ನವದೆಹಲಿ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮಾಡಿರುವ ಆರೋಪ ಸೋಮವಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿತು.
ಅನಿಲ್ ದೇಶ್ಮುಖ್ 100 ಕೋಟಿ ರೂ. ವಸೂಲಿ ಮಾಡುವಂತೆ ಪೊಲೀಸ್ ಆಯುಕ್ತರಾಗಿದ್ದ ವಾಜೆ ಅವರಿಗೆ ಸೂಚಿಸಿದ್ದರು ಎಂದು ಆರೋಪಿಸಿ, ಪರಮ್ ಬೀರ್ ಸಿಂಗ್ ಸಿಎಂಗೆ ಪತ್ರ ಬರೆದಿದ್ದರು.
ಓದಿ:ಎನ್‌ಡಿಎ ಅಭ್ಯರ್ಥಿಗಳ ಅರ್ಜಿ ತಿರಸ್ಕರಿಸಿದ ಕೇರಳ ಹೈಕೋರ್ಟ್!
ಈ ವಿಷಯದ ಬಗ್ಗೆ ಇಂದು ಸಂಸತ್ ಸದಸ್ಯರಾದ ರಾವ್ನೀತ್ ಸಿಂಗ್ (ಐಎನ್‌ಸಿ), ನವನೀತ್ ರವಿ ರಾಣಾ (ಐಎನ್‌ಡಿ), ಪಿಪಿ ಚೌಧರಿ (ಬಿಜೆಪಿ) ಮತ್ತು ಪೂನಂ ಮಹಾಜನ್ (ಬಿಜೆಪಿ) ಅವರು ಮಾತನಾಡಿದರು. ಅಲ್ಲದೇ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.