ETV Bharat / bharat

'ಕರೀನಾ -ಸೈಫ್ ಮಗನ ಪೂರ್ಣ ಹೆಸರೇನು?' - 6ನೇ ಕ್ಲಾಸ್​ ಪರೀಕ್ಷೆಯಲ್ಲಿ ಹೀಗೊಂದು ಪ್ರಶ್ನೆ

ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಇತ್ತೀಚೆಗೆ ಆರನೇ ತರಗತಿಗೆ ಪರೀಕ್ಷೆಗಳು ನಡೆದಿವೆ. 'ಪ್ರಚಲಿತ ವಿದ್ಯಮಾನಗಳು' ಪ್ರಶ್ನೆ ಪತ್ರಿಕೆಯಲ್ಲಿ 'ಕರೀನಾ ಕಪೂರ್-ಸೈಫ್ ಅಲಿ ಖಾನ್ ಮಗನ ಪೂರ್ಣ ಹೆಸರೇನು?' ಎಂದು ಕೇಳಲಾಗಿದೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ..

Kareena Kapoor Saif Ali Khan son name asked in 6th class exam
ಕರೀನಾ -ಸೈಫ್
author img

By

Published : Dec 25, 2021, 2:29 PM IST

ಖಾಂದ್ವಾ (ಮಧ್ಯಪ್ರದೇಶ): ಆರನೇ ತರಗತಿ ಪರೀಕ್ಷೆಯಲ್ಲಿ ವಿಚಿತ್ರ ಹಾಗೂ ಅನವಶ್ಯಕ ಪ್ರಶ್ನೆಯೊಂದನ್ನು ಕೇಳಿದ ಮಧ್ಯಪ್ರದೇಶದ ಖಾಸಗಿ ಶಾಲೆಗೆ ನೋಟಿಸ್​ ನೀಡಲಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿ ಬಾಲಿವುಡ್​ನ ಖ್ಯಾತ​ ದಂಪತಿಯ ಮಗನ ಹೆಸರು ಕೇಳಲಾಗಿದೆ.

ಖಾಂದ್ವಾ ಜಿಲ್ಲೆಯಲ್ಲಿರುವ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್​ನಲ್ಲಿ ಇತ್ತೀಚೆಗೆ 6ನೇ ತರಗತಿಗೆ ಪರೀಕ್ಷೆಗಳು ನಡೆದಿವೆ. 'ಪ್ರಚಲಿತ ವಿದ್ಯಮಾನಗಳು' ಪ್ರಶ್ನೆ ಪತ್ರಿಕೆಯಲ್ಲಿ 'ಕರೀನಾ ಕಪೂರ್-ಸೈಫ್ ಅಲಿ ಖಾನ್ ಮಗನ ಪೂರ್ಣ ಹೆಸರೇನು?' ಎಂದು ಕೇಳಲಾಗಿದ್ದು, ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ.

ದೂರಿನ ಮೇರೆಗೆ ರಾಜ್ಯ ಶಿಕ್ಷಣ ಇಲಾಖೆ ಶಾಲಾ ಆಡಳಿತ ಮಂಡಳಿಗೆ ನೋಟಿಸ್​ ನೀಡಿದೆ. ಇನ್ನು ಪ್ರಶ್ನೆ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್​ ಆಗಿದೆ.

Taimur Ali Khan Pataudi
ಕರೀನಾ ಕಪೂರ್-ಸೈಫ್ ಅಲಿ ಖಾನ್ ಜೊತೆ ಮಗ ತೈಮೂರ್​ ಅಲಿ ಖಾನ್​ ಪಟೌಡಿ

ಪರೀಕ್ಷೆಯಲ್ಲಿ ಕೊಹ್ಲಿ ಗರ್ಲ್​ಫ್ರೆಂಡ್​ ಹೆಸರು ಕೇಳಿದ್ದ ಶಾಲೆ

2016ರಲ್ಲಿ ಮಹಾರಾಷ್ಟ್ರದ ಭಿವಂಡಿಯಲ್ಲಿನ ಹೈಸ್ಕೂಲ್​ವೊಂದರ 9ನೇ ತರಗತಿ ಪರೀಕ್ಷೆಯಲ್ಲಿ ​ಕ್ರಿಕೆಟಿಗ ವಿರಾಟ್​ ಕೊಹ್ಲಿಯ ಗರ್ಲ್​ಫ್ರೆಂಡ್ ಹೆಸರೇನು ಎಂದು ಕೇಳಲಾಗಿತ್ತು. ಇದಕ್ಕೆ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ , ದೀಪಿಕಾ ಪಡುಕೋಣೆ - ಈ ಬಾಲಿವುಡ್​ ನಟಿಯರ ಹೆಸರುಗಳನ್ನು ಆಯ್ಕೆಯಾಗಿ ಕೊಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.