ ಇರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಮುಖೇಶ್​ ಅಂಬಾನಿ ಮಕ್ಕಳಿಗೂ ಸರ್ಕಾರಿ ಭದ್ರತೆಯನ್ನು ನೀಡಲಾಗಿದೆ.

ಓದಿ: ಡಿ. ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ರೋಹಿಣಿ ಸಿಂಧೂರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.