ಚಂದನ್ನಗರ( ಪಶ್ಚಿಮ ಬಂಗಾಳ): ಋತುಚಕ್ರದ ಸಮಸ್ಯೆಗಳು ಮತ್ತು ಅದರ ಅವಶ್ಯಕತೆ, ಅನಾವಶ್ಯಕತೆಗಳ ಬಗ್ಗೆ ಇಂದಿಗೂ ಅನೇಕ ಗ್ರಾಮದ ಮಹಿಳೆಯರಿಗೆ ಅರಿವಿಲ್ಲ. ಆರ್ಥಿಕ ಸಮಸ್ಯೆ ಕಾರಣದಿಂದ ಅಥವಾ ಭಯದಿಂದಾಗಿ ಇನ್ನು ಹಳೆಯ ಸಂಪ್ರದಾಯದಿಂದ ಅನೇಕರು ಹೊರ ಬರಲು ಸಾಧ್ಯವಾಗಿಲ್ಲ.
ಋತುಚಕ್ರದಲ್ಲಿ ಸರಿಯದ ಸುರಕ್ಷತೆವಹಿಸದಿದ್ದಲ್ಲಿ ಅದು ಗರ್ಭಕೋಶದಲ್ಲಿ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಸಂಬಂಧ ಚಂದನ್ನಗರದ ಹೋಮ್ ಟ್ಯೂಟರ್ ಆಗಿರುವ ಸುಮಂತ್ ಬಿಸ್ವಾಸ್ ರಾಜ್ಯದ ಮೂಲೆಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಕುರಿತು ಜಾಗೃತಿ ಮೂಡಿಸುತ್ತಿದ್ದು, ಮಹಿಳೆಯರಲ್ಲಿನ ಪೂರ್ವಗ್ರಹಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದಾರೆ.
ಸ್ವಂತ ಖರ್ಚಿನಲ್ಲಿ ನ್ಯಾಪ್ಕಿನ ಹಂಚಿಕೆ: ಯಾವಾಗ ಸಮಯ ಸಿಕ್ಕಾಗಲೂ ಪುರುಲಿಯಾ ದಿಂದ ಸುಂದರ್ಬನ್ಸ್ಗೆ ಭೇಟಿ ನೀಡಿ, ಮಹಿಳೆಯರಿಗೆ ಈ ವಿಚಾರ ಕುರಿತು ಅವರು ಮಾಹಿತಿ ನೀಡುತ್ತಾರೆ. ಜೊತೆಗೆ ಸ್ಯಾನಿಟರಿ ನ್ಯಾಪ್ಕಿನ್ ಕೂಡ ತಮ್ಮ ಖರ್ಚಿನಿಂದಲೇ ಹಂಚುತ್ತಿದ್ದಾರೆ. ಚಂದನ್ನಗರದ ಸುಭಾಸ್ಪಲ್ಲಿಯ ಮನೆಗೆಲಸದವರು, ಸಿಂಗೂರ್ ಸ್ಟೇಷನ್ನ ಸ್ಲಮ್ಗಳಲ್ಲಿನ ಮಹಿಳೆಯರಿಗೆ ಕಳೆದ ಎರಡೂ ವರೆ ವರ್ಷದಿಂದ ನ್ಯಾಪ್ಕಿನ್ಗಳನ್ನು ನೀಡುತ್ತಿದ್ದಾರೆ.
ಸ್ಲಮ್ಗಳನ್ನು ಮಾದರಿ ಮಾಡಬೇಕು ಎಂಬುದು ಸುಮಂತ್ ಬಿಸ್ವಾಸ್ ಇಚ್ಛೆಯಾಗಿದೆ. ಜೊತೆಗೆ ಸ್ಯಾನಿಟರಿ ನ್ಯಾಪ್ಕಿನ್ ಅತಿ ಹೆಚ್ಚು ಬಳಸಿ ಮಹಿಳೆಯರ ಆರೋಗ್ಯಕ್ಕೆ ಒತ್ತು ನೀಡಬೇಕು ಎನ್ನುವುದು ಅವರ ಗುರಿಯಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆಗೂ ಬಿಸ್ವಾಸ್ ಮನವಿ ಮಾಡಿದ್ದಾರೆ.
ಕಡಿಮೆ ದರದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಅನ್ನು ಮಹಿಳೆಯರಿಗೆ ಸಾಮೂಹಿಕವಾಗಿ ಹಂಚಿಕೆ ಮಾಡುವ ವಿಧಾನ (ರೇಷನ್ ಶಾಪ್ಗಳಲ್ಲಿ) ಆಗಬೇಕು. ಆಗ ನಾವು ಅನೇಕ ಕಾಯಿಲೆಗಳನ್ನು ತಡೆಯಬಹುದು. ಮಿಗಿಲಾಗಿ, ರೇಷನ್ ಅಂಗಡಿಗಳಲ್ಲಿ ಇದನ್ನು ನೀಡುವುದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಇರುವ ತೊಂದರೆ ನಿವಾರಣೆ ಆಗಲಿದೆ ಎನ್ನುತ್ತಾರೆ.
ತರಗತಿ ನಡೆಸುವ ಮೂಲಕ ಜಾಗೃತಿ: ಸ್ಯಾನಿಟರಿ ನ್ಯಾಪ್ಕಿನ್ ಬಗ್ಗೆ ಜಾಗೃತಿ ಮಾತ್ರವಲ್ಲದೇ, ಋತುಚಕ್ರದ ಕುರಿತು ಶಾಲೆ ಮತ್ತು ಹಳ್ಳಿಗಳಲ್ಲಿ ತರಗತಿ ನಡೆಸುವ ಮೂಲಕ ಅದರ ಬಗ್ಗೆ ಕೂಡ ಇವರು ತಿಳಿ ಹೇಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದ ಅನೇಕ ಶಾಲೆಗಳಲ್ಲಿ ಈ ನ್ಯಾಪ್ಕಿನ್ ಮಿಷಿನ್ ಅನ್ನು ಅಳವಡಿಸಲಾಗಿದೆಯಾದರೂ ಅದನ್ನು ಪುನಃ ಭರ್ತಿ ಮಾಡುವ ಕಾರ್ಯ ನಡೆಯುತ್ತಿಲ್ಲ. ಅದು ಆಗಬೇಕು ಎಂದು ತಿಳಿಸಿದ್ದಾರೆ.
ಹೂಗ್ಲಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಪಿ ಡಿಪಪ್ ಪ್ರಿಯಾ ಮಾತನಾಡಿ, ತಾರಕೇಶ್ವರದಲ್ಲಿ ಸ್ವಯಂ ಸಹಾಯ ಗುಂಪಿನ ಸಹಾಯದಿಂದಾಗಿ ಸ್ಯಾನಿಟರಿ ನ್ಯಾಪ್ಕಿನ್ ನಿರ್ಮಿಸಲಾಗುತ್ತಿದೆ. ಈ ಸಂಬಂಧ ವರ್ಷ ಪೂರ್ತಿ ಜಾಹೀರಾತು ನೀಡಲಾಗುತ್ತಿದೆ. ಮುಂದೆ ನಾವು ಸುಮಂತ್ ಬಾಬುನಂತವರ ಜೊತೆಗೆ ಕೂಡ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಜೊತೆಗೆ ರಾಜ್ಯದಲ್ಲಿ ರೇಷನ್ ಅಂಗಡಿಗಳಲ್ಲೂ ಸ್ಯಾನಿಟರಿ ನ್ಯಾಪ್ಕಿನ್ ಮಾರಾಟಕ್ಕೆ ರಾಜ್ಯಕ್ಕೆ ಮಾಹಿತಿ ನೀಡಿ, ಜಾರಿ ತರುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಶೇ 45 ರಷ್ಟು ಜನ ಸಾಮಾಜಿಕ ಕಟ್ಟುಪಾಡುಗಳಲ್ಲಿ ಬಂಧಿ: 2017ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತದ 35 ಹಳ್ಳಿಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ 45ರಷ್ಟು ತಮ್ಮ ಋತುಚಕ್ರದಲ್ಲಿ ಸಾಮಾಜಿಕ ಕಟ್ಟುಪಾಡುಗಳಿಗೆ ಒಳಗಾಗಿದ್ದಾರೆ. ಇನ್ನು 43ರಷ್ಟು ಮಹಿಳೆಯರಿಗೆ ಋತುಚಕ್ರದ ವೇಳೆ ಈ ನ್ಯಾಪ್ಕಿನ್ ಸಿಗುತ್ತಿದೆ. ಶೇ 67ರಷ್ಟು ಮಹಿಳೆರಯರಿ ನ್ಯಾಪ್ಕಿನ್ ಬಳಸಲು ಮುಂದಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ಸಂಖ್ಯೆ ಹೆಚ್ಚಳವಾಗಿದೆ. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಕೊರತೆ ಇದೆ.
ನಾನು ಕಳೆದ 12 ವರ್ಷಗಳಿಂದಾಗಿ ಈ ಬಗ್ಗೆ ಜಾಗೃತಿ ನಡೆಸುತ್ತಿದ್ದೇನೆ. ಆದರೆ ಮಹಿಳೆಯರ ಆರ್ಥಿಕ ಸ್ಥಿತಿಗೆ ಅನುಸಾರವಾಗಿ ಕೂಡ ಈ ಸ್ಯಾನಿಟರಿ ನ್ಯಾಪ್ಕಿನ್ ಬಳಕೆ ನಡೆಸುತ್ತಿದೆ. ಕುಟುಂಬ ಸದಸ್ಯರಿಗೆ ತಿಳಿಸಿ, ಅಂಗಡಿಗಳಲ್ಲಿ ಕೊಳ್ಳುವವರ ಸಂಖ್ಯೆ ಕಡಿಮೆ ಇದೆ ಎನ್ನುತ್ತಾರೆ ಸುಮಂತ್ ಬಿಸ್ವಾಸ್.
ಇದನ್ನೂ ಓದಿ: ವಿಮೆ ಹಣಕ್ಕೆ ಪತ್ನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪೀಡಿಸುತ್ತಿದ್ದ ಪತಿ: 3 ಮದುವೆಯಾಗಿ ವಂಚನೆ