ಮುಂಬೈ (ಮಹಾರಾಷ್ಟ್ರ): ಯುಎಸ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಹೊಸ ಸಾರ್ವಕಾಲಿಕ ಕುಸಿತ ಕಂಡಿದ್ದು, ಇದೇ ಮೊದಲ ಬಾರಿಗೆ 83 ರೂ. ಗೆ ಇಳಿದಿದೆ. ಇಂದು ಒಂದೇ ದಿನ ಡಾಲರ್ ಎದುರು ಈ ಮೌಲ್ಯ 61 ಪೈಸೆಯಷ್ಟು ಕಡಿಮೆಯಾಯಿತು.
ವಿದೇಶಿ ಬಂಡವಾಳದ ಹೊರಹರಿವು ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಡಾಲರ್ ಶಕ್ತಿ ಹೆಚ್ಚುತ್ತಿದೆ. ಇದಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಹೂಡಿಕೆದಾರರಲ್ಲಿ ಆತಂಕದ ಮನೋಭಾವ ಸ್ಥಳೀಯ ರೂಪಾಯಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಅಂತಾರಾಷ್ಟ್ರೀಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿಂದು ರೂಪಾಯಿಯು 82.32ರಿಂದ ವಾಹಿವಾಟು ಆರಂಭಿಸಿತ್ತು. ಆದರೆ, ನಂತರದ ಬೆಳವಣಿಗೆಯಲ್ಲಿ ಅಮೆರಿಕದ ಕರೆನ್ಸಿಯ ವಿರುದ್ಧ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮೌಲ್ಯ 83.01 ಕ್ಕಿಳಿಯಿತು. ಇನ್ನು ಮಂಗಳವಾರ ಈ ಮೌಲ್ಯ 10 ಪೈಸೆ ಕುಸಿದು 82.40 ರಷ್ಟು ದಾಖಲಾಗಿತ್ತು.
ಇದನ್ನೂ ಓದಿ: ಹೋಮ್ ಲೋನ್ ಬಡ್ಡಿ ಹೊರೆಯಾಗಿದ್ದರೆ ಹೀಗೆ ಮಾಡಿ.. ಭಾರ ಇಳಿಸಿಕೊಳ್ಳಿ!