ನವದೆಹಲಿ: ರಷ್ಯಾ ಸೇನಾಪಡೆಗಳು ಉಕ್ರೇನ್ ರಾಜಧಾನಿ ಕೀವ್ನಿಂದ ಸ್ವಲ್ಪವೇ ದೂರದಲ್ಲಿದ್ದು, ನಗರದ ಮೇಲೆ ಭಾರಿ ಪ್ರಮಾಣದ ದಾಳಿ ಮಾಡುವ ಸಾಧ್ಯತೆ ಇದೆ. 40 ಕಿಲೋಮೀಟರ್ ದೂರದುದ್ದಕ್ಕೂ ರಷ್ಯಾ ಸಮರ ವಾಹನಗಳು ಯುದ್ಧ ಸನ್ನದ್ಧವಾಗಿ ನಿಂತಿರುವ ಸ್ಯಾಟಲೈಟ್ ಫೋಟೊಗಳು ಬಿಡುಗಡೆಗೊಂಡಿದ್ದು, ದಾಳಿಯ ಭೀತಿ ಇನ್ನಷ್ಟು ಹೆಚ್ಚಾಗಿದೆ. ಹೀಗಾಗಿ ಕೀವ್ ನಗರ ಅಪಾಯಕ್ಕೆ ಸಿಲುಕಿದೆ.
ಈ ಹಿನ್ನೆಲೆಯಲ್ಲಿ ಕೀವ್ ನಗರದಲ್ಲಿ ಇರಬೇಡಿ. ತಕ್ಷಣವೇ ನಿರ್ಗಮಿಸುವಂತೆ ಭಾರತೀಯ ರಾಯಭಾರ ಕಚೇರಿ ತನ್ನ ನಾಗರಿಕರಿಗೆ ತಿಳಿಸಿದೆ.
-
Advisory to Indians in Kyiv
— India in Ukraine (@IndiainUkraine) March 1, 2022 " class="align-text-top noRightClick twitterSection" data="
All Indian nationals including students are advised to leave Kyiv urgently today. Preferably by available trains or through any other means available.
">Advisory to Indians in Kyiv
— India in Ukraine (@IndiainUkraine) March 1, 2022
All Indian nationals including students are advised to leave Kyiv urgently today. Preferably by available trains or through any other means available.Advisory to Indians in Kyiv
— India in Ukraine (@IndiainUkraine) March 1, 2022
All Indian nationals including students are advised to leave Kyiv urgently today. Preferably by available trains or through any other means available.
ರೈಲು ಅಥವಾ ಬೇರೆ ವಾಹನಗಳಲ್ಲಾದರೂ ಸರಿ ಭಾರತೀಯ ನಾಗರಿಕರು ತಕ್ಷಣವೇ ನಿರ್ಗಮಿಸಬೇಕು ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಕೀವ್ ವಶಕ್ಕೆ ಅಂತಿಮ ಸಿದ್ಧತೆ: ರಷ್ಯಾದ ನೂರಾರು ಯುದ್ಧ ಟ್ಯಾಂಕ್ಗಳು, ಶಸ್ತ್ರಾಸ್ತ್ರ ತುಂಬಿದ ವಾಹನಗಳು ಕೀವ್ನ ವಾಯುವ್ಯ ದಿಕ್ಕಿನಲ್ಲಿ ಜಮಾವಣೆಗೊಂಡಿವೆ. ಉಕ್ರೇನ್ ರಾಜಧಾನಿಯನ್ನು ವಶಪಡಿಸಲು ರಷ್ಯಾ ಅಂತಿಮ ಸಿದ್ಧತೆ ಮಾಡಿಕೊಂಡಿದ್ದು, ಇದರ ಉಪಗ್ರಹ ಚಿತ್ರಗಳನ್ನು ಅಮೆರಿಕ ಮೂಲದ ಬಾಹ್ಯಾಕಾಶ ಸಂಸ್ಥೆಯೊಂದು ಬಿಡುಗಡೆ ಮಾಡಿದೆ.
ಉಕ್ರೇನ್ನಲ್ಲಿ ಇನ್ನೂ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಗುರುವಾರ ದಾಳಿ ಆರಂಭವಾದ ನಂತರ ಅನೇಕ ವಿದ್ಯಾರ್ಥಿಗಳು ಬಂಕರ್ಗಳಲ್ಲಿ ದಿನ ಕಳೆಯುವಂತಾಗಿದೆ. ಅಲ್ಲಿಂದಲೇ ಫೋಟೊ, ವಿಡಿಯೋ ಶೇರ್ ಮಾಡಿರುವ ವಿದ್ಯಾರ್ಥಿಗಳು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಈಗಾಗಲೇ 8,000 ಭಾರತೀಯರು ಉಕ್ರೇನ್ ತೊರೆದಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ರಕ್ಷಣೆ ಕಾರ್ಯಕ್ಕೆ ವಾಯುಪಡೆ: ಭಾರತೀಯರನ್ನು ತಾಯ್ನಾಡಿಗೆ ಕರೆಯಿಸಿಕೊಳ್ಳಲು ನಡೆಸಲಾಗುತ್ತಿರುವ 'ಆಪರೇಷನ್ ಗಂಗಾ' ಕಾರ್ಯಾಚರಣೆಯಲ್ಲಿ ಕೈಜೋಡಿಸುವಂತೆ ಭಾರತೀಯ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಉಕ್ರೇನ್ ನೆರೆದೇಶಗಳಾಗಿರುವ ಪೊಲೆಂಡ್, ರೊಮೇನಿಯಾ, ಹಂಗೇರಿ ಸೇರಿದಂತೆ ವಿವಿಧ ದೇಶಗಳಿಂದ ಭಾರತೀಯರನ್ನು ತೆರವು ಮಾಡಲಾಗುತ್ತಿದೆ.