ETV Bharat / bharat

ಕ್ರಿಮಿನಲ್ ಮೇಲ್ಮನವಿಗಳಲ್ಲಿ ಮೂಲ ದಾಖಲೆಗಳ ಸಾಫ್ಟ್ ಕಾಪಿ ಸೇರ್ಪಡೆಗೆ ನಿಯಮಗಳ ತಿದ್ದುಪಡಿ ಅಗತ್ಯ: ಸುಪ್ರೀಂಕೋರ್ಟ್​ - ಕ್ರಿಮಿನಲ್ ಮೇಲ್ಮನವಿಗಳಲ್ಲಿ ಮೂಲ ದಾಖಲೆ

Supreme Court Rules, 2013: ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಯನ್ನು ಒಳಗೊಂಡಿರುವ ಕ್ರಿಮಿನಲ್ ಮೇಲ್ಮನವಿಗಳಲ್ಲಿ ಮೂಲ ದಾಖಲೆಗಳ ಸಾಫ್ಟ್ ಕಾಪಿಗಳನ್ನು ಸೇರಿಸಲು ಸುಪ್ರೀಂ ಕೋರ್ಟ್ ಶಿಫಾರಸು ಮಾಡಿದ್ದು, ಈ ಕುರಿತ ನಿಯಮಗಳ ತಿದ್ದುಪಡಿ ಅಗತ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ.

Supreme Court
ಸುಪ್ರೀಂ ಕೋರ್ಟ್​
author img

By ETV Bharat Karnataka Team

Published : Nov 16, 2023, 7:31 PM IST

ನವದೆಹಲಿ: ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಯನ್ನು ಒಳಗೊಂಡಿರುವ ಕ್ರಿಮಿನಲ್ ಪ್ರಕರಣಗಳ ಮೇಲ್ಮನವಿಗಳಲ್ಲಿ ಅಗತ್ಯ ಇರುವ ಮೂಲ ದಾಖಲೆಗಳ ತ್ವರಿತ ಲಭ್ಯತೆಗಾಗಿ ಸಾಫ್ಟ್​ ಕಾಪಿಗಳನ್ನು ಸೇರಿಸಲು ನಿಯಮಗಳನ್ನು ತಿದ್ದುಪಡಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಸಂಜಯ್ ಕರೋಲ್ ಅವರನ್ನೊಳಗೊಂಡ ಪೀಠವು ಕ್ರಿಮಿನಲ್ ಮೇಲ್ಮನವಿಗಳಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿಯಮಗಳು - 2013ರ ಬಗ್ಗೆ ಉಲ್ಲೇಖಿಸಿದೆ. ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಒಳಗೊಂಡಿರುವ ಕ್ರಿಮಿನಲ್ ಮೇಲ್ಮನವಿಗಳಲ್ಲಿ ಮೂಲ ದಾಖಲೆಗಳನ್ನು ಭೌತಿಕ ಪ್ರತಿಗಳನ್ನಾಗಿ ಪ್ರಸ್ತುತ ಪಡಿಸಲು ನಿಯಮ 5ರ ಉಪ ನಿಯಮಗಳು 2 ಮತ್ತು 3ರ ಪರಾಮರ್ಶೆ ಅಗತ್ಯವಾಗಿದೆ. 'ಮೂಲ ದಾಖಲೆಗಳು' ಎಂಬ ಪದಗಳಿಗೆ ಮೊದಲು 'ಸಾಫ್ಟ್​ ಕಾಪಿ' ಪದಗಳನ್ನು ಸೇರಿಸಲು ಉಪ - ನಿಯಮ 3 ಅನ್ನು ತಿದ್ದುಪಡಿ ಮಾಡಬೇಕು. ಇದರ ಪರಿಣಾಮವಾಗಿ ಮೂಲ ದಾಖಲೆಗಳ ಇ - ಪ್ರತಿಗಳನ್ನು ಸ್ವೀಕರಿಸಲಾಗುತ್ತದೆ. ಇದು ನ್ಯಾಯಾಲಯಕ್ಕೆ ಅಂತಹ ದಾಖಲೆಗಳ ತ್ವರಿತ ಲಭ್ಯತೆ ಮತ್ತು ಹೆಚ್ಚು ಪರಿಸರ ಪ್ರಜ್ಞೆಯ ವಿಧಾನಗಳನ್ನು ಸುಗಮಗೊಳಿಸುತ್ತದೆ ಎಂದು ಪೀಠವು ನವೆಂಬರ್ 9 ರಂದು ನೀಡಿದ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಈ ನಿಯಮಗಳಿಗೆ ಅಗತ್ಯವಾದ ತಿದ್ದುಪಡಿ ಖುಲಾಸೆ ಅಥವಾ ಶಿಕ್ಷೆಯ ಆದೇಶದ ವಿರುದ್ಧ ಪ್ರಕರಣಗಳಿಗೆ ವಿಸ್ತರಿಸಲಾಗುವುದು. ದಾಖಲೆಗಳ ಅಂತಹ ಸಾಫ್ಟ್ ಕಾಪಿಯನ್ನು ಒಮ್ಮೆ ಸ್ವೀಕರಿಸಿದ ನಂತರ, ಕಕ್ಷಿದಾರರ ಪರವಾಗಿ ಹಾಜರಾಗುವ ವಕೀಲರಿಗೆ ಒದಗಿಸಲಾಗುತ್ತದೆ. ಈ ತೀರ್ಪಿನ ಪ್ರತಿಯನ್ನು ಮುಖ್ಯ ನ್ಯಾಯಮೂರ್ತಿ ಅವರ ದಯೆಯ ಪರಿಗಣನೆ ಮತ್ತು ಸೂಕ್ತ ನಿರ್ದೇಶನಗಳಿಗಾಗಿ ಅವರು ಸೂಕ್ತ ಎಂದು ಭಾವಿಸಿದರೆ, ಅವರ ಮುಂದೆ ಇದನ್ನು ಇರಿಸಲು ರಿಜಿಸ್ಟ್ರಿಗೆ ನಿರ್ದೇಶನ ನೀಡುತ್ತೇವೆ ಎಂದು ಹೇಳಿದೆ.

2003ರ ಏಪ್ರಿಲ್​ನಲ್ಲಿ ಏಳು ಮಂದಿ ಸಾವು, 11 ಜನರ ಕುರುಡುತನ ಮತ್ತು 40ಕ್ಕೂ ಹೆಚ್ಚು ಜನರಿಗೆ ಹಾನಿಯನ್ನುಂಟು ಮಾಡಿದ ವಿಷದ ಮದ್ಯ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕೇರಳ ಹೈಕೋರ್ಟ್ ತೀರ್ಪು ಎತ್ತಿಹಿಡಿಯುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಪ್ರಕರಣದಲ್ಲಿ 2010ರ ಜುಲೈ 23ರಂದು ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಜೀವ್ ಮತ್ತು ರೈ ಎಂಬುವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ವೇಳೆ, ಮೇಲ್ಮನವಿದಾರರಲ್ಲಿ ಒಬ್ಬರಾದ ಸಜೀವ್ 2023ರ ಸೆಪ್ಟೆಂಬರ್ 24ರಂದು ಮೃತಪಟ್ಟಿದ್ದಾರೆ. ಆದ್ದರಿಂದ ಅವರ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಲಾಗಿತ್ತು. ಈ ದುರಂತದಲ್ಲಿ ಈ ಆರೋಪಿಗಳ ಪಾತ್ರದ ಬಗ್ಗೆ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯವು ಏಕಕಾಲದಲ್ಲಿ ಶಿಕ್ಷೆ ಪ್ರಕಟಿಸಿದೆ. ಈ ಆದೇಶದಲ್ಲಿ ಯಾವುದೇ ಲೋಪಗಳು ಇಲ್ಲ ಹಾಗೂ ಇದರಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದು ಸುಪ್ರೀಂ ತಿಳಿಸಿದೆ.

ಇದನ್ನೂ ಓದಿ: ಶಬರಿಮಲೆ ಯಾತ್ರೆ; ಭಕ್ತರ ಹಿತದೃಷ್ಟಿಯಿಂದ ಭಾರಿ ಪೊಲೀಸ್​ ಭದ್ರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.