ಪಾಲಕ್ಕಾಡ್(ಕೇರಳ) : ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖಂಡ ಶ್ರೀನಿವಾಸನ್(45) ಎಂಬಾತನನ್ನ ದುಷ್ಕರ್ಮಿಗಳ ಗುಂಪೊಂದು ಹತ್ಯೆ ಮಾಡಿದ್ದು, ಕೇರಳದ ಪಾಲಕ್ಕಾಡ್ನಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಆರ್ಎಸ್ಎಸ್ ಶಾರೀರಿಕ್ ಶಿಕ್ಷಣ ಪ್ರಮುಖ್ ಎಂದು ಗುರುತಿಸಲಾಗಿದೆ.
ಪಿಎಫ್ಐ ನಾಯಕ ಸುಬೇರ್(43) ಎಂಬಾತನ ಹತ್ಯೆ ಮಾಡಿದ ಕೇವಲ 24 ಗಂಟೆಯೊಳಗೆ ಈ ಘಟನೆ ನಡೆದಿದೆ. ಶ್ರೀನಿವಾಸನ್ ಪಾಲಕ್ಕಾಡ್ನಲ್ಲಿ ಎಸ್ಕೆ ಮೋಟಾರ್ಸ್ ಎಂಬ ಅಂಗಡಿ ನಡೆಸುತ್ತಿದ್ದು, ಶಾಪ್ನಲ್ಲಿ ಕುಳಿತುಕೊಂಡ ಸಂದರ್ಭದಲ್ಲಿ ಎರಡು ಬೈಕ್ಗಳಲ್ಲಿ ಬಂದ ಐವರು ಆತನ ಮೇಲೆ ದಾಳಿ ನಡೆಸಿದ್ದಾರೆ. ತಲೆ, ಕಾಲು, ಕುತ್ತಿಗೆ ಭಾಗಕ್ಕೆ ಕತ್ತಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಸಚಿವೆಯ ವಿಜಯ ಯಾತ್ರೆ.. ಟ್ರಾಫಿಕ್ ಜಾಮ್ನಿಂದಾಗಿ 8 ತಿಂಗಳ ಮಗು ಸಾವು..
ಪಾಪ್ಯುಲರ್ ಫ್ರಂಟ್ ನಾಯಕ ಸುಬೇರ್ ಎಂಬಾತನ ಕೊಲೆ ವೈಷಮ್ಯವೇ ಈ ಕೊಲೆಗೆ ಕಾರಣ ಎಂದು ಹೇಳಲಾಗ್ತಿದೆ. ಘಟನೆ ಬೆನ್ನಲ್ಲೇ ಜಿಲ್ಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದು, ಪ್ರಮುಖ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ, ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಸುಬೇರ್ ಮೇಲೆ ದಾಳಿ ನಡೆಸಲಾಗಿತ್ತು.