ETV Bharat / bharat

ಕಾಶ್ಮೀರ ಕಣಿವೆಗೆ ಪಂಡಿತರು ಶೀಘ್ರವೇ ಮರಳುತ್ತಾರೆ ಎಂದ ಭಾಗವತ್: 'ದಿ ಕಾಶ್ಮೀರ್ ಫೈಲ್ಸ್' ಬಗ್ಗೆ ಹೇಳಿದ್ದೇನು? - Kashmiri Pandits

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಮೋಹನ್ ಭಾಗವತ್, ಕಾಶ್ಮೀರಿ ಪಂಡಿತರ ನೈಜ ಚಿತ್ರಣವನ್ನು ಈ ಸಿನಿಮಾ ಬಹಿರಂಗಪಡಿಸಿದೆ. ಇವತ್ತು ಕಾಶ್ಮೀರಿ ಪಂಡಿತರ ವಲಸೆಯ ಹಿಂದಿನ ಸತ್ಯವು ಪ್ರತಿಯೊಬ್ಬ ಭಾರತೀಯನಿಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

RSS chief Mohan Bhagwat
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
author img

By

Published : Apr 3, 2022, 8:29 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ್​): 1990ರ ದಶಕದಲ್ಲಿ ಉಗ್ರರ ದಾಳಿಯಿಂದಾಗಿ ಮನೆಗಳನ್ನು ಬಿಟ್ಟು ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರು ಶೀಘ್ರದಲ್ಲೇ ಮತ್ತೆ ಕಾಶ್ಮೀರ ಕಣಿವೆಯಲ್ಲಿರುವ ತಮ್ಮ ಮನೆಗಳಿಗೆ ಮರಳುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಶ್ಮೀರಿ ಪಂಡಿತರು ತಮ್ಮ ಮನೆಗಳಿಗೆ ಹಿಂತಿರುಗುವ ದಿನ ಬಹಳ ಹತ್ತಿರದಲ್ಲಿದೆ ಎಂಬ ಭಾವನೆ ನನ್ನಲ್ಲಿದೆ. ಆ ದಿನ ಶೀಘ್ರದಲ್ಲೇ ಬರಲಿ ಎಂದು ನಾನು ಬಯಸುತ್ತೇನೆ ಎಂದು ಭಾಗವತ್ ಹೇಳಿದ್ದಾರೆ.

ನವ್ರೆಹ್ ಆಚರಣೆಯ ಕೊನೆಯ ದಿನವಾದ ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಶ್ಮೀರಿ ಹಿಂದೂ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಅವರು, ಕಾಶ್ಮೀರಿ ಪಂಡಿತರ ನೈಜ ಚಿತ್ರಣವನ್ನು ಈ ಸಿನಿಮಾ ಬಹಿರಂಗಪಡಿಸಿದೆ. ಇವತ್ತು ಕಾಶ್ಮೀರಿ ಪಂಡಿತರ ವಲಸೆಯ ಹಿಂದಿನ ಸತ್ಯ ಪ್ರತಿಯೊಬ್ಬ ಭಾರತೀಯನಿಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ, ಈ ಸಿನಿಮಾವನ್ನು ಕೆಲವರು ಬೆಂಬಲಿಸುತ್ತಿದ್ದಾರೆ, ಕೆಲವರು ಅರ್ಧಸತ್ಯ ಎನ್ನುತ್ತಿದ್ದಾರೆ.. ಆದರೆ, ಕಟು ಸತ್ಯವನ್ನು ಜಗತ್ತಿಗೆ ಚಿತ್ರವು ಪ್ರಸ್ತುತಪಡಿಸಿದೆ ಎಂದು ದೇಶದ ಸಾಮಾನ್ಯ ಜನರ ಅಭಿಪ್ರಾಯವಾಗಿದೆ. ಕಾಶ್ಮೀರಿ ಪಂಡಿತರ ವಲಸೆಯನ್ನೂ ಮಾತ್ರ ಈ ಸಿನಿಮಾ ತೆರೆದಿಟ್ಟಿಲ್ಲ. ಪ್ರತಿಯೊಬ್ಬರನ್ನೂ ಬೆಚ್ಚಿಬೀಳಿಸಿದೆ ಎಂದು ಭಾಗವತ್​ ತಿಳಿಸಿದ್ದಾರೆ.

ಪರಿಣಾಮ ಎದುರಿಸಬೇಕಾಗುತ್ತದೆ: ಕಾಶ್ಮೀರಿ ಪಂಡಿತರು ತಮ್ಮ ಸ್ವಂತ ಮನೆಗಳಿಗೆ ಹೋಗಬೇಕು. ಭವಿಷ್ಯದಲ್ಲಿ ಯಾರೂ ಕೂಡ ತಮ್ಮ ಬೇರುಗಳನ್ನು ಕಿತ್ತುಹಾಕದ ರೀತಿಯಲ್ಲಿ ಅಲ್ಲೇ ನೆಲೆಯೂರಬೇಕು. ಹೀಗಾಗಿ ತಮ್ಮ ತಾಯ್ನಾಡಿಗೆ ಮರಳುವ ಸಂಕಲ್ಪವನ್ನು ಮಾಡಬೇಕು. ಪರಿಸ್ಥಿತಿ ಶೀಘ್ರದಲ್ಲೇ ಬದಲಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಅಲ್ಲಿ ಹೋಗಿ ನೆಲೆಸಿದರೆ ಮುಂದೆ ಅವರನ್ನು ಹೊರಹೋಗುವಂತೆ ಯಾರೂ ಒತ್ತಾಯಿಸಲು ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ಇದನ್ನು ಮಾಡಲು ಪ್ರಯತ್ನಿಸಿದರೆ ಅದರ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ ಎಂಬ ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

ಇದನ್ನೂ ಓದಿ: ದರ್ಗಾದಲ್ಲಿ ಯುಗಾದಿ ಆಚರಣೆ.. ಬ್ರಾಹ್ಮಣರಿಂದ ಮುಸ್ಲಿಂರಿಗೆ ಪಂಚಾಂಗದ ವಿವರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.