ETV Bharat / bharat

ವಲಸಿಗರು & ಮೂಲ ಕಾಂಗ್ರೆಸ್ಸಿಗರ ಜಟಾಪಟಿ..! ನಿಲ್ಲದ ತಲ್ಲಣ

author img

By

Published : Jun 22, 2021, 10:53 PM IST

ಇಂದು ಜೈಪುರದಲ್ಲಿ ಪೈಲಟ್ ಬೆಂಬಲಿಗರು ಅವರ ಸಾಧನೆಯ ಪೋಸ್ಟ್ ಹಾಕಿದ್ದಾರೆ. ಇವು, 2018 ರ ಅಸೆಂಬ್ಲಿ ಚುನಾವಣೆ ವೇಳೆ ಪೈಲಟ್​​ ಪಕ್ಷಕ್ಕಾಗಿ ನಡೆಸಿದ ಹೋರಾಟಗಳನ್ನು ಪ್ರದರ್ಶಿಸುತ್ತವೆ ಎಂದು ಬರೆದಿದ್ದಾರೆ.

Sachin Pilot
Sachin Pilot

ಜೈಪುರ (ರಾಜಸ್ಥಾನ): ಸಿಎಂ ಅಶೋಕ್ ಗೆಹ್ಲೋಟ್​ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್​​ ಅವರ ಶೀತಲ ಸಮರ ಮುಂದುವರಿದಿದೆ. ಈ ಮಧ್ಯೆಯೇ ಥಾರ್ ಮರುಭೂಮಿಯಲ್ಲಿ ಹಾಕಲಾಗಿರುವ ಒಂದು ಪೋಸ್ಟರ್​​ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪೈಲಟ್ ಯಾವ ರೀತಿ ಶ್ರಮಿಸಿದರು ಅನ್ನೋ ಪೋಸ್ಟರ್​ಗಳನ್ನು ಹಾಕಲಾಗಿದೆ.

2018 ರ ಎಲೆಕ್ಷನ್​ನಲ್ಲಿ ಪಕ್ಷೇತರ ಶಾಸಕರು ಮತ್ತು ಎಸ್​​ಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದ ಬಳಿಕ ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದರು. ಇದೀಗ ನಾಳೆ ಸಭೆ ನಡೆಸಲು ಪೈಲಟ್​ ಬಣ ನಿರ್ಧರಿಸಿದೆ. ಈ ಹಿನ್ನೆಲೆ ಇಂದು ಜೈಪುರದಲ್ಲಿ ಪೈಲಟ್ ಬೆಂಬಲಿಗರು ಅವರ ಸಾಧನೆಯ ಪೋಸ್ಟ್ ಹಾಕಿದ್ದಾರೆ.

ಇವು, 2018 ರ ಅಸೆಂಬ್ಲಿ ಚುನಾವಣೆ ವೇಳೆ ಪೈಲಟ್​​ ಪಕ್ಷಕ್ಕಾಗಿ ಹೋರಾಡಿ ಹೋರಾಟಗಳನ್ನು ಪ್ರದರ್ಶಿಸುತ್ತವೆ. ಕೆಲ ದಿನಗಳ ಹಿಂದೆ ಮಾಜಿ ಬಿಎಸ್​ಪಿ ಶಾಸಕರು, ಪೈಲಟ್ ಒಬ್ಬ ದೇಶದ್ರೋಹಿ, ಅವರು ರಾಜ್ಯ ಸರ್ಕಾರವನ್ನು ಉರುಳಿಸಲು ಯತ್ನಿಸಿದವರು ಎಂದು ಆರೋಪಿಸಿದ್ದರು.

ಬಿಎಸ್​ಪಿ ರಾಜ್ಯ ಮುಖ್ಯಸ್ಥ ಭಗವಾನ್ ಸಿಂಗ್ ಮಾತನಾಡಿ, ಆಡಳಿತ ಪಕ್ಷಕ್ಕೆ ಸೇರುವ ಸಲುವಾಗಿ ಈ ಆರು ಬಿಎಸ್​ಪಿ ಶಾಸಕರು ತಮ್ಮದೇ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಇವರೇ ನಿಜವಾದ ದೇಶದ್ರೋಹಿಗಳೆಂದು ಹರಿಹಾಯ್ದಿದ್ದಾರೆ.

ಈ ಮಧ್ಯೆ ಸಚಿನ್ ಪೈಲಟ್ ಪ್ರತಿಕ್ರಿಯಿಸಿ, ನಾವು ನಮ್ಮ ಕಾರ್ಮಿಕರಿಗಾಗಿ ಹೋರಾಡುತ್ತಿದ್ದೇವೆ ಎಂದು ಹೇಳಿದರು. ಸರ್ಕಾರ ರಚಿಸಲು ಶ್ರಮಿಸಿದವರಿಗೆ ಪ್ರತಿಫಲ ನೀಡಲು ನಾವು ಬಯಸುತ್ತೇವೆ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಿ ಗೆದ್ದವರನ್ನು, ಆಡಳಿತ ಪಕ್ಷಕ್ಕೆ ಕರೆ ತಂದು ಬಹುಮಾನ ನೀಡುವುದು ನ್ಯಾಯ ಸಮ್ಮತವಲ್ಲ ಎಂದು ಹೇಳಿದ್ದಾರೆ. ಸ್ವತಂತ್ರ ಹಾಗೂ ಬಿಎಸ್​ಪಿ ಪಕ್ಷದವರು ಕಾಂಗ್ರೆಸ್​ಗೆ ಸೇರಬೇಕಾದರೆ ಏನನ್ನೂ ಬಯಸಲ್ಲ ಎಂದಿದ್ದರು. ಆದರೆ, ಈಗ್ಯಾಕೆ ತೊಂದರೆ ಕೊಡುತ್ತಿದ್ದಾರೆ ಅನ್ನೋದು ಗೊತ್ತಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ:Uttar Pradesh Politics: ಡಿಸಿಎಂ ಮೌರ್ಯ ಮನೆಗೆ ಸಿಎಂ ಯೋಗಿ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.